ಜಮಖಂಡಿ:ಸೆ.27:ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ವ್ಯಾಪ್ತಿಯಲ್ಲಿ ಹೊರರಾಜ್ಯದ ವಾಹನಗಳು ಸ್ಥರವಾಗಿ ರಾಜ್ಯದಲ್ಲಿ ಓಡಾಡುತಿದ್ದು ಅಂತಹ ವಾಹನಗಳನ್ನು ಗುರುತಿಸಿ ಅವುಗಳ ಮೇಲೆ ದೂರು ದಾಖಲಿಸಲಾಗುತ್ತಿದೆ ಈ ಕಾರ್ಯಚರಣೆ ನಿರಂತರವಾಗಿ ನಡೆಯುತ್ತದೆ ಎಂದು ಸಾರಿಗೆ ಇಲಾಖೆ ಅಪರ ಆಯುಕ್ತ ಕೆ.ಟಿ.ಹಾಲಸ್ವಾಮಿ ಹೇಳಿದರು.
ಸ್ಥಳೀಯ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯ ಆವರಣದಲ್ಲಿ ಹೊರ ರಾಜ್ಯಗಳ ವಾನಹ ತಪಾಸಣೆ ನಡೆಸಿ ಮಾತನಾಡಿದ ಅವರು ಪ್ರಸಕ್ತವಾಗಿ ಹೊರ ರಾಜ್ಯದ ವಾಹನಗಳು ರಾಜ್ಯದಲ್ಲಿ ಹೆಚ್ಚಾಗಿ ಓಡಾಡುತ್ತಿವೆ ಆದರೆ ತೆರಿಗೆ ಮಾತ್ರ ಬೇರೆ ರಾಜ್ಯದ್ದಾಗಿದ್ದು ಅಂತಹ ವಾಹನಗಳನ್ನು ಗುರುತಿಸಿ ದೂರು ದಾಖಲಿಸಿ ತೆರಿಗೆ ತುಂಬವುವ ಕೆಲಸವನ್ನು ಮಾಡಲಾಗುವದು ಎಂದರು.
ಪ್ರಸಕ್ತವಾಗಿ ಹೊರರಾಜ್ಯದ 45 ವಾಗನಗಳನ್ನ ಜಪ್ತಿ ಮಾಡಿ 73 ವಾಹನಗಳ ಮೇಲೆ ದೂರು ದಾಖಲಿಸಿದ್ದು ಸುಮಾರು 3.73 ಲಕ್ಷ ರೂಗಳ ತೆರಿಗೆಯನ್ನು ವಸೂಲಾತಿ ಮಾಡಲಾಗಿದೆ. ಹೊರ ರಾಜ್ಯದ ವಾಹನಗಳು ಅನಧಿಕೃತವಾಗಿ ರಾಜ್ಯದಲ್ಲಿ ಓಡಾಡುತ್ತಿದ್ದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದರು.
ರಾಜ್ಯದ ನಿವಾಸಿಗಳು ತೆರೆಗೆ ಉಳಿತಾಯ ಮಾಡುವ ಉದ್ದೇಶದಿಂದ ಕಡಿಮೆ ತೆರಿಗೆ ಇದ್ದ ರಾಜ್ಯಗಳಿಂದ ವಾಹನ ಖರೀಧಿ ಮಾಡಿ ಅಲ್ಲಿಯ ಸಾರಿಗೆ ಇಲಾಖೆಯಿಂದ ವಾಹನ ನೋಂದಣಿಯನ್ನು ಮಾಡಿಸಿಕೊಂಡು ಬರುತ್ತಾರೆ. ಅದರಿಂದ ರಾಜ್ಯದ ಆದಾಯವು ಕುಂಠಿತವಾಗುತ್ತದೆ. ಅದಕ್ಕಾಗಿ ಹೊರ ರಾಜ್ಯದ ವಾಹನಗಳ ತಪಾಸಣೆಗಾಗಿ ವಿಶೇಷ ತಪಾಸಣಾ ಕಾರ್ಯಾಚರಣೆ ತಂಡವನ್ನು ರಚನೆ ಮಾಡಿ ಬುದುವಾರ ಮತ್ತು ಗುರುವಾರ ವಿಷೇಶವಾಗಿ ಪರಿಶೀಲನೆ ಮಾಡಿ ವಾನಹ ಜಪ್ತಿ ಮಾಡುತ್ತಿದ್ದೇವೆ. ಎರಡು ವಿಭಾಗದಲ್ಲಿ ಸುಮಾರು 105 ವಾಹನಗಳನ್ನು ಜಪ್ತಿ ಮಾಡಿ ಅಂದಾಜು 1 ಕೋಟಿ ರೂಗಳ ವರೆಗೆ ತೆರಿಗೆ ವಸೂಲಿ ಆಗಿದೆ ಇನ್ನೂ ನಾವು ಹೆಚ್ಚಿಗೆ ಪ್ರಯತ್ನ ಮಾಡಿದರೆ 4 ರಿಂದ 5 ಕೋಟಿ ವರೆಗು ವಸೂಲಿ ಆಗಬಹುದು ಎಂದರು.
ಹೊರರಾಜ್ಯದಲ್ಲಿ ನೋಂದಾಯಿತ ವಾಹನಗಳನ್ನು ರಾಜ್ಯದಲ್ಲಿ ಒಂದು ವರ್ಷ ಅಥವಾ ಅದಕ್ಕು ಕಡಿಮೆ ಅವಧಿಯಲ್ಲಿ ಸಾರಿಗೆ ಇಲಾಖೆಯಿಂದ ಮರುನೋಂದಣಿ ಅಗತ್ಯವಾಗಿದೆ. ಇಲ್ಲದಿದ್ದರೆ ಇಲಾಖೆಯ ಅಧಿಕರಿಗಳು ಅಂತಹ ವಾಹನಗಳನ್ನು ಗುರುತಿಸಿ ದೂರು ದಾಖಲಿಸಿಕೊಂಡು ವಾಹನವನ್ನು ವಶಪಡಿದಿಕೊಳ್ಳುವ ಕ್ರಮಕ್ಕೆ ಮುಂದಗಬೇಕಾಗುತ್ತದೆ. ವಾಹನ ಮಾಲಿಕರು ಮದ್ಯವರ್ತಿಗಳಿಂದ ನೊಂದಣೆ ಮಾಡಿಸದೆ ನೇರವಾಗಿ ನಮ್ಮ ಕಚೇರಿಗೆ ಬಂದರೆ ಯಾವರೀತಿ ನೋಂದಣಿ ಮಾಡಿಸಿದಲ್ಲಿ ಯಾವುದೆ ತೊಂದರೆಯಿರುವದಿಲ್ಲ ಎಂದು ಹೇಳಿದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಯರಾಮ ನಾಯಿಕ, ಮೋಟಾರ ವಾಹನ ನೀರಿಕ್ಷಕ ಶಿವಾನಂದ ಕಾರಜೋಳ, ಭಾಗ್ಯಶ್ರೀ ಕಟ್ಟಿಮನಿ ಇದ್ದರು























