ಎನ್‌ಹೆಚ್‌ಎಂ ಸಿಬ್ಬಂದಿಗಳಿಗೆ ೨ ತಿಂಗಳ ವೇತನದ ಅನುದಾನ ಬಿಡುಗಡೆ : ಶ್ರೀಕಾಂತ್ ಸ್ವಾಮಿ

ಕಲಬುರಗಿ:ಮೇ.೨೮: ಎನ್‌ಹೆಚ್‌ಎಂ ಸಿಬ್ಬಂದಿಗಳಿಗೆ ೨ ತಿಂಗಳ ವೇತನದ ಅನುದಾನ ಬಿಡುಗಡೆ ನುಡಿದಂತೆ ನಡೆದ ಸರಕಾರಕ್ಕೆ ಕೆಎಸ್‌ಹೆಚ್‌ಸಿಓಇಎ ಬಿಎಂಎಸ್ ಸಂಘದ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಕಳೆದ ಎರಡು ತಿಂಗಳಿAದ ವೇತನ ಆಗದೇ ಜೀವನ ನಡೆಸುವುದು ಕಷ್ಟ ಸಾಧ್ಯವಾಗಿತ್ತು.
ಈ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳನ್ನು, ಮಾನ್ಯ ಆರೋಗ್ಯ ಸಚಿವರನ್ನು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿತ್ತು ಜೊತೆಗೆ ನಮ್ಮ ಸಂಘದ ಗೌರವ ಸಲಹೆಗಾರರು ಆದ ಶ್ರೀ ಶಿವರಾಮು ಅವರು ಸುದ್ದಿಗೋಷ್ಠಿ ಮಾಡಿ ಮಾಧ್ಯಮದ ಮೂಲಕ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೂ ತರುವಂತೆ ಮಾಡಿದ್ದರು. ಅಲ್ಲದೇ ವಿರೋಧ ಪಕ್ಷದ ವಿವಿಧ ಮುಖಂಡರು ಸಹಾ ವೇತನ ಪಾವತಿಗೆ ಒತ್ತಾಯ ಮಾಡಿದ್ದರು, ಇದಕ್ಕೆ ಮಾನ್ಯ ಆರೋಗ್ಯ ಸಚಿವರು ಕೂಡಲೇ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು,
ಅದರಂತೇ ಎಲ್ಲಾ ಆಯಾಮಗಳಿಂದ ಮಾನ್ಯ ಘನ ಸರಕಾರವು ನಮ್ಮ ಮನವಿಯನ್ನು ಪರಿಗಣಿಸಿ ಸಿಬ್ಬಂದಿಗಳಿಗೆ ಮಾರ್ಚ್ ಮತ್ತು ಏಪ್ರಿಲ್ ೨೦೨೫ ಮಾಹೆಗಳ ವೇತನದ ಅನುದಾನವನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಿ ಬಿಡುಗಡೆ ಮಾಡಿದ್ದು ಜೊತೆಗೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಖಾತೆಗೆ ಜಮೆ ಆಗುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳುತ್ತಿರುವುದು ಹೆಮ್ಮೆ ಅನಿಸುತ್ತಿದೆ.
ಇದಕ್ಕೆ ಸಮಸ್ತ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಪರವಾಗಿ ಕೆಎಸ್‌ಹೆಚ್‌ಸಿಓಇಎ ಬಿಎಂಎಸ್ ಸಂಘದಿAದ ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಶ್ರೀಕಾಂತ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.