3 ಸ್ಕ್ಯಾನಿಂಗ್ ಕೇಂದ್ರಗಳು ಸೀಜ್

ಬೀದರ, ಜ.10: ಉಪ ನಿರ್ದೇಶಕರು (ಪಿ.ಸಿ&ಪಿ.ಎನ್.ಡಿ.ಟಿ) ಡಾ. ವಿವೇಕ ದೂರೈ ಬೆಂಗಳೂರು ಹಾಗೂ ಅವರ ತಂಡವು ದಿನಾಂಕ:06-01-2026 ಹಾಗೂ 07-01-2026 ರಂದು ಜಿಲ್ಲೆಯಾದ್ಯಂತ ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲು ಜಿಲ್ಲೆಗೆ ಆಗಮಿಸಿರುವ ಸಂದಂರ್ಭದಲ್ಲಿ ಹುಮನಾಬಾದ, ಭಾಲ್ಕಿ, ಬಸವಕಲ್ಯಾಣ ಮತ್ತು ಔರಾದ(ಬಿ) ನಗರದಲ್ಲಿರುವ ಸುಮಾರ 8 ವಿವಿಧ ಸ್ಕ್ಯಾನಿಂಗ ಸೆಂಟರಗಳಿಗೆ ಭೇಟಿ ಮಾಡಿ ಪರಿಶೀಲಿಸಿದಾಗ ಇದರಲ್ಲಿ ಬಸವಕಲ್ಯಾಣ ನಗರದ ನ್ಯೂ ರೀಫಾ ಆಸ್ಪತ್ರೆ, ಔರಾದ(ಬಿ) ನಗರದ ವಿಶ್ವ ಮತ್ತು ಮುಗಳೆ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ಮತ್ತು ಭಾಲ್ಕಿ ನಗರದ ಜಿಜಾಮಾತ ಆಸ್ಪತ್ರೆ ಈ 3 ಆಸ್ಪತ್ರೆಗಳಲ್ಲಿರುವ ಸ್ಕ್ಯಾನಿಂಗ ಕೇಂದ್ರಗಳಲ್ಲಿ ಪಿ.ಸಿ&ಪಿ.ಎನ್.ಡಿ.ಟಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ 3 ಸ್ಕ್ಯಾನಿಂಗ ಕೇಂದ್ರಗಳನ್ನು ಸೀಜ ಮಾಡಿ ಇವರ ಮೇಲೆ ಪಿ.ಸಿ&ಪಿ.ಎನ್.ಡಿ.ಟಿ ಕಾಯ್ದೆ ಪ್ರಕಾರ ಕ್ರಮಜರುಗಿಸಲು ಪಿ.ಸಿ.ಆರ್ ದಾಖಲು ಮಾಡಲಾಗವುದು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳಾದ ಡಾ. ಧ್ಯಾನೇಶ್ವರ ನಿರುಗುಡೆ, ಜಿಲ್ಲಾ ಜಾರಿ ಅಧಿಕಾರಿಗಳು ಹಾಗೂ ಜಿಲ್ಲಾ ಪಿ.ಸಿ&ಪಿ.ಎನ್.ಡಿ.ಟಿ ನೋಡಲ್ ಅಧಿಕಾರಿಗಳಾದ ಡಾ. ದಿಲೀಪ ಡೂಂಗ್ರೆ, ಪಿ.ಸಿ&ಪಿ.ಎನ್.ಡಿ.ಟಿ ರಾಜ್ಯ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯರಾದ ವಸಂತ ಕುಮಾರ ಬೆಂಗಳೂರು, ಕಾನೂನು ಸಲಹೆಗಾರರಾದ ಮೋನಿಶಾ ಡಿ.ಎನ್ ಬೆಂಗಳೂರು, ದ್ವಿತೀಯ ದರ್ಜೆ ಸಹಾಯಕರಾದ ಅನೀಲ್ ಥಾಮಸ್ ಬೆಂಗಳೂರು, ಪಿ.ಸಿ&ಪಿ.ಎನ್.ಡಿ.ಟಿ ಕಾರ್ಯಕ್ರಮ ಸಲಹೆಗಾರರು ಬನಾಮಾ ಎಸ್ ಸಜ್ಜನ್ ಬೆಂಗಳೂರು, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯರಾದ ಡಾ. ಅಬ್ರಾರ ಖಾದ್ರಿ ರೇಡಿಯಾಲೂಜಿಸ್ಟ, ಡಾ. ಅಶೋಕ ಕಟ್ಟಿಮನಿ ರೇಡಿಯಾಲೂಜಿಸ್ಟ ಹಾಗೂ ಪಿ.ಸಿ&ಪಿ.ಎನ್.ಡಿ.ಟಿ ವಿಷಯ ನಿರ್ವಾಹಕರಾದ ಮಹೇಶ್ವರ ರಡ್ಡಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.