
ಗುರುಮಠಕಲ್,ನ.೯-ಸಂಸ್ಥಾನ ಖಾಸಮಠ ಪಿಠಾಧಿಪತಿಗಳಾಗಿದ್ದ ಲಿಂಗೈಕ್ಯ ಸಂಗಮೇಶ್ವರ ಸ್ವಾಮಿಯವರು ಗಡಿ ಭಾಗದಲ್ಲಿ ಧಾರ್ಮಿಕ, ಅಧ್ಯಾತ್ಮಿಕ ಮತ್ತು ಶೈಕ್ಷಣಿಕ ಕಾರ್ಯವು ಅಪಾರವಾಗಿದೆ ಎಂದು ಖಾಸಾಮಠದ ಶಾಂತವೀರ ಗುರು ಮುರುಘಾಜೇಂದ್ರ ಸ್ವಾಮಿಗಳು ಹೇಳಿದರು.
ಪಟ್ಟಣದ ಖಾಸಾಮಠದಲ್ಲಿ ಶನಿವಾರ ಮಠದ ೯ನೇ ಪೀಠಧಿಪತಿಗಳಾದ ಲಿಂಗೈಕ್ಯ ಸಂಗಮೇಶ್ವರ ಮಹಾಸ್ವಾಮಿಗಳ ೨೬ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ನವೆಂಬರ ೮ ರಂದು ಖಾಸಾಮಠದಲ್ಲಿ ಲಿಂ. ಸಂಗಮೇಶ್ವರಮಾಹಾಸ್ವಾಮಿಗಳ ಪುಣ್ಯಸ್ಮರಣೆ ಆಚರಿಸಲಾಗುತ್ತದೆ. ದಿನದಲ್ಲಿ ತ್ರಿಕಾಲ ಇಷ್ಟಲಿಂಗ ಪೂಜೆಯನ್ನು ಮಾಡುತ್ತಿದ್ದ ಸಂಗಮೇಶ್ವರ ಸ್ವಾಮಿಜೀಯವರು, ರೈತರು ದುಡಿಯವ ವೇಳೆ ಅವರೊಂದಿಗೆ ಒಕ್ಕಲುತನದ ಕೆಲಸ ಮಾಡುತ್ತಿದ್ದರು. ಕಾಯಕ ನಿಷ್ಠೆಯ ಜೊತೆಗೆ ಬಸವೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಮುರಘಜೇಂದ್ರ ಸ್ವಾಮೀಜಿ ಕನ್ನಡ ಮಾದ್ಯಮ ಪ್ರೌಢಶಾಲೆಗಳನ್ನು ಆರಂಭಿಸುವ ಮೂಲಕ ಗಡಿ ಭಾಗದಲ್ಲಿ ಶಿಕ್ಷಣ ಕ್ರಾಂತಿಗೆ ಚಾಲನೆ ನೀಡಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆನಕನಳ್ಳಿ ಕೇದಾರಲಿಂಗ ಸ್ವಾಮೀಜಿ ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷರಾಗಿ ಶಿವಾನಂದ ಬೂದಿ, ರವಿಕುಮಾರ ವಾರದ್, ಕಾರ್ಯದರ್ಶಿಯಾಗಿ ಜಗದೀಶಕುಮಾರ ಭೂಮಾ, ಸಂಘಟನಾ ಕಾರ್ಯದರ್ಶಿಯಾಗಿ ಶಿವಕುಮಾರ ಗದ್ವಾಲ್, ಸಮಾಜದ ಮುಖಂಡರಾದ ನಾಗಭೂಷಣ ಅವಂಟಿ, ನರಸರೆಡ್ಡಿ ಪೊಲೀಸ್ ಪಾಟೀಲ್ ಗಡ್ಡೆಸೂಗೂರ, ಆನಂದಶೇಖರ ಹಿರೇಮಠ, ಅಖಂಡೆಶ್ವರ ಹಿರೇಮಠ, ಧರ್ಮವೀರ ವಾರದ್, ಸಿದ್ದಣ್ಣ ಜಾಡರ್, ಪವನಕುಮಾರ ಚಂದಾಪೂರ, ಬಸವರಾಜ ನೆಲೋಗಿ, ಬಸವರಾಜ ಶೆಟ್ಟಿಮಠ, ಶಂಕ್ರಯ್ಯ ಸ್ವಾಮಿ ಸಾಲಿಮಠ, ನಾಗಣ್ಣ ಕಾಳಗಿ, ಮಲ್ಲಯ್ಯ ಸ್ವಾಮಿ ಯಲ್ಲೇರಿ, ರಮೇಶ ಅನುಸೂರು ಅನಂತಪ್ಪ ಬೋಹಿನ್ ಹಾಗೂ ಖಾಸಾಮಠದ ಸದ್ದಭಕ್ತರು ಭಾಗಿಯಾಗಿದ್ದರು.

























