24 ಗಂಟೆಗಳ ರಾಷ್ಟ್ರೀಯ ಹ್ಯಾಕಥಾನ್ ಪ್ರಶಸ್ತಿ ವಿತರಣಾ ಸಮಾರಂಭ

ಕಲಬುರಗಿ: ಫೆ.2:ಕೇಂದ್ರ ಕರ್ನಾಟಕ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗವು ಜನವರಿ 29ರಂದು ಮಧ್ಯಾಹ್ನ 2.00 ಗಂಟೆಯಿಂದ ಜನವರಿ 30ರಂದು ಮಧ್ಯಾಹ್ನ 2.00 ಗಂಟೆಯವರೆಗೆ ಅUಏಅS-ಂIಖಿಊಔಓ ಎಂಬ 24 ಗಂಟೆಗಳ ರಾಷ್ಟ್ರೀಯ ಹ್ಯಾಕಥಾನ್ ಅನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮವು ಉತ್ತರ ಕರ್ನಾಟಕ ಪ್ರದೇಶದಲ್ಲಿ ನಡೆದ ಮೊದಲ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಆಗಿದ್ದು, ಈ ಭಾಗದ ಶೈಕ್ಷಣಿಕ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿ ಪರಿಣಮಿಸಿತು.
ಈ ಹ್ಯಾಕಥಾನ್ನಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶದ ವಿವಿಧ ಕಾಲೇಜುಗಳ ವಿದ್ಯಾರ್ಥಿ ಆವಿμÁ್ಕರಕರು ಉತ್ಸಾಹದಿಂದ ಭಾಗವಹಿಸಿದರು. ಅಂತಿಮ ಹಂತಕ್ಕೆ ಆಯ್ಕೆಯಾದ 30 ತಂಡಗಳು ತಂತ್ರಜ್ಞಾನಾಧಾರಿತ ನವೀನ ಪರಿಹಾರಗಳನ್ನು ಪ್ರಸ್ತುತಪಡಿಸಿದವು.
ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಕೇಂದ್ರ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಅವರು ವಿದ್ಯಾರ್ಥಿಗಳು ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಉದ್ಯಮಶೀಲತೆಯನ್ನು ಬೆಳೆಸಿ, ವಿಕಸಿತ ಭಾರತ 2047 ದೃಷ್ಟಿಕೋನಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುವಂತೆ ಪ್ರೇರೇಪಿಸಿದರು. 24 ಗಂಟೆಗಳ ನಿರಂತರ ನವೋದ್ಯಮ ಸವಾಲನ್ನು ಯಶಸ್ವಿಯಾಗಿ ಆಯೋಜಿಸಿದ ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ಅವರು ಅಭಿನಂದಿಸಿ, ವಿಜೇತರಿಗೆ ಶುಭಾಶಯಗಳನ್ನು ತಿಳಿಸಿದರು. ವಿಜೇತ ತಂಡಗಳಿಗೆ ಪ್ರಮಾಣಪತ್ರಗಳು, ಟ್ರೋಫಿಗಳು ಮತ್ತು ಉಡುಗೊರೆ ಪ್ಯಾಕ್ಗಳನ್ನು ಮಾನ್ಯ ಕುಲಪತಿಗಳವರು ಪ್ರದಾನಿಸಿದರು.
ಚೆನ್ನೈ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಖಿeಚಿm ಐumiಟಿಚಿಘಿ, ತಂಡದ ನಾಯಕ ಅರುಲ್ ಅರಾವಿಂದ್ ಹಾಗೂ ಸಹತಂಡದ ಸದಸ್ಯರಾದ ಅಜೈ ಕುಮಾರ್, ಹರೀಶ್ ಮತ್ತು ಅಸ್ವತ್ ಅವರೊಂದಿಗೆ ಚಾಂಪಿಯನ್ ಪಟ್ಟವನ್ನು ಗೆದ್ದು ₹20,000 ನಗದು ಬಹುಮಾನ ಹಾಗೂ ಸ್ಮರಣಿಕೆಗಳನ್ನು ಪಡೆದರು. ರನ್ನರ್-ಅಪ್ ಸ್ಥಾನವನ್ನು ವಿಐಟಿ ವೆಲ್ಲೂರಿನ ಖಿhe ಆeseಡಿಣ ಗಿiಠಿeಡಿs ತಂಡವು ಪಡೆದುಕೊಂಡಿದ್ದು, ತಂಡದ ನಾಯಕ ಸುಭಜಿತ್ ದತ್ತ ಗುಪ್ತಾ ಮತ್ತು ಸಹತಂಡದ ಸದಸ್ಯ ಧ್ರುವ್ ಹರೀಶ್ ಅವರಿಗೆ ₹10,000 ನಗದು ಬಹುಮಾನ ಹಾಗೂ ಸ್ಮರಣಿಕೆಗಳು ಲಭಿಸಿವೆ.
ಇದೇ ವೇಳೆ ಡೊಮೇನ್ ವಿಜೇತ ಪ್ರಶಸ್ತಿಗಳನ್ನು ಪಡೆದ ಅoಜiಟಿg ಅoಟಿqueಡಿoಡಿs, ಂI ಆಥಿಟಿಚಿmos, ಓeuಡಿಚಿಟ ಓexus ಮತ್ತು ಓeಣeಛಿx ತಂಡಗಳಿಗೆ ತಲಾ ₹5,000 ನಗದು ಬಹುಮಾನ ನೀಡಲಾಯಿತು. ಎಲ್ಲಾ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಒಂಖಿಐಂಃ ಸಬ್ಸ್ಕ್ರಿಪ್ಶನ್ಗಳು ಹಾಗೂ Uಟಿsಣoಠಿ ಗೂಡೀಸ್ ವಿತರಿಸಲಾಯಿತು.
ಹ್ಯಾಕಥಾನ್ ಸಂಯೋಜಕ ಡಾ. ರಾಕೇಶ್ ಕುಮಾರ್ ಗೋಧಿ ಅವರು ಅUಏಅS-ಂIಖಿಊಔಓನ ಉದ್ದೇಶಗಳನ್ನು ವಿವರಿಸಿ, ನೈಜ ಸಮಯದ ಸಮಸ್ಯೆ ಪರಿಹಾರ, ನವೀನತೆ ಮತ್ತು ಅಂತರಶಾಖಾ ಸಹಕಾರದ ಮಹತ್ವವನ್ನು ಒತ್ತಿ ಹೇಳಿದರು. ಈ ಯೋಜನೆಗಳನ್ನು ಒiಛಿಡಿosoಜಿಣ, Iಃಒ, ಅ-ಆಂಅ ಮತ್ತು ಅoಟಿಜಿಟueಟಿಣ ಸಂಸ್ಥೆಗಳ ತಜ್ಞರನ್ನು ಒಳಗೊಂಡ ಜ್ಯೂರಿ ತಂಡವು 24 ಗಂಟೆಗಳ ಕಾಲ ನಿರಂತರವಾಗಿ ಮೌಲ್ಯಮಾಪನ ಮಾಡಿದ್ದು, ತಾಂತ್ರಿಕ ಗಂಭೀರತೆ ಮತ್ತು ಉದ್ಯಮೋಚಿತತೆಯನ್ನು ಖಚಿತಪಡಿಸಿತು ಎಂದು ತಿಳಿಸಿದರು.
ಪೂರ್ವ-ಕಾರ್ಯಕ್ರಮ ಂI ಶಿಖರ ಸಮ್ಮೇಳನದ ನೋಡಲ್ ಅಧಿಕಾರಿ ಡಾ. ನಾಗರಾಜ ವಿ. ಧಾರವಾಡಕರ ಅವರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದು, ಸಮ್ಮೇಳನದ ಸಮನ್ವಯ ಮತ್ತು ಕಾರ್ಯಕ್ರಮದ ಸುಗಮ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಹ್ಯಾಕಥಾನ್ ಅನ್ನು Iಇಇಇ ಕಂಪ್ಯೂಟರ್ ಸೊಸೈಟಿ ಚಾಪ್ಟರ್, ಕೇಂದ್ರ ಕರ್ನಾಟಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದು, Uಟಿsಣoಠಿ, ಂಂS Iಟಿvesಣmeಟಿಣs ಮತ್ತು ಒಂಖಿಐಂಃ ಸಂಸ್ಥೆಗಳು ಪ್ರಾಯೋಜಕರಾಗಿ ಬೆಂಬಲ ನೀಡಿದವು. ಕಾರ್ಯಕ್ರಮದ ಕೊನೆಯಲ್ಲಿ ಪೆÇ್ರ. ಶ್ರೀಕಂಠಯ್ಯ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು.