೨೧ ಹುಲಿಗಳು ನಾಡಿಗೆ ಲಗ್ಗೆ: ಆತಂಕದಲ್ಲಿ ಜನ

ಮೈಸೂರು, ನ.೧೫-ಇತ್ತೀಚೆಗೆ ಮೈಸೂರು ಜಿಲ್ಲೆಯ ಕಾಡಂಚಿನ ಎಚ್‌ಡಿ ಕೋಟೆ ಮತ್ತು ಸರಗೂರು ಪ್ರದೇಶಗಳಲ್ಲಿ ಹುಲಿಗಳ ಭೀತಿ ಹೆಚ್ಚಾಗಿದೆ. ಈ ಪ್ರದೇಶಕ್ಕೆ ಸರಿಸುಮಾರು ೨೧ ಹುಲಿಗಳು ಕಾಡಿನಿಂದ ಆಗಮಿಸಿದ ಸುದ್ದಿ ಬಂದಿದೆ.ಇದನ್ನು ಕೇಳಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಇತ್ತೀಚಿನ ಹುಲಿ ದಾಳಿಗೆ ಮೂವರು ರೈತರು ಸಾವನ್ನಪ್ಪಿದ್ದಾರೆ. ಇದರ ನಂತರ, ಜನರ ಮೇಲೆ ದಾಳಿ ಮಾಡಿದ ಹುಲಿಯನ್ನು ಅರಣ್ಯ ಇಲಾಖೆ ಸೆರೆಹಿಡಿದಿದೆ. ಕಾಡಿನಲ್ಲಿರುವ ರೈತರನ್ನು ರಕ್ಷಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಮಧ್ಯೆ, ಒಂದು ಅಥವಾ ಎರಡಲ್ಲ, ೨೧ ಹುಲಿಗಳು ನುಗ್ಗಿವೆ. ಡಿಸಿಎಫ್ (ಮೈಸೂರು ಡಿಸಿಎಫ್) ಅಧಿಕೃತವಾಗಿ ಇದನ್ನು ಘೋಷಿಸಿದ್ದಾರೆ.

ಎಚ್‌ಡಿ ಕೋಟೆ, ಸರಗೂರು ಮತ್ತು ನಂಜನಗೂಡಿನ ಅರಣ್ಯ ಗ್ರಾಮಗಳಲ್ಲಿ ಒಟ್ಟು ೨೧ ಹುಲಿಗಳು ನೆಲೆಸಿವೆ.

ಒಟ್ಟು ೨೬ ಹುಲಿಗಳು ಕಾಡಿನಿಂದ ನಾಡು ಪ್ರವೇಶಿಸಿದ್ದವು. ಇವುಗಳಲ್ಲಿ ಐದು ಹುಲಿಗಳನ್ನು ಸೆರೆಹಿಡಿಯಲಾಗಿದೆ. ಇನ್ನೂ ೨೧ ಹುಲಿಗಳು ದೇಶಾದ್ಯಂತ ಓಡಾಡುತ್ತಿವೆ. ಆದ್ದರಿಂದ, ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ ಎಂದು ಡಿಸಿಎಫ್ ಹೇಳಿದ್ದಾರೆ.

ಒಟ್ಟಾರೆಯಾಗಿ ೨೬ ಹುಲಿಗಳು ಕಾಡಿನಿಂದ ನಾಡಿನತ್ತ ಬಂದಿದ್ದವು. ಅವುಗಳಲ್ಲಿ ೫ ಹುಲಿಗಳನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಆದರೆ, ಇನ್ನೂ ೨೧ ಹುಲಿಗಳು ನಾಡಿನಲ್ಲೇ ಓಡಾಡುತ್ತಿದ್ದು, ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮೈಸೂರಿನಲ್ಲಿ ಹುಲಿ ದಾಳಿ ಭೀತಿ ರೈತರಲ್ಲಿ ಮನೆ ಮಾಡಿದ್ದು, ಜಮೀನಿಗೆ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹುಲಿ ದಾಳಿಯಿಂದ ತಪ್ಪಿಸಿಕೊಳ್ಳಲು ರೈತರಿಗೆ ಮಾನವ ಮುಖದ ಮಾಸ್ಕ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ರೈತರಿಗೆ ೧೦ ಸಾವಿರ ಮಾನವ ಮುಖದ ಮಾಸ್ಕ್ ನೀಡಲು ನಿರ್ಧರಿಸಲಾಗಿದೆ. ರೈತರು ತಲೆ ಹಿಂದೆ ಮಾಸ್ಕ್ ಧರಿಸಬೇಕು. ಕುಳಿತುಕೊಂಡು ಕೆಲಸ ಮಾಡುವಾಗ ಹುಲಿಗಳು ದಾಳಿ ನಡೆಸುತ್ತದೆ. ಆದ್ದರಿಂದ ರೈತರು ಮಾನವ ಮಾಸ್ಕ್ ಗಳನ್ನು ಹಾಕಿಕೊಳ್ಳಬೇಕು ಎಂದು ಡಿಸಿಎಫ್ ಸೂಚಿಸಿದ್ದಾರೆ.