Home ಜಿಲ್ಲೆ ಮೈಸೂರು 30 ಜನ ಡ್ರಗ್ ಪೆಡ್ಲರ್ಸ್‍ಗಳ ಗಡಿಪಾರು: ಸೀಮಾ ಲಾಟ್ಕರ್

30 ಜನ ಡ್ರಗ್ ಪೆಡ್ಲರ್ಸ್‍ಗಳ ಗಡಿಪಾರು: ಸೀಮಾ ಲಾಟ್ಕರ್

ಸಂಜೆವಾಣಿ ನ್ಯೂಸ್
ಮೈಸೂರು: ಏ.08:-
ನಗರದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಪೆÇಲೀಸರು ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ನಗರವನ್ನು ಡ್ರಗ್ಸ್ ಮುಕ್ತಗೊಳಿಸಲು ವಿಶೇಷ ಕಾರ್ಯಾಚರಣೆ ನಡೆಸಿ, ಸುಮಾರು 30 ಜನ ಪೆಡ್ಲರ್ಸ್‍ಅನ್ನು ಗಡಿಪಾರು ಮಾಡಲಾಗಿದೆ ಎಂದು ನಗರ ಪೆÇಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಢಿಯಲ್ಲಿ ಈ ಕುರಿತು ಅವರು ಮಾಹಿತಿ ನೀಡಿದರು. ಮೈಸೂರು ನಗರದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಮಾಡಲಾಗಿದ್ದು, ಇದರ ಜೊತೆಗೆ ಕೆಲ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ಸಹ ನಡಸಲಾಗಿದೆ. ಇಲ್ಲಿಯವರೆಗೆ ಸುಮಾರು 30 ಜನ ಪೆಡ್ಲರ್ಸ್‍ಅನ್ನು ಗಡಿಪಾರು ಮಾಡಿದ್ದೇವೆ. ಇದರ ಜೊತೆಗೆ ಎನ್‍ಡಿಪಿಎಸ್ ಕಾಯ್ದೆ ಅಡಿ ಓರ್ವ ಹಳೆಯ ಪೆಡ್ಲರ್ ಅನ್ನು ಬಳ್ಳಾರಿ ಜೈಲಿಗೆ ಕಳಿಸಿದ್ದೇವೆ ಎಂದು ಪೆÇಲೀಸ್ ಕಮಿಷನರ್ ಮಾಹಿತಿ ನೀಡಿದರು.


ನಗರದಲ್ಲಿ ಮಾದಕ ದ್ರವ್ಯಗಳ ಮಾರಾಟ, ಸಂಗ್ರಹ, ಸಾಗಾಣೆ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಪೆÇಲೀಸರು ಗಾಂಜಾ ಪೆಡ್ಲರ್ ಆರೋಪಿ ಇರ್ಫಾನ್ ಪಾಷ (32) ಎಂಬಾತನನ್ನು ಬಂಧಿಸಿದ್ದಾರೆ ಎಂದು ಸೀಮಾ ಲಾಟ್ಕರ್ ತಿಳಿಸಿದರು.


ಮೈಸೂರು ನಗರದಲ್ಲಿ ಮಾದಕ ದ್ರವ್ಯಗಳ ಮಾರಾಟ, ಸಂಗ್ರಹ, ಸಾಗಾಣೆ ಕೃತ್ಯಗಳನ್ನು ನಿರ್ಮೂಲನೆ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸಂಬಂಧ ನಗರದ ಮಂಡಿ ಮೊಹಲ್ಲಾ ವಾಸಿ ರೂಢಿಗತ ಗಾಂಜಾ ಪೆಡ್ಲರ್ ಇರ್ಫಾನ್ ಪಾಷ ಆಲಿಯಾಸ್ ಬಟಾಣ ಎಂಬಾತನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಈತ 19ನೇ ವಯಸ್ಸಿನಿಂದ ಮಾದಕ ದ್ರವ್ಯಗಳ ಮಾರಾಟ, ಸಂಗ್ರಹ, ಸಾಗಾಣೆ, ಸರಬರಾಜು ಕೃತ್ಯಗಳಲ್ಲಿ ಭಾಗಿಯಾಗಿದ್ದುದು ವಿಚಾರಣೆ ವೇಳೆ ಗೊತ್ತಾಗಿದೆ.2014ನೇ ಸಾಲಿನಿಂದ 2025ನೇ ಸಾಲಿನವರೆಗೆ ಒಟ್ಟು 09 ಪ್ರಕರಣಗಳು ದಾಖಲಾಗಿದ್ದು, ಒಟ್ಟು 28 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. 3 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ.


ಈತನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣದಲ್ಲಿಡಲು ಈತನ ವಿರುದ್ಧ ರೌಡಿ ಶೀಟ್ ತೆರೆದು ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.
ಈತನ ವಿರುದ್ಧ ಭದ್ರತಾ ಪ್ರಕರಣ ಕೂಡಾ ದಾಖಲಿಸಲಾಗಿರುತ್ತದೆ. ಈತನ ವಿರುದ್ಧ ದಾಖಲಾಗುವ ಪ್ರಕರಣಗಳಲ್ಲಿ ಈತನು ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದು ನ್ಯಾಯಾಲಯದ ಷರತ್ತನ್ನು ಉಲ್ಲಂಘನೆ ಮಾಡಿ ಪದೇ ಪದೇ ಗಾಂಜಾ ವ್ಯವಹಾರದ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದನು.


ಈತನ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಕ್ರಮ ಕೈಗೊಂಡಿದ್ದರೂ ಸಹ ಈತನು ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದ ಹಿನ್ನೆಲೆಯಲ್ಲಿ ಈತನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣದಲ್ಲಿಡಲು ವಿಶೇಷ ಕಾನೂನು ಅಡಿಯಲ್ಲಿ ಈತನನ್ನು ಬಂಧಿಸಿ, ಬಳ್ಳಾರಿ ಕಾರಾಗೃಹದಲ್ಲಿ ಇಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.ಮಾದಕ ದ್ರವ್ಯಗಳ ಮಾರಾಟ, ಸಂಗ್ರಹ, ಸಾಗಾಣೆ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳ ವಿರುದ್ಧ ಇದೇ ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೀಮಾ ಲಾಟ್ಕರ್ ಎಚ್ಚರಿಸಿದರು.
220 ಮೊಬೈಲ್ ವಶ: ಮೈಸೂರು ನಗರದಲ್ಲಿ ಕಳೆದು ಹೋದ ಮೊಬೈಲ್ ಫೆÇೀನ್‍ಗಳ ಪತ್ತೆಗಾಗಿ ಮೈಸೂರು ನಗರ ಪೆÇಲೀಸರು ಕಳೆದ 1 ತಿಂಗಳಿನಿಂದ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಒಟ್ಟು 20,00,000 ಮೌಲ್ಯದ 220 ಮೊಬೈಲ್ ಫೆÇೀನ್‍ಗಳನ್ನು ಪತ್ತೆ ಮಾಡಲಾಗಿದೆ ಎಂದು ಇದೇ ವೇಳೆ ಪೆÇಲೀಸ್ ಆಯುಕ್ತರು ತಿಳಿಸಿದರು. ಕೆಲವರಿಗೆ ಕಳೆದುಕೊಂಡಿದ್ದ ಮೊಬೈಲ್ ಅನ್ನು ದಾಖಲೆ ಪರಿಶೀಲಿಸಿ ಇದೇ ವೇಳೆ ಆಯುಕ್ತರು ಹಸ್ತಾಂತರಿಸಿದರು.