
ಗುರುಮಠಕಲ್:ಫೆ.೧: ಆಗೋಚರವಾದ ಚಲನ್ಮಾತಕ ಶಕ್ತಿ ಪರಮಾತ್ಮನ ಸ್ವರೂಪವೇ ಶ್ರೀ ಮಾತ ಸದ್ಗುರು ರೂಪರಹಿತ ಅಹಿಂಸಾ ಯೋಗೇಶ್ವರ ವೀರಧರ್ಮಜ ಮಾತೆ ಅಮ್ಮನವರು. ಸಕಲ ಜೀವರಾಶಿಗಳು ತನ್ನಂತೆ ಕಂಡು ಎಲ್ಲಾ ಜೀವ ಚರಾಚರ ಜೀವರಾಶಿಗಳಲ್ಲಿಯು ಪರಮಾತ್ಮ ಸ್ವರೂಪವನ್ನು ಕಂಡು ಇದ್ದಷ್ಟು ದಿನದಲ್ಲಿ ಸುಖ, ಶಾಂತಿ, ನೆಮ್ಮದಿ ಇಂದ ಇದ್ದು. ಸದಾ ಪರಮಾತ್ಮ ಚಿಂತನೆಮಾಡುತ್ತ, ತಮ್ಮ ದಿನನಿತ್ಯ ಕಾರ್ಯಕ್ರಮಗಳನ್ನು ಮಾಡುತ್ತ ಸಕಲ ಜೀವರಾಶಿಗಳಲ್ಲಿಯು ಪರಮಾತ್ಮನ ಸ್ವರೂಪವನ್ನು ಕಂಡು ಪರೋಪಕಾರಿಯಾಗಿ ಬಾಳ ಬೇಕೆಂದು ಸೂರ್ಯನಂದಿ ಕ್ಷೇತ್ರ (ಯಾನಗುಂದಿ) ಆಶ್ರಮದ ಅಧ್ಯಕ್ಷರು ಶ್ರೀ ಶಿವಯ್ಯ ಸ್ವಾಮಿಜಿಯವರು ನೇರೆದಿರುವ ಭಕ್ತರನ್ನು ಉದ್ದೇಶಿಸಿ ಆಶೀರ್ವಾಚನ ನೀಡಿದರು. ಗುರುಮಠಕಲ್ ತಾಲೂಕಿನ ಸುಕ್ಷೇತ್ರ ದಂತಾಪೂರ ಗ್ರಾಮದ ಶ್ರೀ ಈಶ್ವರ ದೇವಸ್ಥಾನ ಹತ್ತಿರದಲ್ಲಿರುವ, ಅಮ್ಮ ನವರ ದೇವಾಲಯದಲ್ಲಿ ಓಂ ಶ್ರೀ ಸದ್ಗುರು ರೂಪರಹಿತ ಅಹಿಂಸಾ ಯೋಗೇಶ್ವರ ವೀರಧರ್ಮಜ ಮಾತಾ ಅಮ್ಮನವರ ವಿಗ್ರಹ ಹಾಗೂ ಪಾದುಕೆ ಪ್ರತಿಷ್ಠಾಪನದ ೪ನೇ ವಾರ್ಷಿಕೋತ್ಸವದ ಪೂಜಾಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು ಮಾನವ ಜಲ್ಮದೊರೆಯುವುದು ಪೂರ್ವ ಜಲ್ಮದ ಪುಣ್ಯ, ಇದನ್ನು ಹಾಳುಮಾಡಿಕೊಳ್ಳದೆ ಸದಾಕಾಲ ಪರಮಾತ್ಮನ ಚಿಂತನೆಯಲ್ಲಿದ್ದು ಜೀವನ ಸಾರ್ಥಕತೆ ಮಾಡಿ ಕೊಳ್ಳಬೇಕೆಂದು ನೇರೆದಿರುವ ಭಕ್ತರಿಗೆ ಮನಮುಟ್ಟುವ ಹಾಗೆ ಉಪಮಾನಗಳನ್ನು ನೀಡುತ್ತ ಆಶೀರ್ವಾಚನ ನೀಡಿದರು. ಮುಂಜಾನೆ ೭-೦೦ ಗಂಟೆಯಿAದಲೆ ಗ್ರಾಮದಲ್ಲಿ ಭಕ್ತರಿಂದ ಭಜನೆ ಹಾಗೂ ವಾಧ್ಯೆ ಮೇಳಗಳಿಂದ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಹಾಗೂ ದೇವಾಲಯದಲ್ಲಿ ಗಣಪತಿ ಪೂಜಾ, ಧ್ವಜಾರೋಹಣ, ಗುರುಕಳುಷ ಸ್ಥಾಪನೆ, ಗಾಯತ್ರಿ ಹೋಮ, ನವಗ್ರಹ ಪೂಜಾ, ದೀಪಾರಾಧನ, ಗುರುಪಾಧುಕ ಪೂಜಾ, ಮಹಾಮಂಗಳಾರತಿ ಕಾರ್ಯಕ್ರಮಗಳು ಭಕ್ತರ ಸಮೂಖದಲ್ಲಿ ಬಹು ವಿಜ್ರಂಭಣೆಯಿAದ ಜರುಗಿದವು. ವೇಧಿಕೆಯ ಮೇಲೆ ಭಕ್ತರು ಅಮ್ಮ ನವರ ವಿಚಾರಗಳನ್ನು ಹಾಗೂ ಅಮ್ಮನವರ ಆರ್ಶೀವಾದ ಪಡೆದ ಭಕ್ತರು, ಭಕ್ತರ ಸಮ್ಮುಖದಲ್ಲಿ ತತ್ವ ವಿಚಾರಗಳನ್ನು ಹಂಚಿಕೊAಡರು. ತದನಂತರ ಮಹಾಮಂಗಳಾರತಿ ಅಮ್ಮ ನವರಿಗೆ ನೀಡಿ, ತೀರ್ಥ, ಮಹಾಪ್ರಸಾದ ಸ್ವೀಕರಿಸಿದರು. ಇಂತಹ ಭಕ್ತಿಯ ಕಾರ್ಯಕ್ರಮದಲ್ಲಿ ದಂತಾಪೂರ ಗ್ರಾಮದ ಸಮಸ್ತ ಭಕ್ತರು, ಶಿವಭಕ್ತರು, ಗ್ರಾಮದ ಹಿರಿಯರು, ಜನಪ್ರತಿನಿಧಿನಗಳು, ರ?ಬಾಂದವರು ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಕ್ತಿಯ ಕಾರ್ಯಕ್ರಮವನ್ನು ಯಶಸ್ವಿಗಳಿಸಿ ಅಮ್ಮನವರ ಕೃಪೆಗೆ ಪಾತ್ರರಾದರು.






















