ಬೆಂಗಳೂರು, ಆ. ೧೧- ದೇಶದಲ್ಲೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಾಫ್ಟ್‌ವೇರ್ ರಫ್ತು ಮಾಡುವ ಕೀರ್ತಿ ಕರ್ನಾಟಕ ರಾಜ್ಯವಾಗಿದ್ದು, ಶೇ. ೪೪ ರಷ್ಟು ಸಾಫ್ಟ್‌ವೇರ್ ಗಳನ್ನು ರಫ್ತು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾiಯ್ಯ ಹೇಳಿದರು.
ಮಾಹಿತಿ ತಂತ್ರಜ್ಞಾನ ವಲಯದಲ್ಲೇ ರಾಜ್ಯದ ಆರ್ಥಿಕ ಪಾಲು ಶೇ. ೨೬ರಷ್ಟಿದೆ. ಈ ಮೂಲಕ ೮೭೫ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಸಾಮರ್ಥ್ಯ ಹೊಂದಿದೆ. ಇದು ದೇಶದ ಶೇ. ೩೦ ರಷ್ಟು ಪಾಲನ್ನು ಕರ್ನಾಟಕದಿಂದಲ್ಲೇ ನಿರ್ವಹಿಸಲಾಗುತ್ತದೆ ಎಂದು ಹೇಳಿದರು.
ನ. ೧೮ ರಿಂದ ೨೦ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಶೃಂಗ ೨೦೨೫ ರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ೧೦೦ಕ್ಕೂ ಹೆಚ್ಚು ಕಂಪನಿಗಳ ಸಿಓಗಳ ಜೊತೆ ಉಪಾಹಾರ ಕೂಟದ ಜೊತೆಯಲ್ಲಿ ಮಾತನಾಡಿದ ಅವರು ೨೦೨೯ರ ವೇಳೆಗೆ ಇನ್ನು ೫೦೦ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಸ್ಥಾಪಿಸು ಗುರಿ ಹೊಂದಿದ್ದೇವೆ.
ಈ ಮೂಲಕ ಇದ್ದರಿಂದಾಗಿ ಮೂರುವರೆ ಲಕ್ಷ ಉದ್ಯೋಗಿಗಳು ಮತ್ತು ೫೦ ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ಪ್ರಗತಿ ಸೃಷ್ಟಿಯಾಗಲಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಭಾಗಗಳಲ್ಲಿ ಮಾಹಿತಿ ತಂತ್ರಜ್ಞಾನ ವಲಯಗಳನ್ನು ಸ್ಥಾಪಿಸುವುದಾಗಿ ಹೇಳಿದರು.
ಕೃತಕ ಬುದ್ಧಿಮತ್ತೆಯಲ್ಲಿ ಇಡೀ ವಿಶ್ವದಲ್ಲೇ ಬೆಂಗಳೂರು ೫ನೇ ಸ್ಥಾನದಲ್ಲಿದೆ. ಈ ಮೂಲಕ ಭಾರತ ಶೇ ೫೦ ರಷ್ಟು ಎಐ ಪ್ರತಿಭೆಯನ್ನು ರಾಜ್ಯದಿಂದಲ್ಲೇ ಆಗುತ್ತಿದೆ. ಐಐಟಿ ಬೆಂಬಲದ ಮೂಲಕ ಸ್ಟಾಟಫ್ ರೈಲುಗಳ ವೃತ್ತಿ ಪರತೆ ಹಾಗೂ ಸುಧಾರಿತ ಸಂಶೋಧನೆ ಗಮನಹರಿಸಿದ್ದೇವೆ. ಇದರ ಜೊತೆಗೆ ಕೃತಕ ಬುದ್ಧಿಮತ್ತೆಗೆ ಮೂಲಸೌಲಭ್ಯ ಸೌಕರ್ಯ ಕಲ್ಪಿಸುವ ಮೂಲಕ ಹೊಸ ಪ್ರತಿಭೆಗಳತ್ತ ಬೆಳಕು ಚೆಲ್ಲಲು ಸರ್ಕಾರ ಮುಂದಾಗಿದೆ ಎಂದರು.



























