
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಫೆ.05:- ರಾಜಕಾರಣೀಗಳು ರೈತರನ್ನು ಒಡೆದು ಅಳುವ ಕೆಲಸ ಮಾಡುತ್ತಿದ್ದಾರೆ ರೈತ ಸಂಘಟನೆ ಒಗ್ಗಟ್ಟಿನಿಂದ ಹೋರಾಟ ಮಾಡುವ ಮೂಲಕ ಸರಕಾರವನ್ನುಎಚ್ಚರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಪೆÇ್ರೀಫೆಸರ್ ಎಂ.ಡಿ.ನಂಜುಂಡಸ್ವಾಮಿರವ 22 ನೇ ವರ್ಷದ ಹುತಾತ್ಮ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಟರ್ಚಾನೆ ಮಾಡಿ, ಮಾತನಾಡಿದ ಅವರು, ಪೆÇ್ರೀ.ಎಂ.ಡಿ ನಂಜುಂಡಸ್ವಾಮಿರವರು ವಿದೇಶದಲ್ಲಿ ವ್ಯಾಸಂಗ ಮಾಡಿ ಕರ್ನಾಟಕಕ್ಕೆ ಆಗಮಿಸಿ ರಾಜ್ಯದ ರೈತರ ಪರ ಧ್ವನಿಯಾಗಿ ನೀರ ಚಳುವಳಿ, ಕೋಳಿ ಚಳುವಳಿ, ಹಾಗೂ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಅನೇಕ ಚಳುವಳಿ ಮಾಡುವ ಮೂಲಕ 250 ರಾಷ್ಟ್ರಗಳಲ್ಲಿ ಪ್ರತಿನಿಧಿಸಿ ರೈತರ ಪರವಾಗಿ ಹೋರಾಟ ಮಾಡುವ ಮೂಲಕ ವಿಶ್ವ ರೈತನಾಯಕರಾಗಿದ್ದರು ಎಂದರು.
ಪೆÇ್ರೀ.ನಂಜುಂಡಸ್ವಾಮಿರವರು ಬಸವಣ್ಣ, ಪೆರಿಯಾರ್, ದೇಶದ ಸಂವಿಧಾನ ಆಸೆಗಳಂತೆ ಎಲ್ಲಾ ವರ್ಗದ ಜನರನ್ನು ರೈತ ಸಂಘಟನೆಯಲ್ಲಿ ಒಗ್ಗೂಡಿಸಿ ಲಕ್ಷಾಂತರ ಚಳುವಳಿಗಳನ್ನು ಮಾಡಿದರು ಎಂದು ಸ್ಮರಿಸಿದರು.
ಇದನ್ನು ಅರಿತ ರಾಜಕಾರಣಿಗಳು ರೈತ ಸಂಘಟನೆ ಒಗ್ಗೂಡಿದರೆ, ಸರಕಾರಕ್ಕೆ ಹಿನ್ನಡೆ ಉಂಟಾಗಲಿದೆ ಎಂದು ಭಾವಿಸಿ ರೈತರ ಸಂಘಟನೆಗಳನ್ನು ಒಡೆದಾಳುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತದ ತಾಲೂಕು ಗೌರವಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಬೂಹಳ್ಳಿ ಶಂಕರ್, ಉಪಾಧ್ಯಕ್ಷ ತಲಕಾಡು ದಿನೇಶ್, ಜಿಲ್ಲಾ ಮುಖಂಡ ಚಿದರವಳ್ಳಿ ನಾಗೇಂದ್ರ, ಇ.ರಾಜು, ಕೊತ್ತೇಗಾಲ ಮಹೇಶ್ ಕುಮಾರ್, ಶಾಂತಕುಮಾರ್, ಮಾಡ್ರಹಳ್ಳಿ ನಂಜುಂಡಸ್ವಾಮಿ, ರಾಮಚಂದ್ರಗೌಡ, ಕೆಂಪೇಗೌಡ, ಬನ್ನೂರು ಹುಚ್ಚೇಗೌಡ, ಹಾಗೂ ಅನೇಕ ರೈತ ಮುಖಂಡರು ಭಾಗವಹಿಸಿದರು.




























