
ಕಲಬುರಗಿ:ಡಿ.6: ವಿಶ್ವಮಧ್ವ ಮಹಾಪರಿಷತ್ತಿನ ಅಂಗಸಂಸ್ಥೆಯಾದ ನಗರದ ಗೀತಾ ಪಾರಾಯಣ ಸಮಿತಿ ಹಾಗೂ ಎನ್ಜಿಓ ಕಾಲೋನಿ (ಜೇರ್ಗಿ ಕಾಲೋನಿ)ಯ ಶ್ರೀ ಗುರು ರಾಘವೇಂದ್ರಸ್ವಾಮಿ ಭಕ್ತವೃಂದದ ಸಂಯುಕ್ತ ಆಶ್ರಯದಲ್ಲಿ 34ನೇ ಗೀತಾ ಜಯಂತ್ಯುತ್ಸವ ವೈಭವಯುತವಾಗಿ ನಡೆಯಿತು.
ನಗರದ ಜೇರ್ಗಿ ಕಾಲೋನಿಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನಾಲ್ಕು ದಿನಗಳ ಕಾಲ ಉತ್ಸವ ಕರ್ಯಕ್ರಮಗಳು ನಡೆದವು. ನಾಲ್ಕು ದಿನವೂ ಸ್ಥಳೀಯ ವಿದ್ವಾಂಸರ ಪ್ರವಚನಗಳು ನಡೆದು ಜನರ ಮನದಲ್ಲಿ ಗೀತೆಯ ಮಹತ್ವ ಮತ್ತು ಧರ್ಮಿಕ ಶ್ರದ್ಧೆ ಮೂಡಿಸುವಲ್ಲಿ ಯಶಸ್ವಿಯಾದವು.
ಮೊದಲ ದಿನ ಗೀತಾ ಪಾರಾಯಣ ಸಮಿತಿ ಅಧ್ಯಕ್ಷರೂ ಆದ ಹಿರಿಯ ವಿದ್ವಾಂಸ ಪಂ. ಡಾ. ಹನುಮಂತಾಚರ್ಯ ಸರಡಗಿ ಅವರು ?ರ್ಮಯೋಗ’ ಕುರಿತು, ಎರಡನೇ ದಿನ ಪಂ. ಪ್ರಸನ್ನಾಚರ್ಯ ಜೋಶಿ ಅವರು ?ಜ್ಞಾನ-ವಿಜ್ಞಾನಯೋಗ’ದ ಕುರಿತು, ಮೂರನೇ ದಿನ ಪಂ. ಗೋಪಾಲರ್ಯ ಅಕಮಂಚಿ ಅವರು ?ರ್ಮಸನ್ಯಾಸಯೋಗ’ದ ಕುರಿತು ಉಪನ್ಯಾಸ ನೀಡಿದರು.
ಏಕಾದಶಿ ಗೀತಾ ಜಯಂತಿಯಂದು ಬೆಳೆಗ್ಗೆ ಸುಮಾರು 60 ಜನ ಸದ್ಭಕ್ತರು ಏಕಕಾಲದಲ್ಲಿ, ಏಕಕಂಠದಿಂದ ಸಂಪೂರ್ಣ ಶ್ರೀಮದ್ಭಗವದ್ಗೀತೆಯ ಪಾರಾಯಣ ಮಾಡಿದರು. ದ್ವಾದಶಿಯಂದು ನಗರದ ಎಲ್ಲ ಸುಧಾ ವಿದ್ವಾಂಸರನ್ನು ಒಂದೇ ವೇದಿಕೆಯಲ್ಲಿ ಕುಳ್ಳಿರಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸೇರಿದ ನೂರಾರು ಜನರು ಭಗವಂತನ ಚಲಪ್ರತಿಮೆಗಳಂತಿರುವ ಈ ಎಲ್ಲ ವಿದ್ವಾಂಸರನ್ನು ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ದರ್ಶನ ಮಾಡಿಕೊಂಡು ಕಣ್ತುಂಬಿಸಿಕೊಂಡು ಆನಂದಪಟ್ಟರು. ಗೀತಾ ಪಾರಾಯಣ ಸಮಿತಿಯ ಈ ವಿಶಿಷ್ಟವಾದ ಸೇವೆಯನ್ನು ಸ್ವೀಕರಿಸಿ, ಅನುಗ್ರಹಿಸಿದವರೆಂದರೆ ಉತ್ತರಾದಿಮಠದ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ, ಪಂಡಿತರುಗಳಾದ ಗಿರೀಶಾಚಾರ್ಯ ಅವಧಾನಿ, ಗೋಪಾಲಾಚಾರ್ಯ ಅಕಮಂಚಿ, ಗುರುಮಧ್ವಾಚಾರ್ಯ ನವಲಿ, ವಿನೋದಾಚಾರ್ಯ ಗಲಗಲಿ, ಪ್ರಸನ್ನಾಚಾರ್ಯ ಜೋಶಿ, ಅಭಯಾಚಾರ್ಯ ಪಾಟೀಲ, ವಿಷ್ಣುದಾಸಾಚಾರ್ಯ ಖಜೂರಿ, ವಿಷ್ಣು ಆಚಾರ್ಯ ಫಿರೋಜಾಬಾದ, ಅನಂತಮಾಧವಾಚಾರ್ಯ, ಸೌರಭಾಚಾರ್ಯ ಅಷ್ಟಗಿ, ಭಾರತೀಶಾಚಾರ್ಯ, ಕಿರಣಾಚಾರ್ಯ ಜೋಶಿ, ನಚಿಕೇತಾಚಾರ್ಯ ಬೆಂಕಿ ಹಾಗೂ ಮುಕುಂದಾಚಾರ್ಯ ಹರವಾಳ.
ಶ್ರೀಮಠದ ಅರ್ಚಕರುಗಳಾದ ಪಂ. ಗಿರೀಶಾಚಾರ್ಯ ಅವಧಾನಿ ಹಾಗೂ ಶ್ರೀ ಸಂಜೀವಾಚಾರ್ಯ ಅವರ ನೇತೃತ್ವದಲ್ಲಿ ಸಂಪೂರ್ಣ ಶ್ರೀಮದ್ಭಗವದ್ಗೀತೆಯ ಹೋಮವು ವೈಭವದಿಂದ ಜರುಗಿತು. ಶ್ರೀ ಗುರುರಾಘವೇಂದ್ರಸ್ವಾಮಿ ಭಕ್ತವೃಂದದ ಆಶ್ರಯದಲ್ಲಿ ಭಕ್ತರಿಗೆ ತೀರ್ಥಪ್ರಸಾದ, ಅನ್ನಸಂರ್ಪಣೆ ಮಾಡಲಾಯಿತು. ಈ ಎಲ್ಲ ಕಾರ್ಯಕ್ರಮಗಳು ಪಂ. ಹನುಮಂತಾಚಾರ್ಯ ಸರಡಗಿಯವರ ಅಧ್ಯಕ್ಷತೆಯಲ್ಲಿ, ಗೀತಾ ಪಾರಾಯಣ ಸಮಿತಿಯ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಮತ್ತು ಅವರೆಲ್ಲರ ಸಂಪೂರ್ಣ ಸಹಕಾರದಿಂದ ನೆರವೇರಿದವು.































