ಹಿಪ್ಪರಗಿ ಜಲಾಶಯದ ೨೨ ಗೇಟಗಳು ಶೀಘ್ರದಲ್ಲೇ ನವೀಕರಣ: ಮಾಜಿ ಶಾಸಕ ಆನಂದ ನ್ಯಾಮಗೌಡ

ಸಂಜೆ ವಾಣಿ ವಾರ್ತೆ
ಜಮಖಂಡಿ:ಜ.೧೧: ತಾಲೂಕಿನ ಹಿಪ್ಪರಗಿ ಜಲಾಶಯದ ೨೨ ಗೇಟ್‌ಗಳನ್ನು ಕೂಡಲೇ ಬದಲಾಯಿಸಬೇಕು ಎಂದು ಡಿಸಿಎಂ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿಲಾಗಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿ ವಿಜಯಪುರದ ಬಸ ನಿಲ್ದಾಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿಕೆ ಶಿವುಕುಮಾರ ಅವರನ್ನು ನಾನು ಮತ್ತು ತೆರದಾಳ ಮತ ಕ್ಷೇತ್ರದ ಅಭ್ಯರ್ಥಿ ಸಿದ್ದು ಕೊಣ್ಣೂರ ಅವರು ಭೇಟಿ ಮಾಡಿ ಜಲಾಶಯದ ಸದ್ಯದ ಸ್ಥಿತಿಗತಿಯ ಬಗ್ಗೆ ವಿವರಿಸಿ ೨೨ ಗೇಟಗಳ ನವಿಕರಣ ಬಗ್ಗೆ ಮನವಿ ಸಲ್ಲಿಸಿದ್ದಾಗ ತತಕ್ಷಣ ಡಿಸಿಎಂ ಅವರು ನಮ್ಮ ಲೆಟರ್ ಹೆಡ್ ಮೇಲೆ ಅವುಗಳನ್ನು ಬದಲಾವಣೆ ಮಾಡಲು ಅನುಮತಿ ನಿಡಿದ್ದಾರೆ.ಈಗಾಗಲೇ ಇಂಜಿನಿಯರ್ಸ್ ಎಸ್ಟಿಮೇಟ್ ಮಾಡಿ ಪ್ರಪೋಜಲ್ ತೆಗೆದುಕೊಂಡು ಹೊಗುವ ಕೆಲಸ ಮಾಡುತ್ತಾಯಿದ್ದಾರೆ ಶೀಘ್ರದಲ್ಲೇ ಹೊಸ ಗೇಟಗಳನ್ನು ಅಳವಡಿಸು ಕಾರ್ಯ ಪ್ರಾರಂಭವಾಗುತ್ತದೆ ಎಂದರು.
೬ ಟಿಎಂಸಿ ಸಾಮರ್ಥ್ಯದ ಈ ಹಿಪ್ಪರಗಿ ಜಲಾಶಯ ಈಗಾಗಲೇ ಅಂದಾಜು ೨.೦೩ ಟಿಎಂಸಿ ನೀರು ಪೋಲಾಗಿದೆ ಆದರೆ ನಮ್ಮ ಸದೈವ್ ಮೇಲಿಂದ ಇನ್ನೂ ನೀರು ೫೦೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಾಯಿದೆ ಇನ್ನೂ ೧೦-೧೫ ದಿನಗಳ ಕಾಲ ನೀರು ಹರಿದು ಬರುತ್ತದೆ ಬೆಸುಗೆ ಸಮಯದಲ್ಲಿ ನೀರಿನ ಸಮಸ್ಯ ಆಗಬಹುದು ಎಂದು ನಮ್ಮ ರೈತರು ಆತಂಕ ಪಡುತ್ತಿದ್ದಾರೆ ಭಯ ಪಡು ಅವಶ್ಯಕತೆ ಇಲ್ಲ ಆದರೂ ಕೂಡ ಬೆಸುಗೆಯಲ್ಲಿ ನೀರಿನ ಸಮಸ್ಯ ಆಗಬಾರದು ಎಂದು ಈಗಿನಿಂದಲೆ ನಮ್ಮ ಹಿರಿಯ ನಾಗರಿಕರ ಹಾಗೂ ರೈತರ ಸಹಕಾರ ತೆಗೆದುಕೊಂಡು ಮಹಾರಾಷ್ಟ್ರ ಅಥವಾ ಹಿಡಕ ಜಲಾಶಯದಿಂದ ನೀರು ಬಿಡುಗಡೆ ಮಾಡಿಸುವ ಪ್ರಯತ್ನ ಮಾಡಲಾಗುವದು ಎಂದು ಹೇಳಿದರು.