
ಬೀದರ್: ಜ.೨೮:ಬಸವಾದಿ ಶರಣ ವಚನಗಳು, ಮಾನವ ಬದುಕಿನ ದಾರಿಯಲ್ಲಿ ಹಚ್ಚಿಟ್ಟ ದೀಪಗಳು. ಸಮಾನತೆ, ಸಹಕಾರ-ಸಹಬಾಳ್ವೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯತೆಯ ಧರ್ಮದ ನುಡಿ ರಚನೆಗಳು. ೧೨ನೇ ಶತಮಾನದ ಶರಣರ ಸ್ವಾನುಭಾವದಿಂದ ಮೂಡಿ ಬಂದಿರುವ ಈ ಶ್ರೇಷ್ಠ ನುಡಿಗಳು ಇಂದು ನಮಗೆ ಉಳಿದು ಬಂದಿದ್ದೇ ರೋಚಕ ಸಂಗತಿ. ಶರಣರ ಬಲಿದಾನ ಹಾಗೂ ವೀರಗಾಥೆಯ ಕಾರ್ಯಗಳಿಂದ ಉಳಿದು ಬಂದಿರುವ “ವಚನ ಸಾಹಿತ್ಯ ಸಂರಕ್ಷಣೆ” ಸ್ಮರಣೆಗಾಗಿ ಪ್ರತಿ ವರ್ಷ ವಚನ ವಿಜಯೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾAಬಿಕೆ ಅಕ್ಕ ನುಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ೨೪ನೇ ವಚನ ವಿಜಯೋತ್ಸವವನ್ನು ಜನೆವರಿ ೩೦,೩೧ ಮತ್ತು ಫೆಬ್ರವರಿ ೦೧ ರಂದು ಮೂರು ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಅಗತ್ಯ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದರು.
ಜನವರಿ ೩೦ ರಂದು ಮುಂಜಾನೆ ೮.೦೦ ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜಾಯೋಗವು ಪೂಜ್ಯ’ ಸಿದ್ಧರಾಮ ಶರಣರು ಬೆಲ್ದಾಳ ಹಾಗೂ ಇನ್ನಿತರ ಪೂಜ್ಯರ ಸಾನಿಧ್ಯದಲ್ಲಿ ನಡೆಯಲಿದ್ದು, ಬಸವಕಲ್ಯಾಣ ಕ್ಷೇತ್ರ ಸಮಿತಿ ಸಂಯೋಜಕ ಬಸವರಾಜ ಪಾಟೀಲ ಸೇಡಂ ಉದ್ಘಾಟಿಸುವರು. ಡಾ. ವಿಜಯಶ್ರೀ ಬಶೆಟ್ಟಿ ಧ್ವಜಾರೋಹಣಗೈಯುವರು ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಪಿ.ರುದ್ರಪ್ಪಾ ಕುರಕುಂದಾ ಅನುಭಾವ ನೀಡುವರು, ಅಂದು ಮುಂಜಾನೆ ೧೧.೦೦ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷರಾದ ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಹಾಗೂ ಹುಲಸೂರಿನ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ತಮ್ಮ ನೇತೃತ್ವದಲ್ಲಿ ತೆಲಂಗಾಣ ರಾಜ್ಯದ ವಾರಂಗಲದ ಪಾಲಕುರಿಕೆ ಸೋಮನಾಥ ಕಲಾ ಪೀಠದ ಅಧ್ಯಕ್ಷ ಡಾ. ರೂಪಾಲು ಸತ್ಯನಾರಾಯಣ ಉದ್ಘಾಟಿಸುವರು. ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರು ವಚನ ವಿಜಯೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಿಕೊಳ್ಳುವರು. ಹಿರಿಯ ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅನುಭಾವ ನೀಡುವರು ಸಾಹಿತಿ ಡಾ. ಬಸವರಾಜ ಸಬರದ, ಮಾಜಿ ಸಚಿವರಾದ ರಾಜಶೇಖರ ಪಾಟೀಲ, ಬಂಡೆಪ್ಪ ಖಾಸೇಂಪೂರ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಕುರುಪತಿ ನೀಲಕಂಠೇಶ್ವರ ಪ್ರಸಾದ, ದೇವರಾಜ ಬಿ.ಲಿಗಾಡೆ ಸೇರಿದಂತೆ ಇತರರು ಪಾಲ್ಗೊಳ್ಳುವರು.
ಮಧ್ಯಾಹ್ನ ೩.೦೦ ಗಂಟೆಗೆ ಸ್ತ್ರೀ ಶಕ್ತಿ ಸಮಾವೇಶ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ವೈದ್ಯರಾದ ಡಾ. ವಿಜಯಲಕ್ಷ್ಮಿ ದೇಶಮಾನೆ ಉದ್ಘಾಟಿಸುವರು. ಶಾಂತಿವರ್ಧಕಶ ಶಿಕ್ಷಣ ಸಂಸ್ಥೆ ನಿರ್ದೇಶಕಿ ಗೀತಾ ಖಂಡ್ರೆ ಗುರುಪೂಜೆ ನೇರವೇರಿಸುವರು. ಅಭಾವಿಲಿಮ ರಾಷ್ಟ್ರೀಯ ಉಪಾಧ್ಯಕ್ಷೆ ಡಾ.ಗುರಮ್ಮಾ ಸಿದ್ದಾರೆಡ್ಡಿ ಅಧ್ಯಕ್ಷತೆ ವಹಿಸಿಕೊಳ್ಳುವರು. ಚಿತ್ರದುರ್ಗದ ಬಸವತತ್ವ ಚಿಂತಕಿ ಡಿ.ಶಬ್ರಿನಾ ಅನುಭಾವ ನೀಡುವರು.
ಸಾಯಂಕಾಲ : ೬.೦೦ ಗಂಟೆಗೆ ಶರಣ ಕಲಾವೈಭವವು ಮಾತೆ ಮೈತ್ರಾದೇವಿ ಸಾನಿಧ್ಯದಲ್ಲಿ ಪ್ರೊ. ಸಿದ್ರಾಮಪ್ಪಾ ಮಾಸಿಮಡೆ ಉದ್ಘಾಟಿಸುವರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ಶಿವಯೋಗಿ ಸಿದ್ಧರಾಮೇಶ್ವರ ನಾಟಕ ನಡೆಯಲಿದೆ. ಸುವರ್ಣಾ ಚಿಮಕೋಡೆ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಶಾಂತಬಾಯಿ ಬಿರಾದಾರ, ಸುನಿತಾ ದಾಡಗೆ ಉಪಸ್ಥಿತರಿರುವರು ಎಂದರು.
:ಜ.೩೧ ರಂದು ಬೆಳಗ್ಗೆ ೮ ಗಂಟೆಗೆ ಸಾಮೂಹಿಕ ವಚನ ಪಾರಾಯಣ: ಪೂಜ್ಯ ಬಸವಪ್ರಭು ಸ್ವಾಮಿಗಳ ಸಾನಿಧ್ಯದಲ್ಲಿ ಡಿಡಿಪಿಐ ಸುರೇಶಗೌಡ ಎಚ್.ಜಿ ಉದ್ಘಾಟಿಸುವರು. ಮುದ್ದೆ ಬಿಹಾಳದ ಬಸವತತ್ವ ಚಿಂತಕರಾದ ರುದ್ರೇಶ ಕಿತ್ತೂರ ಅನುಭಾವ ನೀಡುವರು. ವಿವಿಧ ಶಾಲೆಯ ೧೦೦೮ ಮಕ್ಕಳಿಂದ ಸಾಮೂಹಿಕ ವಚನ ಪಾರಾಯಣ ನಡೆಯಲಿದೆ.
ಬೆ.೧೧.೦೦ ಗಂಟೆಗೆ ಯುವ ಶಕ್ತಿ ಸಮಾವೇಶ- ವಿಶ್ವಕಲ್ಯಾಣ ಯುವ ಪರಿಷತ ನಾವ ಸಮಾರಂಭ: ಹಿರೇಮಠ ಸಂಸ್ಥಾನದ ಪೂಜ್ಯರಾದ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ, ಸಂಸದ ಸಾಗರ ಖಂಡ್ರೆ ಉದ್ಘಾಟಿಸುವರು. ಇಸ್ರೋ ಉಪನಿರ್ದೇಶಕಿ ಕೆ.ಎಲ್.ಶಿವಾನಿ ಇವರಿಗೆ ಶರಣ ವಿಜ್ಞಾನಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಬೆಂಗಳೂರು ಕಬ್ಬನ್ ಪಾರ್ಕ ಸಹಾಯಕ ಪೊಲೀಸ್ ಆಯುಕ್ತೆ ಡಾ. ಪ್ರಿಯದರ್ಶಿನಿ ಸಾಣಿಕೊಪ್ಪ ಅನುಭಾವ ನೀಡುವರು. ಜಿ.ಪಂ. ಉಪ ಕಾರ್ಯದರ್ಶಿ ಶರಣಬಸಪ್ಪ ಕೊಟೆಪ್ಪಗೊಳ್. ಶಂಕರ ದೇವನೂರು ಸೇರಿದಂತೆ ಇತರರು ಪಾಲ್ಗೊಳ್ಳುವರು.
ಮಧ್ಯಾಹ್ನ ೨-೩೦ ಗಂಟೆಗೆ ೨೪ನೇ ವಚನ ವಿಜಯೋತ್ಸವ ನಿಮಿತ್ಯ ೨೪ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕ ಹಿರಿಯರನ್ನು ಪೂಜ್ಯರ ಸಾನಿಧ್ಯದಲ್ಲಿ ಗೌರವ ಸಮರ್ಪಣೆ ಮಾಡಲಾಗುವುದು. ಮಧ್ಯಾಹ್ನ ೩.೦೦ ಗಂಟೆಗೆ ಧರ್ಮ ಚಿಂತನಗೋಷ್ಠಿ: ಪೂಜ್ಯ ಶಿವಯೋಗೀಶ್ವರ ಮಹಾಸ್ವಾಮಿಗಳು ವಿರಕ್ತಮಠ ಭಾತಂಬ್ರಾ, ಖೇಳಗಿಯ ಶಿವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ ಡಾ. ಬಸವರಾಜ ಎಲಿಗಾರ ಉದ್ಘಾಟಿಸುವರು. ಬೆಂಗಳೂರು ಲೋಕಾಯುಕ್ತ ನ್ಯಾಯವಾದಿ ಸಂತೋಷ ನಾಗರಾಳೆ ಅನುಭಾವ ನೀಡುವರು. ಜಾಗತಿಕ ಲಿಂಗಾಯತ ಮಹಾಸಭಾದ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಅಧ್ಯಕ್ಷತೆ ವಹಿಸಿಕೊಳ್ಳುವರು.
ಸಾಯಂಕಾಲ ೬.೦೦ ಗಂಟೆಗೆ ಶರಣ ಕಲಾ ವೈಭವ -ವಚನ ನೃತ್ಯೋತ್ಸವ : ಜೆಸ್ಕಾಂ ಶಶಿರೇಖಾ ಪಾಟೀಲ ಉದ್ಘಾಟಿಸುವರು. ಮಹಾದೇವಿ ಬಿರಾದರ ಅಧ್ಯಕ್ಷತೆಯಲ್ಲಿ ನೃತ್ಯಾಂಗನಾ ನಾಟ್ಯ ಮತ್ತು ಕಲಾ ಕೇಂದ್ರ ಬೀದರ ರವರಿಂದ ವಚನ ನೃತ್ಯಗಳು ಜರುಗಲಿವೆ ಅಲ್ಲದೆ ವಚನ ಉಗ್ರಡನೆ, ಯಕ್ಷಗಾನ, ಕೋಲಾಟ ನಡೆಯಲಿವೆ ಎಂದವರು ತಿಳಿಸಿದರು.
ಫೆ: ೦೧ ರಂದು ಬೆಳಗ್ಗೆ ೯.೦೦ ಗಂಟೆಗೆ ಮೆರವಣಿಗೆ: ನಗರದ ಬಸವೇಶ್ವರ ವೃತ್ತದಿಂದ ಬಸವಗಿರಿ ವರೆಗೆ ಲಿಂಗಾಯತ ಧರ್ಮ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮೆರವಣಿಗೆಗೆ ಚಾಲನೆ ನೀಡುವರು. ಜಿ.ಪಂ. ಸಿಇಒ ಡಾ. ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನ್ಯೂಜಲ್ಯಾಂಡ್ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರಗಿ ಧ್ವಜಾರೋಹಣಗೈಯುವರು. ಕಲ್ಪನಾ ಕರಬಸಪ್ಪ ಬೀದೆ ಧರ್ಮ ಗ್ರಂಥಕ್ಕೆ ಪುಷ್ಪಾರ್ಚನೆ, ಸಂತೋಷಿ ರಾಜೇಂದ್ರಕುಮಾರ ಗಂದಗೆ ಗುರುಪೂಜೆ ಮಾಡುವರು. ಮೆರವಣಿಗೆಯಲ್ಲಿ ಗುರುವಚನ ತಲೆ ಮೇಲೆ ಹೊತ್ತ ಸಾವಿರಾರು ಶರಣ-ಶರಣೆಯರು. ನಾಡಿನ ವಿವಿಧೆಡೆಯಿಂದ ಆಗಮಿಸುವ ೨೫ಕ್ಕೂ ಅಧಿಕ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ. ಛತ್ರ, ಚಾಮರ ಬಸವ ಧ್ವಜಗಳು, ಶರಣ ವೇಷಧಾರಿಗಳು ಆಕರ್ಷಿಸಲಿದ್ದಾರೆ. ವಚನ ಸಾಹಿತ್ಯ ಹೊತ್ತ ಪುಷ್ಪಾಲಂಕೃತ ರಥ ಮೆರವಣಿಗೆಯ ಕೇಂದ್ರ ಬಿಂದುವಾಗಲಿದೆ. ಮಧ್ಯಾಹ್ನ ೨-೩೦ಕ್ಕೆ ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ: ನೀಡಸೊಸಿ ಜಗದ್ಗುರು ಸಿದ್ಧಸಂಸ್ಥಾನದ ಮಠದ ಪೀಠಾಧ್ಯಕ್ಷರಾದ ಪೂಜ್ಯ ಜಗದ್ಗುರು ಪಂಚಮಲಿAಗೇಶ್ವರ ಮಹಾಸ್ವಾಮಿಗಳು, ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ಪಾಂಡೋಮಟ್ಟಿ ವಿರಕ್ತ ಮಠದ ಪೂಜ್ಯ ಗುರುಬಸವ ಮಹಾಸ್ವಾಮಿಗಳು, ಜೇವರ್ಗಿ ಜಗದ್ಗುರು ಶಂಕರದೇವರ ಗುರುಪೀಠದ ಸಿದ್ಧಬಸವ ಕಬೀರ ಮಹಾಸ್ವಾಮಿಗಳು ಹಾಗೂ ತನ್ನ ದಿವ್ಯ ಸಾನಿಧ್ಯದಲ್ಲಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸುವರು. ಉಸ್ತುವಾರಿ ಸಚಿವರಾದ ಈಶ್ವರ ಬಿ, ಖಂಡ್ರೆ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಸಚಿವರಾದ ರಹೀಂ ಖಾನ, ಶಾಸಕರಾದ ಪ್ರಭು ಚವ್ಹಾಣ, ಶರಣು ಸಲಗರ ಡಾ. ಡಾ.ಸಿದ್ದು ಪಾಟೀಲ, ಡಾ.ಶೈಲೆಂದ್ರ ಬೆಲ್ದಾಳೆ, ಬಸವರಾಜ ಮತ್ತಿಮೂಡ ಡಾ. ಚಂದ್ರಶೇಖರ ಪಾಟೀಲ ಭೀಮರಾವ ಪಾಟೀಲ ಸೇರಿದಂತೆ ಇತರರು ಪಾಲ್ಗೊಳ್ಳುವರು ಎಂದವರು ಹೇಳಿದರು.
ಗುರುಬಸವ ಪುರಸ್ಕಾರ: ಪ್ರತಿ ವರ್ಷ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಗುರುಬಸವ ಪುರಸ್ಕಾರ
ನೀಡಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಗುರುಬಸವ ಪುರಸ್ಕಾರವನ್ನು ನಾಡಿನ ಪತ್ರಕರ್ತರು ಹಾಗೂ ಹರಳಯ್ಯ ಸಮಾಜದ ಮುಖಂಡರಾದ ಡಾ. ಮಾರ್ಕಂಡೇಯ ದೊಡಮನಿ, ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖುಬಾ, ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಸಿ.ಸೋಮಶೇಖರ ಅವರಿಗೆ ಪ್ರದಾನ ಮಾಡಲಾಗುತ್ತಿದೆ.
ಶರಣ ಸೇವಾ ಪುರಸ್ಕಾರ: ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಈ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ೧೪ ಜನರನ್ನು ಶರಣ ಸೇವಾ ಪುರಸ್ಕಾರ ನೀಡಿ ಗೌರವಿಲಾಗುತ್ತಿದೆ.
ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಡಿನ ಅನೇಕ ಪೂಜ್ಯರು, ಸಾಹಿತಿಗಳು, ಚಿಂತಕರು, ಗಣ್ಯರು, ಚಿಂತಕರು ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಪ್ರತಿ ದಿನ ವಚನ ಸಂಗೀತ ವಚನ ಗಾಯನ, ವಚನ ನೃತ್ಯ, ಸಮೂಹ ಗಾಯನ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಹಾ ಮಂಟಪ : ಸುಮಾರು ೧೦ ಸಾವಿರಕ್ಕೂ ಅಧಿಕ ಜನ ಕುಳಿತುಕೊಳ್ಳುವ ಲೋಕನಾಯಕ ಲಿಂ. ಭೀಮಣ್ಣ ಖಂಡ್ರೆ ಮಹಾ ಮಂಟಪ ನಿರ್ಮಿಸಲಾಗಿದೆ.
ಕಾರ ರ್ಯಾಲಿ: ಇಂದು ವಚನ ವಿಜಯೋತ್ಸವ ನಿಮಿತ್ಯ ಗುಂಪಾದಿAದ ಬಸವಗಿರಿಯ ವರೆಗೆ ಕಾರ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಸಾರಿಗೆ ಬಸ ವ್ಯವಸ್ಥೆ: ಬಸವಗಿರಿಗೆ ನಗರದ ವಿವಿದೆಡೆಯಿಂದ ಬೆಳಗ್ಗೆ ೭-೩೦ ರಿಂದ ರಾತ್ರಿಯ ವರೆಗೆ “ಸೀಟಿ ಬಸಗಳನ್ನು ಓಡಿಸಲು ಸಾರಿಗೆ ಇಲಾಖೆ ಸಮ್ಮತಿಸಿದೆ. ಗುಂಪಾ ನೌಬಾದ, ಮಂಗಲಪೇಟ್ ಚೌಬಾರ ಸ್ಥಳಗಳಿಂದ ಸಿಟಿ ಬಸ್‌ಗಳು ಬಸವಗಿರಿಗೆ ಬರಲಿವೆ.
ಪ್ರಸಾದ ಮತ್ತು ವಸತಿ ವ್ಯವಸ್ಥೆ: ಕಾರ್ಯಕ್ರಮಮಕ್ಕೆ ಆಗಮಿಸುವವರೆಲ್ಲರಿಗೂ ಮೂರುವದಿನ ಪ್ರಸಾದ ವ್ಯವಸ್ಥೆ ಇರುತ್ತದೆ. ಕರ್ನಾಟಕದ ದೇಸಿ ಊಟ ಇರಲಿದ್ದು ಮಲಾದಿ, ಕುಟ್ಟಿದ ಗೋಧಿ ಹುಗ್ಗಿ, ಅನ್ನ ಸಾಂಬಾರು ಸಜ್ಜೆ, ಜೋಳದ ರೊಟ್ಟಿ ಮುಂತಾದವುಗಳು ಹಸಿವು ತಣಿಸಲಿವೆ. ಊಟದ ವ್ಯವಸ್ಥೆ ಅಚ್ಚುಕಟ್ಟಾಗಿರಲು ಪ್ರತ್ಯೇಕ ಸಮಿತಿ ಹಾಗೂ ಸ್ವಯಂ ಸೇವಕರ ತಂಡಗಳು ಇವೆ. ಬೇರೆಡೆಯಿಂದ ಆಗಮಿಸುವವರಿಗೆ ಬಸವಗಿರಿಯಲ್ಲಿ ಹಾಗೂ ಇತರ ಶರಣರ ಮನೆಯಲ್ಲಿ ವಸತಿ ವ್ಯವಸ್ಥೆ ಇರುತ್ತದೆ.
ಆರಂಭೋತ್ಸವ : ವಚನ ವಿಜಯೋತ್ಸವ ಆರಂಬೋತ್ಸವ ನಿಮಿತ್ಯ ಬಸವಗಿರಿಯಲ್ಲಿ ಜ.೨೪ ರಿಂದ ೨೯ ರಚವರಗೆ ಬೆಳ್ಳಗೆ ೭-೩೦ ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜಾಯೋಗ ಹಾಗೂ ದಿನಾಂಕ: ೨೫ ರಿಂದ ೨೯ ರ ವರೆಗೆ ಶರಣ ಉದ್ಯಾನದಲ್ಲಿ ಸಾಯಂಕಾಲ ೬:೦೦ ಗಂಟೆಯಿAದ ಪ್ರೊ. ಸಿದ್ಧಣ್ಣಾ ಲಂಗೋಟಿ ಅವರಿಂದ ಚೆನ್ನಬಸವಣ್ಣನವರ ಕರಣ ಹಸಿಗೆ ತಾತ್ವಿಕ ಚಿಂತನ ಕುರಿತು ಪ್ರವಚನ ನಡೆಯುತ್ತಿದೆ.
ಮಹಿಳಾ ವಚನ ಭಜನಾ ಸ್ಪರ್ಧೆ: ಈ ತಿಂಗಳ ೧೮ ರಂದು ವಚನ ವಿಜಯೋತ್ಸವದ ನಿಮಿತ್ಯ ಮಹಿಳಾ ವಚನಾ ಭಜನಾ ಸ್ಪರ್ಧೆ ನಡೆದಿದ್ದು, ೧೮ ಭಜನಾ ತಂಡಗಳು ಭಾಗವಹಿಸಿದ್ದವು ಅದರಲ್ಲಿ ಅಲ್ಲಮಪ್ರಭು ಭಜನಾ ತಂಡ ಗುಂಪಾ ಪ್ರಥಮ, ಧ್ಯಾನ ಮಂದಿರ ಸತ್ಸಂಗ ಭಜನಾ ತಂಡ ದ್ವಿತೀಯ ಹಾಗೂ ಅಕ್ಕನ ಬಳಗ ಹುಲಸೂರು ತಂಡ ತೃತೀಯ ಸ್ಥಾನ ಪಡೆದಿವೆ ಇವರೆಲ್ಲರಿಗೂ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ಮತ್ತು ಭಾಗವಹಿದವರೆಲ್ಲರಿಗೂ ಪ್ರಮಾಣ ಪತ್ರವನ್ನು ವಚನ: ವಿಜಯೋತ್ಸವ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಅಕ್ಕ ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಚಿಂತನಕಾರರಾದ ಸಿದ್ದಣ್ಣ ಲಂಗೋಟಿ, ಹಿರಿಯರಾದ ಬಸವರಾಜ ಬುಳ್ಳಾ, ಸೋಮಶೇಖರ ಪಾಟೀಲ ಗಾದಗಿ, ರಾಜೇಂದ್ರಕುಮಾರ ಗಂದಗೆ, ಶರಣಪ್ಪ ಮಿಠಾರೆ, ಚಂದ್ರಕಾAತ ಮಿರ್ಚೆ, ಸುರೇಶ ಚನಶೆಟ್ಟಿ, ಬಾಬು ವಾಲಿ, ರಾಜಕುಮಾರ ಟಿಳ್ಳೆಕರ್, ಆದಿಶ ವಾಲಿ, ವಿಶ್ವನಾಥ ಕಾಜಿ, ಜಯರಾಜ ಖಂಡ್ರೆ, ವಿಜಯಲಕ್ಷ್ಮೀ ಸುಲೇಪೇಟ್, ಶಿವಶಂಕರ ಟೋಕರೆ ಹಾಗೂ ಇತರರಿದ್ದರು.























