
ಕಲಬುರಗಿ: ಜ. 04: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು 2ನೇ ಮಧ್ಯಸ್ಥಿಕೆ ಅಭಿಯಾನ ಹಾಗೂ ವಿಶೇಷ ಲೋಕ ಅದಾಲತ್ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಹೇಳಿದರು.
ಶನಿವಾರದಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಎ.ಡಿ.ಆರ್. ಕಟ್ಟಡದ ಸಭಾಂಗಣದಲ್ಲಿ ದೇಶಕ್ಕಾಗಿ ಮಧ್ಯಸ್ಥಿಕೆ ಅಭಿಯಾನ 2.0 ಮತ್ತು ವಿಶೇಷ ಲೋಕ ಅದಾಲತ್ ಅಭಿಯಾನ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಧ್ಯಸ್ಥಿಕೆ ಹಾಗೂ ಸಂಧಾನ ಯೋಜನಾ ಸಮಿತಿ ನವದೆಹಲಿ ಇವರು ಜನವರಿ 2 ರಿಂದ 90 ದಿನಗಳ ದೇಶಕ್ಕಾಗಿ ಮಧ್ಯಸ್ಥಿಕೆ ಅಭಿಯಾನ ಭಾಗ -2 ನಡೆಸಲು ತೀರ್ಮಾನಿಸಿರುತ್ತಾರೆ. ಈ 90 ದಿನಗಳ ಮಧ್ಯಸ್ಥಿಕೆ ಅಭಿಯಾನ ಜನವರಿ 2 ರಿಂದ ನಡೆಯಲಿದೆ ಎಂದು ಅವರು ಹೇಳಿದರು. ಮಧ್ಯಸ್ಥಿಕೆಗಾಗಿ ಸೂಕ್ತವಾಗಿರುವ ಪ್ರಕರಣಗಳನ್ನು ಮಧ್ಯಸ್ಥಿಕೆಗಾರರ ಮೂಲಕ ರಾಜಿಪಡಿಸಿಕೊಂಡು ಅಭಿಯಾನ ಯಶಸ್ವಿಗೊಳಿಸಬೇಕೆಂದು ಅವರು ಹೇಳಿದರು.
ಮಧ್ಯಸ್ಥಿಕೆ ಕೇಂದ್ರದಲ್ಲಿ ಮಧ್ಯಸ್ಥಿಕೆಗಾರರ ಮೂಲಕ ಪಕ್ಷಗಾರರು ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡು ಅಭಿಯಾನದ ಸದುಪಯೋಗ ಪಡೆಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಕೌಟುಂಬಿಕ ಪ್ರಕರಣಗಳು ಚೆಕ್ ಬೌನ್ಸ್ ಪ್ರಕರಣಗಳು ಮೋಟಾರು ಅಪಘಾತ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು ಪಾಲು ವಿಭನೆಗೆಗೆ ಸಲ್ಲಿಸಿದ ಪ್ರಕರಣಗಳು ಕಾರ್ಮಿಕರಿಗೆ ಸಂಬಂಧಿಸಿದಂತೆ ಪ್ರಕರಣಗಳು ಮತ್ತು ಇತರೆ ಸಿವ್ಹಿಲ್ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳುವುದು ಪಕ್ಷಗಾರರಿಗೆ ಸೂಕ್ತ ಆಗಿರುತ್ತದೆ ಜಿಲ್ಲೆಯಲ್ಲಿ ಎಲ್ಲಾ ಪಕ್ಷಗಾರರು ಸದರಿ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಹಣ ಮತ್ತು ಸಮಯವನ್ನು ಉಳಿಸಿ ನೆಮ್ಮೆದಿಯಿಂದ ಇರುವಂತೆ ಕಕ್ಷಿದಾರರಿಗೆ ಕೋರಲಾಗಿದೆ ಎಂದು ಹೇಳಿದರು.
ಜನೇವರಿ 24 ರಂದು ಕೇವಲ ಭೂ-ಸ್ವಾಧೀನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ವಿಶೇಷ ಲೋಕ ಅದಾಲತ್ ನಡೆಸಲು ತೀರ್ಮಾನಿಸಲಾಗಿದೆ. ಕಳೆದ ಲೋಕಅದಾಲತ್‍ನಲ್ಲಿ 120 ಭೂ ಸ್ವಾಧೀನಪ್ರಕರಣಗಳಲ್ಲಿ ಆದೇಶದ ಹಣವಸೂಲಾತಿ ಪ್ರಕರಣಗಳು ಇತ್ಯರ್ಥಗೊಂಡಿದ್ದವು ಮತ್ತು ಸುಮಾರು 15 ಕೋಟಿ ರೂಪಾಯಿ ಪರಿಹಾರ ರಾಜಿಮೂಲಕ ನೀಡಲಾಗಿತ್ತು ಎಂದರು.
ಈ ಬಾರಿಯು ಸಹಸಂಬಂಧಪಟ್ಟ ಪಕ್ಷಗಾರರು, ವಕೀಲರು, ಅಧಿಕಾರಿಗಳು ಮತ್ತು ಭೂ ಸ್ವಾಧೀನ ಪಡೆದುಕೊಂಡ ಇಲಾಖೆ/ನಿಗಮದವರು ಹೆಚ್ಚಿನ ಆಸಕ್ತಿ ವಹಿಸಿ ರಾಜಿಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಕಾನೂನುಸೇವೆಗಳ ಪ್ರಾಧಿಕಾರ ಮನವಿಮಾಡುತ್ತದೆ. ದಿನಾಂಕ: 24.01.2026 ರಂದುಮಧ್ಯಾಹ್ನ 2.30 ರಿಂದ 5.30ರ ವರೆಗೆ ವಿಶೇಷ ಲೋಕಅದಾಲತ್ ನಡೆಯುತ್ತದೆ.
ಕಲಬುರಗಿ ನ್ಯಾಯಾಲಯಗಳಲ್ಲಿ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಮಧ್ಯಸ್ಥಿಕೆ ಅಭಿಯಾನ ನಡೆಸಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿ ಅಥವಾ ತಾಲ್ಲೂಕ ಕಾನೂನು ಸೇವ ಸಮಿತಿಗಳಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.























