
ಸಂಜೆವಾಣಿ ವಾರ್ತೆ
ಹನೂರು ಜ 2 :- ನಮ್ಮ ದಲಿತರ ಸಮಾನತೆಗಾಗಿ ಭೀಮ ಕೋರೆಗಾವ್ ಯುದ್ಧ ನಡೆಯಿತು. ಇದರ ವಿಜಯೋತ್ಸವದ ಅಂಗವಾಗಿ ನಾವು ಪ್ರತಿ ವರ್ಷ ವಿಶೇಷ ಆಚರಣೆಗಳನ್ನು ಮಾಡಿಕೊಂಡು ಬರುತ್ತಾ ಇದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನೆ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ತಿಳಿಸಿದರು.
208 ನೇ ವರ್ಷದ ವಿಜಯೋತ್ಸವದ ಅಂಗವಾಗಿ ಹನೂರು ಪಟ್ಟಣದ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಕಾಲ್ನಡಿಗೆಯಿಂದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ದಲಿತರಿಗೆ ಬದುಕು ಹಕ್ಕು ಇನ್ನು ಕೂಡ ಮರೀಚಿಕೆಯಾಗಿ ಉಳಿದಿದೆ. ಕಳೆದ ಏಳು ವರ್ಷದ ಹಿಂದೆ ನಡೆದ ಸುಳ್ವಾಡಿ ವಿಷ ಪ್ರಸದಾ ದುರಂತದಲ್ಲಿ ಅನೇಕ ದಲಿತರು ತಿರುಕೊಂಡರು ಹಾಗೂ ಇನ್ನು ಕೆಲವರು ಬದುಕಿ ಉಳಿದರು ಅವರ ಅರೋಗ್ಯ ಸ್ಥಿತಿ ದಿನದಿನೆ ಹದಗೆಟ್ಟಿದೆ.
ದಲಿತರ ಸಾವು ನೋವಿಗೆ ಬೆಲೆ ಇಲ್ಲದಂತಾಗಿದೆ ತಮ್ಮ ಅದಿಕಾರದ ದುರಾಶೆಗೆ ಬಡವರು ದಲಿತರ ಜೀವನದ ಮೇಲೆ ಚೇಲಾಟ ಆಡಿದ್ದಾರೆ. ಸುಳ್ವಾಡಿ ವಿಷ ಪ್ರಸಾದ ದುರಂತದ ಸಾವು ನೋವಿಗೆ ಕಾರಣನಾದ ಸ್ವಾಮೀಜಿಗೆ ಕೋರ್ಟ್ ಜಾಮೀನು ನೀಡಿರುವುದು ದುರದೃಷ್ಟಕಾರವಾಗಿದೆ. ಸರ್ಕಾರ ದುರಂತದಲ್ಲಿ ಮಡಿದವರಿಗೆ ಸಂಕಷ್ಟ ಅನುಭವಿಸಿದರಿಗೆ ಇನ್ನು ಕೂಡ ನ್ಯಾಯ ಕೊಟ್ಟಿಲ್ಲ ಸಂತ್ರಸ್ತರಿಗೆ ಸರ್ಕಾರ ಸೌಲಭ್ಯಗಳನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ ನೊಂದದಂತ ಕುಟುಂಬಳಿಗೆ ನ್ಯಾಯ ಸಿಗಬೇಕು ಎಂದು ಭೀಮ ಕೋರೆಗಾವ್ 208 ನೇ ವರ್ಷದ ವಿಜಯೋತ್ಸವದ ಸಂಧರ್ಭದಲ್ಲಿ ಹನೂರು ಪಟ್ಟಣದಿಂದ ಕೊಳ್ಳೇಗಾಲದ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ತನಕ ಪಾದಯಾತ್ರೆ ನಡೆಸಿದರು. ಹನೂರು ಪಟ್ಟಣದ ಸುತ್ತ ಮುತ್ತ ಗ್ರಾಮಗಳಿಂದ ಹಾಗೂ ಮಾರ್ಟಳ್ಳಿ ಗ್ರಾಮಗಳಿಂದ ಸಂತ್ರಸ್ತ ಕುಟುಂಬದವರು ಸ್ವಂತ ವಾಹನಗಳನ್ನು ಮಾಡಿಕೊಂಡು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಇದ್ದರು.
ಈ ಸಂಧರ್ಭದಲ್ಲಿ ಜಿಲ್ಲಾ ಸಂಚಾಲಕ ಮಾಂಬಳ್ಳಿ ಹಿಂಡಗಯ್ಯ, ತಾಲ್ಲೂಕು ಸಂಚಾಲಕರು ಮಾದೇಶ್ ಬೈರನತ್ತ, ಹನೂರು ನಾಗರಾಜ್, ವೀರಯ್ಯ ಎಂ.ಜಿ ದೊಡ್ಡಿ ಮುರಗೇಶ್, ಮಾರ್ಟಳ್ಳಿ ರಾಮಲಿಂಗಮ್, ಕೆ.ಗುಂಡಾಪುರ ಸೋಮಣ್ಣ, ಬಿದರಹಳ್ಳಿ ಷಣ್ಮುಖ ಸೇರಿದಂತೆ ಅಂಬೇಡ್ಕರ್ ಸಂಘಟನೆ ಯುವಕರು ಮಹಿಳೆಯರು ಇದ್ದರು.
ಭೀಮ ಕೋರೆಗಾವ್ 208ನೇ ವರ್ಷದ ವಿಜಯೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಹನೂರು ಪಟ್ಟಣದಿಂದ ಕೊಳ್ಳೇಗಾಲದ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ತನಕ ಪಾದಯಾತ್ರೆಯಲ್ಲಿ ತೆರಳಿದವರಿಗೆ ದಲಿತ ಮುಖಂಡರು ಹನೂರು ಪಟ್ಟಣದಿಂದ ಜಾಥಾದಲ್ಲಿ ಪಾಲ್ಗೊಂಡ ಅಷ್ಟು ಜನಗಳಿಗೂ ದಾರಿ ಮದ್ಯೆ ಜ್ಯೂಸ್ ಪಾನಕ ಬ್ರೆಡ್ ಬಿಸ್ಕೆಟ್ ಪಾನೀಯಗಳನ್ನು ನೀಡಿ ಸಾತ್ಕಾರ ಮಾಡಿದ್ದರು. ಕೊಳ್ಳೇಗಾಲಕ್ಕೆ ಪ್ರವೇಶ ಆಗುತ್ತಿದ್ದಂತೆ ಅಂಬೇಡ್ಕರ್ ಅಭಿಮಾನಿಗಳು ಬರಮಾಡಿಕೊಂಡು ಊಟದ ವ್ಯವಸ್ಥೆ ಮಾಡಿ ಸತ್ಕಾರ ಮಾಡಿದರು.


























