ಸಂಜೆವಾಣಿ ನ್ಯೂಸ್
ಮೈಸೂರು: ಆ.21:- ನಗರದ ಉದಯಗಿರಿ ಸಮೀಪದಲ್ಲಿರುವ ಸಭಾ ಫಂಕ್ಷನ್ ಹಾಲ್‍ನಲ್ಲಿ ಆಗಸ್ಟ್, 24ರಂದು ಸಂಜೆ 4 ಗಂಟೆಗೆ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಗರಾದ ಇಮಾಂ ಹಸನ್ ಅವರ ಪುಣ್ಯಸ್ಮರಣೆ ಶಹಾದತ್-ಎ-ಇಮಾಮ್ ಹಸನ್ ಮತ್ತು ಸೂಫಿ ಮುಷಾಯಿಖೀನ್ ಉಲೇಮ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಖಾನ್ ಖಾ ಅಸೋಸಿಯೇಷನ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷರಾದ ಆಲಂ ನವಾಜ್ ಮುನವರ್ ಅಲೀ ಷಾ ಖಾದ್ರಿ ಮಧಾರಿ ಹೇಳಿದರು.
ಬುಧವಾರ ಉದಯಗಿರಿ ಬಡಾವಣೆಯ ಉಸ್ತಾದ್ ದವಾಖಾನ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,
ಸಮ್ಮೇಳನದಲ್ಲಿ ಪ್ರವಾದಿ ಮಹಮದ್ ಪೈಗಂಬರ್ ಅವರು, ನಮಗೆ ನೀಡುವ ಸಂದೇಶಗಳನ್ನು ಪ್ರಸ್ತಾಪಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು, ಅಲ್ಲದೇ, ಇಮಾಂ ಹಸನ್ ಅವರ ತ್ಯಾಗದ ಸ್ಮರಣೆಯನ್ನು ಮಾಡುವ ಮೂಲಕ ಇಂದಿನ ಯುವ ಜನಾಂಗದಲ್ಲಿ ತ್ಯಾಗದ ಮಹತ್ವ, ಜೀವನದಲ್ಲಿ ನಾವು ಯಾವ ರೀತಿ ಬದುಕಬೇಕು ಎನ್ನುವ ಬಗ್ಗೆ ಸಮ್ಮೇಳನದಲ್ಲಿ ದೇಶದ ಖ್ಯಾತ ಸೂಫಿ ಸಂತರ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.
ಸಮ್ಮೇಳನದಲ್ಲಿ ಭಾರತದ ಪ್ರಖ್ಯಾತ ವಾಗ್ಮಿ ಮತ್ತು ಧರ್ಮ ಪ್ರಚಾರಕರಾದ ಸೈಯದ್ ಹಬೀಬ್ ಅಹಮದ್ ಹುಸೈನಿ ಹೈದರಾಬಾದಿ ಸೇರಿದಂತೆ
ಸೂಫಿ ವಿಧ್ವಾಂಸರಾದ ಹಜರತ್ ಸೈಯದ್ ಅಮೀನ್-ಉಲ್-ಹಕ್ ಚಿಸ್ತಿ ಖಾದ್ರಿ ನಕಲ್‍ಬಂದಿ ಸಾಹೇಬ್, ಹಜರತ್ ಡಾ. ಸೈಯದ್ ಆರಿಫ್ ಹುಸೇನ್ ಷಾ ವಾರ್ಸಿ ಸಾಹೇಬ್, ಹಜರತ್ ಗುಲಾಂ ಮೆಹಬೂಬ್
ಶಾ ಅಲ್ ಜೀಲಾನಿ, ಹಜರತ್ ಸೈಯದ್ ಶಾ, ಜೈನ್-ಉಲ್-ಬುದಿನ್ ತುರಾಬಿ ಖಾದ್ರಿ ಶಾರಿ ಸಾಹೇಬ್ ಅವರು ಮುಖ್ಯ
ಭಾಷಣಕಾರರಾಗಿ ಭಾಗವಹಿಸಿ ಇಸ್ಲಾಮಿಕ್, ಸೂಫಿ ಮತ್ತು ಅಹಲೆ ಸುನ್ನತ್ ಬಗ್ಗೆ ಮಾತನಾಡಲಿದ್ದಾರೆ ಎಂದು ವಿವರಣೆ ನೀಡಿದರು.
ಸಮ್ಮೇಳನದಲ್ಲಿ ಗೌರವ ಅತಿಥಿಗಳಾಗಿ ಹಜರತ್ ಸೈಯದ್ ಬುರ್ಹಾನ್ ಷಾ ಖಾದ್ರಿ ಸಾಹೇಬ್, ಪ್ರಸಿದ್ಧ ಪೀರ್ ಹಕೀಮ್ ಸೈಯದ್ ಅಸ್ಲಂ, ಡಾ. ಖಾದ್ರಿ ಸಾಹೇಬ್, ಹಜರತ್ ಮೌಲಾನಾ ಸೂಫಿ ಸೈಯದ್ ಮುಖಾರ್ ಅಹ್ಮದ್ ನೂರಿ ಬಾಬಾ ಸಾಹೇಬ್ ಅವರು ಉಪಸ್ಥಿತರಿದ್ದು,
ದೇಶದ ವಿವಿಧ ಕಡೆಗಳಿಂದ ಹತ್ತಾರು ಸೂಫಿ ಸಂತರು ಆಗಮಿಸಲಿದ್ದಾರೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಆಗಮಿಸಿ ಧರ್ಮ ಸಂದೇಶವನ್ನು ಅಸ್ವಾಧಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು, ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಇದ್ದು, ಪ್ರಸಾದ ವಿನಿಯೋಗವೂ ಇರುತ್ತದೆ ಎಂದು ಹೇಳಿದರು.
ಸಮ್ಮೇಳನವು ಪವಿತ್ರ ಕುರಾನ್ ಪಠಣ (ಖಿರತ್) ಮತ್ತು ಪ್ರವಾದಿ ಮುಹಮ್ಮದ್ (ನಾತ್ ಷರೀಫ್) ಅವರ ಶ್ಲೋಕಗಳೊಂದಿಗೆ ಪ್ರಾರಂಭವಾಗುತ್ತದೆ. ನಂತರ ಮೆಹಫಿಲ್ ಝಿಕ್ರೋ ಅಜ್‍ಕರ್, ದಾರುದ್ ಷರೀಫ್ ಕಾರ್ಯಕ್ರಮಗಳು
ನಡೆಯಲಿವೆ ಎಂದು ಅವರು ವಿವರಣೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ಚಿಸ್ತಿಯಾ ಫೌಂಡೇಷನ್ ಅಧ್ಯಕ್ಷರಾದ ಖಾಜಾ ಮುಷೀರ್ ಚಿಸ್ತಿ, ಬಿನ್‍ಹಜುಲ್ ಕುರ್‍ಆರ್ ಇಂಟರ್‍ನ್ಯಾಷನಲ್ ಮೈಸೂರು ಅಧ್ಯಕ್ಷರಾದ ನೂರುಲ್ಲಾ ಷಾ ಖಾದ್ರಿ, ಸೈಯದ್ ಅಜರುದ್ದೀನ್ ಅಲಿ, ಸೈಯದ್ ಅಸ್ಲಂ ಷಾ ಖಾದ್ರಿ ಇದ್ದರು.


























