
ಕಲಬುರಗಿ,ಫೆ.3-ನಗರ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ತಪಾಸಣೆಯ ವೇಳೆ 3 ಮೊಬೈಲ್, 3 ಸಿಮ್ ಕಾರ್ಡ್ ಮತ್ತು 2 ಏರ್ ಬಡ್ಸ್ ಪತ್ತೆಯಾಗಿವೆ.
ಕಾರಾಗೃಹದ ಸಿಬ್ಬಂದಿ ಕಾರಾಗೃಹದ ಬ್ಯಾರಕ್ ಸಂಖ್ಯೆ 11 ರಿಂದ 13 ರಲ್ಲಿ ಅನಿರೀಕ್ಷಿತ ತಪಾಸಣೆ ನಡೆಸುತ್ತಿದ್ದ ವೇಳೆ ಬ್ಯಾರಕ್ ಸಂಖ್ಯೆ 12ರ ಶೌಚಾಲಯದ ಗೋಡಯ ಟೈಲ್ಸ್ ಒಳಗೆ ಈ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದು, ಈ ಸಂಬಂಧ ಕಾರಾಗೃಹದ ಅಧೀಕ್ಷಕ ರಾಕೇಶ ಕಾಂಬಳೆ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.

























