
ಕಲಬುರಗಿ;ಮೇ.18: ಶರಣಬಸವ ವಿಶ್ವವಿದ್ಯಾಲಯವು ಜೂನ್ 24 ರಿಂದ “ಮಾನವಿಕ ಮತ್ತು ಸಮಾಜ ವಿಜ್ಞಾನಗಳಲ್ಲಿನ ಹೊಸ ಸಂಶೋಧನಾ ಪ್ರವೃತ್ತಿಗಳು” ಎಂಬ ವಿಷಯದ ಕುರಿತು 5 ದಿನಗಳ ರಾಷ್ಟ್ರೀಯ ವೆಬಿನಾರ್ ಆಯೋಜಿಸಲಿದ್ದು, ದೇಶದ ವಿವಿಧ ಉನ್ನತ ಶಿಕ್ಷಣ ಕೇಂದ್ರಗಳು ಮತ್ತು ವಿಶ್ವವಿದ್ಯಾಲಯಗಳ ಪ್ರಖ್ಯಾತ ಸಂಪನ್ಮೂಲ ವ್ಯಕ್ತಿಗಳು ಇಂಗ್ಲಿμï, ಕನ್ನಡ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಲಲಿತಕಲೆಗಳು ಮತ್ತು ಸಂಗೀತ ವಿಭಾಗಗಳನ್ನು ಒಳಗೊಂಡ ಐದು ದಿನಗಳ ವೆಬಿನಾರ್‍ನಲ್ಲಿ ವಿವಿಧ ವಿಷಯಗಳ ಕುರಿತು ಉಪನ್ಯಾಸಗಳನ್ನು ನೀಡಲಿದ್ದಾರೆ.
ಕನ್ನಡ ವಿಭಾಗದ ಚೇರಪರ್ಸನ್ ಪೆÇ್ರ. ಸುಮಂಗಲಾ ಎನ್. ರೆಡ್ಡಿ ಮತ್ತು ಇಂಗ್ಲಿμï ವಿಭಾಗದ ಚೇರಪರ್ಸನ್ ಪೆÇ್ರ. ಕಾವೇರಿ ಕಾಮಶೆಟ್ಟಿ ಅವರು ಕಲಬುರಗಿ ನಗರದಲ್ಲಿ ಭಾನುವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಜೂನ್ 24 ರಂದು ವೆಬಿನಾರ್‍ನ ಉದ್ಘಾಟನೆಗೊಳ್ಳಲಿದ್ದು, ನಂತರ ಪತ್ರಿಕೋದ್ಯಮದಲ್ಲಿನ ಹೊಸ ಸಂಶೋಧನಾ ಪ್ರವೃತ್ತಿಗಳು ಮತ್ತು ಕಾರ್ಯಕ್ರಮಗಳ ವರದಿ ಮತ್ತು ಪ್ರಸ್ತುತಿಯನ್ನು ಉತ್ತಮಗೊಳಿಸಲು ಅದು ಹೇಗೆ ಸಹಾಯ ಮಾಡಿದೆ ಎಂಬುದರ ಕುರಿತು ಆಯ್ದ ತಜ್ಞರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ವೆಬಿನಾರ್‍ನ ಒಂದು ವೈಶಿಷ್ಟ್ಯವೆಂದರೆ ಒಂದು ವಿಭಾಗಕ್ಕೆ ಒಂದು ದಿನವನ್ನು ಮೀಸಲಿಡಲಾಗಿದ್ದು, ಸಮ್ಮೇಳನದ ವಿಷಯ ಮತ್ತು ಉಪ ವಿಷಯಗಳ ಕುರಿತು ತಮ್ಮ ಪ್ರಬಂಧಗಳನ್ನು ಸಲ್ಲಿಸಿದ ತಜ್ಞರು, ಸಂಶೋಧನಾ ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಪ್ರಬಂಧದ ಸಾರಾಂಶವನ್ನು ಪ್ರಸ್ತುತಪಡಿಸಲು ಮತ್ತು ಭಾಗವಹಿಸುವವರೊಂದಿಗೆ ಸಂವಾದ ನಡೆಸಲು ಅವಕಾಶ ನೀಡಲಾಗುವುದು ಎಂದು ಪೆÇ್ರ. ರೆಡ್ಡಿ ಮತ್ತು ಪೆÇ್ರ. ಕಾಮಶೆಟ್ಟಿ ಹೇಳಿದರು.
ವಿಶ್ವವಿದ್ಯಾಲಯವು ಸಂಶೋಧನಾ ವಿದ್ವಾಂಸರು, ಅಧ್ಯಾಪಕರು, ತಜ್ಞರು ಮತ್ತು ವಿದ್ಯಾರ್ಥಿಗಳಿಂದ ಐದು ವಿಭಾಗಗಳ ಉಪ ವಿಷಯಗಳ ಕುರಿತು ಪ್ರಬಂಧಗಳನ್ನು ಆಹ್ವಾನಿಸಿದೆ. ನಂತರ ಈ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು ಮತ್ತು ಇದು ತಮ್ಮ ವೃತ್ತಿಪರ ವೃತ್ತಿಜೀವನದಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸುವವರಿಗೆ ಅಂಕಗಳನ್ನು ಗಳಿಸುವ ಮೂಲಕ ಸಹಾಯ ಮಾಡುತ್ತದೆ. ವಿವಿಧ ವಿಭಾಗಗಳ ಪ್ರಬಂಧಗಳ ಪ್ರಸ್ತುತಿಗಾಗಿ ಉಪ ವಿಷಯಗಳು ಈ ಕೆಳಗಿನಂತಿರುತ್ತವೆ.
ಇಂಗ್ಲಿμï ವಿಭಾಗದಲ್ಲಿ “ಪೊಸ್ಟ್ ಹ್ಯೂಮ್ಯಾನಿಜಂ ಇನ್ ಇಂಗ್ಲೀಷ ಲಿಟ್ರೇಚರ್”, “ಡಿಜಿಟಲ್ ಹ್ಯೂಮ್ಯಾನಿಟಿಸ್ ಇನ್ ಇಂಗ್ಲೀಷ ಲಿಟ್ರೇಚರ್”, “ಲಿಟ್ರೇಚರ್ ಆಂಡ್ ಸೈನ್ಸ್”, “ಎಮ್‍ರ್ಜಿಂಗ್ ಟ್ರೇಂಡ್ಸ್ ಇನ್ ಲಿಟರರಿ ಕ್ರಿಟಿಸಿಸಂ ಆಂಡ್ ಥೆಯರಿಸ್” ಎಂಬ ಉಪ ವಿಷಯಗಳ ಕುರಿತು ಪ್ರಬಂಧಗಳನ್ನು ಮಂಡಿಸಲಾಗುವುದು.
ಕನ್ನಡದ ಉಪವಿಷಯಗಳಿಗೆ ಆಹ್ವಾನಿತ ಪತ್ರಿಕೆಗಳಲ್ಲಿ “ಪ್ರಾಚೀನ ಮತ್ತು ನಡುಗನ್ನಡ ಸಾಹಿತ್ಯದಲ್ಲಿ ವ್ಯಕ್ತಗೊಂಡ ಮಾನವೀಯ ಮೌಲ್ಯಗಳು”, “ಕನ್ನಡ ಜಾನಪದ ಕಲೆಗಳ ಸಂರಕ್ಷಣೆ ಮತ್ತು ಪ್ರಸಾರದ ಸವಾಲುಗಳು”, “ಜಾಗತಿಕ ಮಟ್ಟದಲ್ಲಿ ಕನ್ನಡ ಭಾμÉ ಅಸ್ಮಿತೆಯ ಸಮಸ್ಯೆಗಳು ಮತ್ತು ಸವಾಲುಗಳು”, “ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಭಾμÉ-ಅವಕಾಶ ಮತ್ತು ಸವಾಲುಗಳು”.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪ ವಿಷಯದಡಿಯಲ್ಲಿ “ಸಂಘರ್ಷದ ಸಮಯದಲ್ಲಿ ಜವಾಬ್ದಾರಿಯುತ ವರದಿಗಾರಿಕೆಯಲ್ಲಿ ಮಾಧ್ಯಮದ ಪಾತ್ರ”, “ನಕಲಿ ಸುದ್ದಿಗಳ ಪರಿಣಾಮಕಾರಿ ಹೋರಾಟ”, ಪ್ರಜಾಪ್ರಭುತ್ವ ಮತ್ತು ಇತರ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ರಕ್ಷಿಸಲು ಪತ್ರಿಕಾ ಮತ್ತು ಪ್ರಜಾಪ್ರಭುತ್ವದ ಇತರ ಮೂರು ಸ್ತಂಭಗಳ ಪಾತ್ರ” ಮತ್ತು “ಧ್ವನಿಯಿಲ್ಲದವರ ಧ್ವನಿಯಾಗಿ ಪತ್ರಿಕೆ ಹೇಗೆ ಪರಿಣಾಮಕಾರಿ ಪಾತ್ರವನ್ನು ವಹಿಸಬಹುದು” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ಲಲಿತಕಲೆಗಳಲ್ಲಿ ಸಲ್ಲಿಸಬೇಕಾದ ಪ್ರಬಂಧಗಳ ಉಪ ವಿಷಯದಡಿಯಲ್ಲಿ “ಇಂದಿನ ನವ್ಯ ಚಿತ್ರಕಲೆ ಮತ್ತು ಸಾಂಪ್ರದಾಯಿಕ ಚಿತ್ರಕಲೆ – ಒಂದು ವಿಮರ್ಶೆ” ಮತ್ತು “ಇಂದಿನ ನವ್ಯ ಚಿತ್ರಕಲೆ ಮತ್ತು ಸಾಂಪ್ರದಾಯಿಕ ಚಿತ್ರಕಲೆ ಹಾಗೂ ಚಿತ್ರಕಲೆಯ ಕೊಡುಗೆಗಳು” ಸೇರಿವೆ.
ಸಂಗೀತ ವಿಭಾಗದ ಉಪವಿಷಯವು “ನಿತ್ಯ ಜೀವನದಲ್ಲಿ ಸಂಗೀತದ ಪಾತ್ರ”, “ಸಂಗೀತದಲ್ಲಿ ಗುರು ಶಿಷ್ಯ ಪರಂಪರೆ -ಅಂದು ಇಂದು”, “ವಿವಿಧ ದೃಷ್ಟಿ ಕೋನದಲ್ಲಿ ಸಂಗೀತದ ಹುಟ್ಟು-ಬೆಳವಣಿಗೆ”, “ಸಂಗೀತದ ಬೆಳವಣಿಗೆಯಲ್ಲಿ ಮಾಧ್ಯಮದ ಸಂಗೀತದ ಪಾತ್ರ” ಮತ್ತು “ಸಾಹಿತ್ಯ ಸಂಗೀತದ ಪಾತ್ರ” ಸೇರಿವೆ.
ಪ್ರಬಂಧಗಳನ್ನು ಭೌತಿಕವಾಗಿ ವಿಶ್ವವಿದ್ಯಾಲಯದ ಕನ್ನಡ ಅಥವಾ ಇಂಗ್ಲಿμï ವಿಭಾಗದಲ್ಲಿ ಮಂಡಿಸಬಹುದು ಅಥವಾ sharnbasvauniversitynationalco@gmail.com ಗೆ ಇಮೇಲ್ ಮುಖಾಂತರ ಕಳುಹಿಸಬಹುದು ಎಂದು ಪೆÇ್ರ.ರೆಡ್ಡಿ ಮತ್ತು ಪೆÇ್ರ.ಕಾಮಶೆಟ್ಟಿ ತಿಳಿಸಿದ್ದಾರೆ. ಪ್ರಬಂಧಗಳನ್ನು ಸಲ್ಲಿಸಲು ಜೂನ್ 05 ಕೊನೆಯ ದಿನವಾಗಿರುತ್ತದೆ.