ಮಂತ್ರಿಮಾಲ್ ನಿಂದ ೫ ಕೋಟಿ ತೆರಿಗೆ ಪಾವತಿ

ಬೆಂಗಳೂರು, ನ. ೨೮: ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಇಂದು ಬೆಳಿಗ್ಗೆಯಿಂದ ಚಿಕ್ಕಪೇಟೆಯಲ್ಲಿ ನಡೆಯುತ್ತಿರುವ ಆಸ್ತಿ ತೆರಿಗೆ ಪಾವತಿ ಪರಿಶೀಲನೆ ಕಾರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಮಂತ್ರಿ ಮಾಲ್ ನಿಂದ ಬೆಂಗಳೂರು ಕೇಂದ್ರ ನಗರಪಾಲಿಕೆಗೆ ಕಟ್ಟಬೇಕಾಗಿರುವ ಬಾಕಿ ಮೊತ್ತದಲ್ಲಿ ಇಂದು ರೂ. ೫.೦೦ ಕೋಟಿ ರೂ. ಚೆಕ್‌ನ್ನು ಮಂತ್ರಿ ಮಾಲ್ ನಿಂದ ಆಯುಕ್ತರಾದ ರಾಜೇಂದ್ರ ಚೋಳನ್ ರವರಿಗೆ ನೀಡಿದರು.


ಈ ಸಂದರ್ಭದಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಜಂಟಿ ಆಯುಕ್ತರುಗಳಾದ ಹೇಮಂತ್ ಶರಣ್, ರಂಗನಾಥ್, ಉಪ ಆಯುಕ್ತರಾದ ರಾಜು, ಕಂದಾಯ ಅಧಿಕಾರಿ ಶ್ರೀನಿವಾಸ್, ಸಹ ಕಂದಾಯ ಅಧಿಕಾರಿಗಳು ಹಾಗೂ ಕಂದಾಯ ವಿಭಾಗದ ೧೦೦ ಕ್ಕೂ ಅಧಿಕ ಸಿಬ್ಬಂದಿಗಳು ಪರಿಶೀಲನೆ ಕಾರ್ಯದಲ್ಲಿ ಹಾಜರಿದ್ದರು.