ಅಥಣಿ :ಅ.೧೪: ಶ್ರೀ ರಾಘವೇಂದ್ರ ಸ್ವಾಮಿಗಳ ೩೫೪ ನೇ ಆರಾಧನೆಯ ಕೊನೆಯ ದಿನದ ಅಂಗವಾಗಿ ಸಾವಿರಾರು ಭಕ್ತರ ಜಯ ಘೋಷ, ಭಕ್ತಿ ಗೀತೆಗಳ, ಭಜನೆ, ದಾಸರ ಪದಗಳ, ನಡುವೆ ರಥೋತ್ಸವ ವಿಜ್ರಂಭಣೆಯಿAದ ನಡೆಯಿತು. ಮೂರು ದಿನಗಳ ಆರಾಧನಾ ಮಹೋತ್ಸವವು
ವಿಜ್ರಂಭಣೆಯ ರಥೋತ್ಸವದ ಮೂಲಕ ಕೊನೆಗೊಂಡಿತು. ಕೇದಿಗೆ, ಸೇವಂತಿ, ಮಲ್ಲಿಗೆ, ಗುಲಾಬಿ, ಕನಕಾಂಬರ, ಜಾಜಿ ಸೇರಿದಂತೆ ಅನೇಕ ವಿಧವಾದ ಹೂಗಳು, ಬಾಳೆಯ ದಿಂಡು, ತೆಂಗಿನ ಗರಿಗಳಿಂದ ಅಲಂಕೃತಗೊAಡಿದ್ದ ರಥ ಭಕ್ತರ ಮನಸೂರೆ ಗೊಂಡಿತ್ತು. ಹೋಮ ಹವನಾದಿ, ಪೂರ್ಣಾಹುತಿ ನೀಡಿದ ನಂತರ ಪ್ರಾರಂಭಗೊAಡ ರಥೋತ್ಸವ ತರುಣ ಭಕ್ತರ ಉತ್ಸಾಹ ಇಮ್ಮಡಿಗೊಳಿಸಿತ್ತು. ರಥಕ್ಕೆ ಟೆಂಗಿನ ಕಾಯಿ ಒಡೆದು ಉತ್ತತ್ತಿ, ಹಣ್ಣುಗಳನ್ನು ಅರ್ಪಿಸುತ್ತಿರುವುದು ಸಾಮಾನ್ಯವಾಗಿತ್ತು. ಪ್ರಮುಖವಾಗಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ಮುಂಬೈ, ಪುಣೆ, ಕೊಲ್ಲಾಪೂರ, ರಾಜ್ಯದ ಬೆಂಗಳೂರು, ವಿಜಯಪುರ, ಧಾರವಾಡ, ಹುಬ್ಬಳ್ಳಿ, ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಿಂದ ಭಕ್ತರ ದಂಡು ಕೊನೆಯ ದಿನದ ಉತ್ಸವದಲ್ಲಿ ಪಾಲ್ಗೊಳ್ಳವ ಮೂಲಕ ರಾಯರ ಕೃಪೆಗೆ ಪಾತ್ರರಾದರು
ರಥೋತ್ಸವ ಪ್ರಾರಂಭವಾಗುತ್ತಿದ್ದAತೆಯೇ ತರುಣ ಭಕ್ತರಿಂದ ವಾಸುದೇವ ಹರಿ ಎನ್ನುವ ಘೋಷಣೆ ಮುಗಿಲು ಮುಟ್ಟುವಂತಿತ್ತು. ಶ್ರೀ ವಿಷ್ಣುತೀರ್ಥ ಭಜನಾ ಮಂಡಳ, ಶ್ರೀ ಸುಧಾ ಭಜನಾ ಮಂಡಳದ ಸದಸ್ಯೆಯರು. ಮಾತೆಯರು, ತರುಣ ಭಕ್ತರು ಸೇರಿದಂತೆ ಚಿಕ್ಕ ಮಕ್ಕಳಿಂದ ಕೋಲಾಟ, ಫುಗಡಿಯಾಟ ಆಕರ್ಷಣೀಯವಾಗಿತ್ತು. ತರುಣ ಭಕ್ತರಿಂದ ಬಾರೋ ರಾಘವೇಂದ್ರಾ, ಊರಿಗೆ ಬಂದರೆ ರಾಘವೇಂದ್ರ ನಮ್ಮ ಕೇರಿಗೂ ಬಾ ರಾಘವೇಂದ್ರ, ಅಥಣಿಯೇ ಇಂದೆಮಗೆ ಮಂತ್ರಾಲಯ ಹೀಗೆ ಹತ್ತಾರು ಭಕ್ತಿ ಗೀತೆಗಳನ್ನು ಹಾಡಿ ಗಾಯನ ಸೇವೆ ಸಲ್ಲಿಸಿದರು. ರಥೋತ್ಸವದ ನಂತರ ಸಾವಿರಾರು ಭಕ್ತರಿಗೆ ಅನ್ನಪ್ರಸಾದ ನಡೆಯಿತು ವಿತರಣೆಗೆ ನೂರಾರು ತರುಣ ಭಕ್ತರು ಟೊಂಕ ಕಟ್ಟಿ ನಿಂತಿದ್ದರು. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮೂರು ದಿನಗಳ ಆರಾಧನಾ ಮಹೋತ್ಸವದ ಮೂರು ದಿನಗಳಲ್ಲಿ ಯಾವುದೇ ಭೇದ ಭಾವ ಇಲ್ಲದ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯರಾದರು. ಉತ್ಸವ ಸಮಿತಿ, ವಿಶ್ವಸ್ಥ ಮಂಡಳಿ ಪದಾಧಿಕಾರಿಗಳು ಸೇರಿದಂತೆ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.

























