
ಕಲಬುರಗಿ,ಮೇ.26-ಇಲ್ಲಿನ ವಲಯ ಕೃಷಿ ಸಂಶೋಧನಾ ಕೇಂದ್ರದ ಕಚೇರಿಯ ಗೋಡೌನ್ ಬೀಗ ಮುರಿದು ಕಳ್ಳರು 72 ಸಾವಿರ ರೂಪಾಯಿ ಮೌಲ್ಯದ 4 ಬ್ಯಾಟರಿಗಳನ್ನು ಕಳ್ಳರು ಮಾಡಿದ್ದಾರೆ.
ಈ ಸಂಬಂಧ ವಲಯ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಮಲ್ಲಿಕಾರ್ಜುನ ಕೆಂಗನಾಳ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸಸ್ಯ ಆರೋಗ್ಯ ಕೇಂದ್ರ ಯೋeನೆಗಾಗಿ 2 ಇನ್ವರ್ಟರ್ ಮತ್ತು 12 ಬ್ಯಾಟರಿಗಳನ್ನು ಖರೀದಿಸಿ ಕಚೇರಿಯ ಗೋಡೌನ್ನಲ್ಲಿ ಇರಿಸಲಾಗಿತ್ತು. ಗೋಡೌನ್ ಬೀಗ ಮುರಿದು ಕಳ್ಳರು 72 ಸಾವಿರ ರೂ.ಮೌಲ್ಯದ 4 ಬ್ಯಾಟರಿಗಳನ್ನು ಕಳವು ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.