
ಬೆಂಗಳೂರು.ಡಿ13:- ಬೆಂಗಳೂರಿನ ಪ್ರತಿಷ್ಠಿತ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ನಲ್ಲಿ 40ನೇ ವಾರ್ಷಿಕ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ ಸಮ್ಮಿಲನ 2025 ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಯೋಜಿಸಲಾಯಿತು.
ಕಾರ್ಯಕ್ರಮದ ಗೌರವ ಅತಿಥಿ , ವೀನಾ ಶ್ರೀಗೋಪಾಲ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ. ಶ್ರೀನಿವಾಸ ರಾಜು, ಅಧ್ಯಕ್ಷರು ವಹಿಸಿದ್ದರು. ಸಂಸ್ಥೆಯ ಸ್ಥಾಪಕ ಟ್ರಸ್ಟಿ ಹಾಗೂ ಅಕಾಡೆಮಿಕ್ ಸಮಿತಿ ಅಧ್ಯಕ್ಷ ಕೆ.ವಿ. ಶೇಖರ್ ರಾಜು ಮತ್ತು ಟ್ರಸ್ಟ್ನ ಮಾನ್ಯ ಸದಸ್ಯರಾದ ಎನ್.ಜಿ. ರಾಜು, ಡಾ. ತಿಪ್ಪೇಸ್ವಾಮಿ ಎಂ.ಎನ್., ಪ್ರಾಂಶುಪಾಲರು, ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, Siಡಿ ಒಗಿIಖಿ ನಲ್ಲಿ ರೂಪುಗೊಂಡ ಅನೇಕ ಪ್ರತಿಭೆಗಳ ಜಾಗತಿಕ ಮಟ್ಟದ ವೃತ್ತಿ ಸಾಧನೆಗಳನ್ನು ಹೆಮ್ಮೆಯಿಂದ ಕೊಂಡಾಡಿದರು. ಡಾ. ತಿಪ್ಪೇಸ್ವಾಮಿ ಎಂ.ಎನ್., ಪ್ರಾಂಶುಪಾಲರು, ತಮ್ಮ ಸ್ವಾಗತ ಭಾಷಣದಲ್ಲಿ ಕಾಲೇಜಿನ ಶೈಕ್ಷಣಿಕ ಪ್ರಗತಿ, ಸಂಶೋಧನಾ ಸಾಧನೆಗಳು, ನವೀನ ತಾಂತ್ರಿಕ ಉಪಕ್ರಮಗಳು ಹಾಗೂ ಭವಿಷ್ಯದ ಗುರಿಗಳನ್ನು ವಿವರಿಸಿದರು. ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳಿಕೆ ಅತ್ಯಂತ ಅಗತ್ಯವೆಂದು ಅವರು ವಿಶೇಷವಾಗಿ ಒತ್ತಿಹೇಳಿದರು. ಈ ವರ್ಷದ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ಗೌರವ ಅತಿಥಿ ವೀನಾ ಗೋಪಾಲ್, ಅವರು ನೀಡಿದ ವಿಶೇಷ ಉಪನ್ಯಾಸ ಎಲ್ಲರ ಗಮನ ಸೆಳೆದಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು,ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಕೇವಲ ಉದ್ಯೋಗ ಅವಕಾಶವಲ್ಲ, ಅದು ಸಮಸ್ಯೆ ಪರಿಹಾರ, ಮಾನವೀಯ ಮೌಲ್ಯ ಮತ್ತು ಜವಾಬ್ದಾರಿಯೊಂದಿಗೆ ಬಳಸಬೇಕಾದ ಶಕ್ತಿ. ಭವಿಷ್ಯದ ಎಂಜಿನಿಯರ್ಗಳು ತಾಂತ್ರಿಕ ಜ್ಞಾನಕ್ಕೆ ಜೊತೆಗೆ ವಿಮರ್ಶಾತ್ಮಕ ಚಿಂತನೆ, ನಿರಂತರ ಕಲಿಕೆ ಮತ್ತು ನೈತಿಕತೆಗಳನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

























