ವಾಗ್ದರಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ ವಿಸ್ತರಣೆಗೆ ೪೦೦ಕೋಟಿ ಪ್ರಸ್ತಾವನೆ

ಆಳಂದ:ಜ.೩: ತೀರಾ ಇಕ್ಕಟ್ಟಿನಿಂದಾಗಿ ಕೂಡಿ ಸಂಚಾರಕ್ಕೆ ಸಂಚಕಾರವಾಗಿ ಪರಿಣಮಿಸಿರುವ ವಾಗ್ದರಿ ರಿಬ್ಬನಪಲ್ಲಿ ದ್ವಿಪಥ ರಾಜ್ಯ ಹೆದ್ದಾರಿ ಎರಡೂ ಬದಿಗೆ ತಲಾ ಒಂದುವರೆ ಮೀಟರ್ ವಿಸ್ತರಣೆ ಕೈಗೊಳ್ಳಲು ಎಚ್‌ಕೆಡಿಬಿ ೨೦೦ ಕೋಟಿ ಅನುದಾನ ಹಾಗೂ ರಾಜ್ಯ ಸರ್ಕಾರದಿಂದ ೨೦೦ ಸೇರಿ ಒಟ್ಟು ೪೦೦ ಕೋಟಿ ರೂಪಾಯಿ ಬೇಡಿಕೆಯ ಪ್ರಸ್ತಾವನೆ ರಾಜ್ಯ ಬಜೇಟನಲ್ಲಿ ಅಂಗೀಕಾರಕ್ಕೆ ಸೇರ್ಪಡೆಗೆ ಕಳುಹಿಸಲಾಗಿದೆ ಎಂದು ರಾಜ್ಯದ ನೀತಿ ಮತ್ತು ಆಯೋಗದ ಉಪಾಧ್ಯಕ್ಷರಾಗಿರುವ ಶಾಸಕ ಬಿ.ಆರ್. ಪಾಟೀಲ ಅವರು ತಿಳಿಸಿದ್ದಾರೆ.
ಕುರಿತು ಬೆಂಗಳೂರಿನ ವಿಕಾಸಸೌಧದಲ್ಲಿ ಈಚೆಗೆ ಮಹತ್ವದ ಚರ್ಚೆ ನಡೆಯಿತು. ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಆಳಂದ್ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಸೇರಿದಂತೆ ಸಂಬAಧಿತ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಸದ್ಯ ಈ ಹೆದ್ದಾರಿ ಏಳು ಮೀಟರ್ ಅಗಲದಿಂದ ಕೂಡಿದ್ದು ಇನ್ನೂ ಮೂರು ಮೀಟರ್ ಅಗಲ ಕೈಗೊಳ್ಳುವುದು ಅಗತ್ಯವಾಗಿದೆ. ಎರಡೂ ಬದಿಗೆ ಒಂದುವರೆ ಮೀಟರ್‌ನಂತೆ ಒಟ್ಟು ಮೂರು ಮೀಟರ್ ಅಗಲದ ಅವಶ್ಯಕತೆ ಇದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು ಎಂದರು.
ಕಲ್ಯಾಣ ಕರ್ನಾಟಕದಿಂದ ಮುಖ್ಯವಾಗಿ ಮಹಾರಾಷ್ಟçಕ್ಕೆ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಗುರಿಯೊಂದಿಗೆ ಆಳಂದ್‌ನಿAದ ಕಲಬುರ್ಗಿ ವರೆಗೆ ೪೦ ಕಿ.ಮೀ. ಹಾಗೂ ಆಳಂದ್‌ನಿAದ ವಾಗ್ದರಿ ವರೆಗೆ ಸುಮಾರು ೨೬ ಕಿ.ಮೀ. ಒಟ್ಟು ೬೪ ಕಿ.ಮೀ. ರಾಜ್ಯ ಹೆದ್ದಾರಿ-೧೦ ಅನ್ನು ದ್ವಿಪಥದ ರಸ್ತೆಯಾಗಿದ್ದರು ದ್ವಿಮುಖ ರಸ್ತೆ ಸಂಚಾರಕ್ಕೆ ಅಡಚಿಣಿಯಾಗಿ ಅಪಘಾತಗಳು ಸಂಭಿಸತೊಡಗಿವೆ. ಸದ್ಯಕ್ಕೆ ಇದರ ವಿಸ್ತರಣೆ ಅಗತ್ಯವಾಗಿದೆ ಎಂದು ಶಾಸಕ ಪಾಟೀಲರು ಸಚಿವರ ಗಮನಕ್ಕೆ ತಂದು ಚರ್ಚಿಸಿದರು.
ಮಹಾರಾಷ್ಟ್ರ ಗಡಿಯಿಂದ ಆಳಂದ್, ಕಲಬುರ್ಗಿ, ಇದರ ಜೊತೆಯಲ್ಲೇ ಇನ್ನೂಳಿದ ಭಾಗದ ಹೆದ್ದಾರಿಯನ್ನು, ಸೇಡಂ ಮಾರ್ಗವಾಗಿ ಆಂಧ್ರಪ್ರದೇಶ ಗಡಿಯವರೆಗೆ ಸುಸಂಪರ್ಕ ಸಾಧಿಸುವ ಈ ರಾಜ್ಯ ಹೆದ್ದಾರಿ-೧೦ ಈಗಾಗಲೇ ದೀಪದರಸ್ತಿಯಾಗಿದ್ದರೂ, ದಟ್ಟಣೆಯಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ವಾಗ್ದಾರಿ-ರಿಬ್ಬನ್‌ಪಳ್ಳಿ ಮಧ್ಯದ ಈ ಮಾರ್ಗದಲ್ಲಿ ವಾಹನಗಳ ದಟ್ಟಣೆ ತೀವ್ರವಾಗಿದ್ದು, ಈಗಾಗಲೇ ೩೦ ವರ್ಷಗಳ ಕಾಲ ಬಿಒಟಿ (ಬಿಲ್ಡ್-ಓಪರೇಟ್-ಟ್ರಾನ್ಸ್ಫರ್)ಗೆ ನೀಡಲ್ಪಟ್ಟಿದ್ದ ಈ ರಸ್ತೆಯಲ್ಲಿ ಟೋಲ್ ಸಂಗ್ರಹದಿAದ ಸಂಚಾರ ನಡೆಯುತ್ತಿದೆ. ಇಕ್ಕಟ್ಟಿನ ಹೆದ್ದಾರಿಯಿಂದಾಗಿ ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಯನ್ನು ಸಭೆಯಲ್ಲಿ ಶಾಸಕರು ಪ್ರಸ್ತಾಪಿಸಿದ್ದಾರೆ.
ಅಲ್ಲದೆ, “ವಾಗ್ದಾರಿ-ರಿಬ್ಬನ್‌ಪಳ್ಳಿ ಹೆದ್ದಾರಿ ದೀಪದರಸ್ತಿಯಾಗಿದ್ದರೂ, ದಟ್ಟಣೆಯಿಂದ ಅಪಘಾತಗಳು ಸಂಭವಿಸುತ್ತೇವೆ ಹೆದ್ದಾರಿಯ ಅಗಲೀಕರಣ ಮಾತ್ರ ಸಂಚಾರ ಸುಗಮಗೊಳ್ಳುತ್ತದೆ. ಇದಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಸಚಿವರ ಗಮನ ಸೆಳೆದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಈ ಬೇಡಿಕೆಗೆ ಸಮರ್ಥನೆ ನೀಡಿ, “ಕಲ್ಯಾಣ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಈ ರಸ್ತೆ ಮುಖ್ಯ. ದಟ್ಟಣೆ ನಿಯಂತ್ರಣಕ್ಕಾಗಿ ತಮ್ಮ ತ್ವರಿತ ಕ್ರಮ ಆಗಬೇಕು” ಎಂದು ಅಭಿಪ್ರಾಯ ಮಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, “ಈ ಕಾಮಗಾರಿಯಿಂದ ವ್ಯಾಪಾರ-ವಾಣಿಜ್ಯ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹೊಸ ಅನುಕೂಲ ನೀಡಲು ಸಾಧ್ಯ. ಬೇಡಿಕೆಯನ್ನು ಮನಗೊಂಡು ಶೀಘ್ರ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಬೇಡಿಕೆಯ ಅನುದಾನವನ್ನು ಬರುವ ಬಜೆಟನಲ್ಲಿ ಸೇರ್ಪಡೆಗೊಳಿಸಿ ಕಾಮಗಾರಿ ಶೀಘ್ರ ಆರಂಭವಾಗುವAತೆ ಖಚಿತಪಡಿಸುತ್ತೇನೆ” ಎಂದು ಹೇಳಿದ ಅವರು, ಹಾಜರಿದ್ದ ಅಧಿಕಾರಿಗಳು ಮುಂದಿನ ಯೋಜನೆ ರೂಪರೇಖೆಗಳನ್ನು ತಯಾರಿಸುವಂತೆ ಸೂಚಿಸಿದ್ದಾರೆ.
ಈ ದ್ವಿಪಥ ರಸ್ತೆಯಿಂದ ಆಳಂದ್ ತಾಲೂಕಿನ ಗಡಿಭಾಗದ ವಾಗ್ದಾರಿ-ರಿಬ್ಬನ್‌ಪಳ್ಳಿ ಮಾರ್ಗದ ಸಂಪರ್ಕ ಬಲಗೊಳ್ಳುವ ಜೊತೆಗೆ, ಸ್ಥಳೀಯರ ಆರ್ಥಿಕ ಚಟುವಟಿಕೆಗಳು ಉತ್ತೇಜನ ಹೊಂದುವ ನಿರೀಕ್ಷೆಯಿದೆ. ಶಾಸಕ ಬಿ.ಆರ್. ಪಾಟೀಲ್ ಅವರು ಈ ಬೇಡಿಕೆಯನ್ನು ದೀರ್ಘಕಾಲದಿಂದ ಮುಂದಾಲೋಚನೆಯೊAದಿಗೆ ಎತ್ತಿ ಹಿಡಿದು ಬಂದಿದ್ದು, ಈ ಸಭೆಯಿಂದ ಯೋಜನೆಗೆ ಹಸಿರು ಸಿಗ್ನಲ್ ಸಿಗುವ ಸಾಧ್ಯತೆಯಿದೆ.