
ಸಂಜೆವಾಣಿ ವಾರ್ತೆ
ಮಂಡ್ಯ.ಮೇ.25:- ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರಿಂದ 3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ.
ಶಾಸಕ ಗಣಿಗ ರವಿಕುಮಾರ್ ರವರು ಮಂಡ್ಯ ಕ್ಷೇತ್ರ ದ ಹಲ್ಲೆಗೆರೆ ಗ್ರಾಮ ದಿಂದ ತಂದನಾಯಕನದೊಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ 25 ವರ್ಷಗಳಿಂದ ಗುಂಡಿ ಬಿದ್ದಿದ್ದು ಜನ ಸಾಮಾನ್ಯರು ಹಾಗೂ ವಾಹನಗಳು ಸಂಚರಿಸಲು ಅವ್ಯವಸ್ಥೆಯಿಂದ ಕೂಡಿದ್ದರಿಂದ ಇಂದು 2ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಗೆ ಭೂಮಿ ಪೂಜೆ ನೆರವೇರಿಸಿದರು.
ಮುಂದುವರೆದಂತೆ ಹೆಚ್ ಕೋಡಿಹಳ್ಳಿ ಗೇಟ್ ನಿಂದ ಜಿಗುಂಡಿ ಪಟ್ಟಣದ ವರೆಗಿನ ರಸ್ತೆಯನ್ನ 1ಕೋಟಿ ವೆಚ್ಚ ದಲ್ಲಿ ಅಭಿವೃದ್ಧಿ ಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಜನಸಮಾನ್ಯರ ಅಭಿಲಾಷೆಯಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸ್ಪಂದಿಸುತ್ತಿರುವ ಶಾಸಕರನ್ನು ಹೆಚ್ ಕೋಡಿಹಳ್ಳಿ ಮತ್ತು ಹಲ್ಲೆಗೆರೆ ಗ್ರಾಮಸ್ಥರು ಹೃದಯಸ್ಪರ್ಶಿ ಅಭಿನಂದಿಸಿದರು.