32ನೇ ದಿನಕ್ಕೆ ದಿನಕ್ಕೆ ಕಾಲಿಟ್ಟ ರೈತರ ಆಹೋರಾತ್ರಿ ಧರಣಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹನೂರು.ನ.27:-
ತಾಲೂಕಿನ ಕುರಟ್ಟಿ ಹೊಸೂರು ಪಂಚಾಯಿತಿ, ಶೆಟ್ಟಹಳ್ಳಿ ಪಂಚಾಯಿತಿ, ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಗಳ ಅಂತರ್ಜಲ ಅಭಿವೃದ್ಧಿಗಾಗಿ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ರೈತ ಸಂಘಟನೆ ಇಂದು ಬುಧವಾರ ತಲೆಗೆ ಮತ್ತು ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಉಪವಾಸ ಪ್ರತಿಭಟನೆ ನಡೆಸಿದರು.


ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ವಡಕೆಹಳ್ಳ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮತ್ತು ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿಯು ಕಾವೇರಿ ನದಿಯಿಂದ ದಂಟಳ್ಳಿ ಏತ ನೀರಾವರಿ ಯೋಜನೆಗೆ ಡಿ.ಪಿ.ಆರ್ ಮಾಡಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಪ್ರತಿಭಟನೆ 31 ನೇ ದಿನಗಳನ್ನು ಪೂರೈಸಿ 32 ನೇ ದಿನ ಗುರುವಾರಕ್ಕೆ ಕಾಲಿಟ್ಟಿದೆ.
ರೈತ ಮುಖಂಡ ಶೈಲೇಂದ್ರ ಸಂವಿಧಾನದ ದಿನ ಎಲ್ಲರಿಗೂ ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞಾ ವಿಧಿ ಬೋಧಿಸಿದರು. ಭಾರತರತ್ನ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದರು. ರೈತರ ಆಹೋರಾತ್ರಿ ಧರಣಿ ಪ್ರತಿಭಟನೆಯು ಈಗಾಗಲೇ 31 ದಿನ ಕಳೆದರೂ ಸಂವಿಧಾನದ ಆಶಯಗಳನ್ನು ಈಡೇರಿಸಲು ಸರ್ಕಾರ ಆಡಳಿತ ವಿಫಲವಾಗಿದೆ ಎಂದು ಈ ದಿವಸ ಮದ್ಯಾಹ್ನದ ತನಕ ಕಣ್ಣು ಹಾಗೂ ತಲೆಗೆ ಕಪ್ಪು ಪಟ್ಟಿ ದರಿಸಿಕೊಂಡು ಮೌನ ಪ್ರತಿಭಟನೆ ಮೂಲಕ ಉಪವಾಸ ಸತ್ಯಾಗ್ರಹ ನಡೆಸಿದರು.


ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಪ್ಪು ಪಟ್ಟಿ ಕಟ್ಟಿಕೊಂಡು ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಬೆಂಬಲಿಸಿದರು. ದಿನಾಂಕ 27-10- 2025 ರಿಂದ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಸರ್ಕಾರ 31 ದಿನ ಕಳೆದರೂ ಈ ಭಾಗದ ಸಮಸ್ಯೆ ಬಗೆಹರಿಸಲು ವಿಫಲವಾಗಿದೆ ಎಂದು ಆರೋಪಿಸಿದರು.


ಅಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ ಸಂತ ಸೂಸೈಪ್ಪರ್ ಸಂಘದ ಪರಿಮಳಾ, ಜೋತಿ ಮಲರ್, ಅಮೃತ ಸಂಘದ ರಮ್ಯ, ಪರ್ವದ, ನಾಗರತ್ನ, ಐಶ್ವರ್ಯ, ಏಂಜಲ್ ಸಂಘದ ಸೆಲ್ವಿ ಎಂಬ ಪಾರ್ವತಿ, ಬೇಬಿ, ಬೆಲ್ಲಾ, ಅಂಬಿಕಾ, ಮಹಿಳಾ ಜೀವ ಸಂಘ ಜೋಸ್ಪೀನ್ ಅನಿತಾ ಗ್ರೇಸಿ, ಪೆರಿಯ ನಾಯಗಮ್ಮಾಳ್, ಕೊಳಂದೈ ತೆರೆಸಾ, ಪುಷ್ಪ ರಾಣಿ, ಆರ್ ಅರ್ಪುದ ರಾಜ್, ಪುಟ್ಟಸ್ವಾಮಿ, ಪೀಟರ್ , ಜಾನ್ ಜೋಸೆಫ್, ಸೂಸೈಮಾಣಿಕ್ಯಂ, ಕೊಳ್ಳೇಗಾಲದ ಪೆರಿಯ ನಾಯಗಮ್ , ಮೋಳೆ ರಾಜು ,ದೊಡ್ಢಿಂದುವಾಡಿ ವಸಂತ ಕುಮಾರ್, ಜಕ್ಕಳ್ಳಿ ಕುಟ್ಟಿ,ಸಿಂಗ್, ಚಾರ್ಲೆಸ್ , ಕರ್ನಲ್ ಮಾಣಿಕ್ಯಂ, ಮಾಜಿ ಸೈನಿಕ ಲೂಯಿಸ್, ಕೊಳಂದೈಸ್ವಾಮಿ, ಶಿವಣ್ಣ, ಎಲಚಿಕೆರೆ ಡೇವಿಡ್, ಸೇಟು, ,ಮಾದಯ್ಯ ,ಲಾಸರ್, ಸೂಳ್ವಾಡಿ ಜೋಸೆಫ್ ನೂರಾರು ಮಹಿಳೆಯರು ಭಾಗವಹಿಸಿದ್ದರು.