420 ಶಾಲಾ ಮಕ್ಕಳು ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗಿ

ಸೇಡಂ, ಜೂ,21: ತಾಲೂಕಿನ ಬೆನಕನಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿಂದು 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ರೀ ಫೌಂಡೇಶನ್ ಟ್ರಸ್ಟ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಆರೋಗ್ಯ ಇಲಾಖೆ ಕೊಡ್ಲಾ ಇವರ ಸಂಯುಕ್ತ ಆಶ್ರಯದಲ್ಲಿ 420 ಶಾಲಾ ಮಕ್ಕಳು ವಿಶೇಷ ಯೋಗ ಶಿಬಿರದಲ್ಲಿ ಭಾಗವಹಿಸಿ ವಿವಿಧ ಆಸನಗಳ ಅಭ್ಯಾಸ ಮಾಡಿದರು.ಈ ವೇಳೆಯಲ್ಲಿ ಶಿಬಿರದಲ್ಲಿ ಶ್ರೀ ಫೌಂಡೇಶನ್ ಟ್ರಸ್ಟ್ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಶಾಲೆಯ ಸಿಬ್ಬಂದಿವರ್ಗ ಹಾಗೂ ಸಿಡಿಎಂಸಿ ಭಾಗವಹಿಸಿರುವದರ ಜೊತೆಗೆ ಶ್ರೀ ಸಿಮೆಂಟ್ ಕಾರ್ಖಾನೆ ವತಿಯಿಂದ ಈ ಶಿಬಿರದ ಆಯೋಜನೆಗೆ ಸಹಕಾರ ನೀಡಿದರು.