ಹಿಪ್ಪರಗಿ ಜಲಾಶಯದ ೨೨ನೇ ಗೇಟ್ ಕಟ್: ನದಿ ಪಾತ್ರಕ್ಕೆ ಅಪಾರ ಪ್ರಮಾಣದ ನೀರು ಸ್ಥಳಕ್ಕೆ ಸಚಿವ ತಿಮ್ಮಾಪುರ ಭೇಟಿ

ಸಂಜೆ ವಾಣಿ ವಾರ್ತೆ
ಜಮಖಂಡಿ:ಜ.೭:ತಾಲೂಕಿನ ಹಿಪ್ಪರಗಿ ಜಲಾಶಯದ ಕೃಷ್ಣಾ ನದಿಯ ನೀರಿನ ಒತ್ತಡದಿಂದ
೨೨ನೇ ಗೇಟ್ ಮುರಿದ ಪರಿಣಾಮವಾಗಿ ನದಿಯ ಪಾತ್ರದಲ್ಲಿ ಅಪಾರ ಪ್ರಮಾಣದ ನೀರು ಹರಿದು ಹೋಗಿರುವ ಘಟನೆ ಜರುಗಿದೆ.
ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ,ಜಿಲ್ಲಾಧಿಕಾರಿ ಸಂಗ್ಗಪ್ಪ,ಜಮಖAಡಿ ತಹಶಿಲ್ದಾರ ಅನೀಲ ಬಡಗೇರ, ರಬಕವಿ ಬನಹಟ್ಟಿ ತಹಶಿಲ್ದಾರ ಗೀರಿಶ ಸಾದ್ವಿ,ಹಿಪ್ಪರಗಿ ಜಲಾಶಯದ ಎಇಇ ಪ್ರವೀಣ್ ಹುಣಸಿಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ
ಸಚಿವ ಆರ್.ಬಿ.ತಿಮ್ಮಾಪುರ ಭೇಟಿ ನೀಡಿ ಮಾತನಾಡಿ ಹಲವಾರು ವರ್ಷಗಳಿಂದ ಗೇಟ್ ಗಳು ಇರುವದರಿಂದ ನದಿಯ ರಬಸಕ್ಕೆ ಈ ಘಟನೆ ಜರುಗಿದೆ ಅಧಿಕಾರಿಗಳಿಗೆ ತ್ವರಿತವಾಗಿ ಕಾರ್ಯ ಮಾಡಲು ತಿಳಿಸಲಾಗಿದೆ ಮತ್ತು ಹೊಸದಾಗಿ ಗೇಟಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ ಎಂದರು.
ಜಲಾಶಯದಲ್ಲಿ ಅಂದಾಜು ಆರು ಟಿಎಂಸಿ ನೀರು ಸಂಗ್ರಹವಿದ್ದು .೭೫ ರಷ್ಟು ನೀರು ಮಾತ್ರ ನದಿ ಪಾತ್ರಕ್ಕೆ ಹರಿದು ಹೋಗಬಹುದು ಅದಕಿಂತ ಹೆಚ್ಚಿಗೆ ನೀರು ಪೋಲ ಆಗುವದಿಲ್ಲ ಆದಷ್ಟು ಬೇಗ ಅಧಿಕಾರಿಗಳು ಗೇಟಗಳನ್ನು ಅಳವಡಿಸುತ್ತಾರೆ ನೀರಿನ ಹರಿವು ಕಡಿಮೆ ಇರುವದರಿಂದ ಮುಂದಿನ ಗ್ರಾಮದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗುವದಿಲ್ಲ ಎಂದು ಹೇಳಿದರು.