Home ಜಿಲ್ಲೆ ಬೆಂಗಳೂರು ಸೌಮ್ಯಚನ್ನಕೇಶವಸ್ವಾಮಿ ದೇವಾಲಯದ ಹುಂಡಿನಲ್ಲಿ ೨.೭೭ ಲಕ್ಷ ಸಂಗ್ರಹ

ಸೌಮ್ಯಚನ್ನಕೇಶವಸ್ವಾಮಿ ದೇವಾಲಯದ ಹುಂಡಿನಲ್ಲಿ ೨.೭೭ ಲಕ್ಷ ಸಂಗ್ರಹ

ವಿಜಯಪುರ.ಸೆ೨೭: ಪಟ್ಟಣದ ಸೌಮ್ಯಚನ್ನಕೇಶವಸ್ವಾಮಿ ದೇವಾಲಯದಲ್ಲಿ, ಧಾರ್ಮಿಕ ದತ್ತಿ ಇಲಾಖೆ, ದೇವಾಲಯದ ವ್ಯವಸ್ಥಾಪನಾ ಸಮಿತಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ಹುಂಡಿ ಎಣಿಕೆ ಕಾರ್ಯ ಮಾಡಿದರು.


ಅಕ್ಟೋಬರ್ ೨೦೨೪ರ ನಂತರ ಇದೀಗ ದೇವಾಲಯದ ಹುಂಡಿಯಲ್ಲಿ ೨ ಲಕ್ಷ ೭೭ ಸಾವಿರದ ೧೪೫ ರೂಪಾಯಿಗಳು ಸಂಗ್ರಹವಾಗಿದ್ದು, ಈ ಹುಂಡಿ ಹಣವನ್ನು ದೇವಾಲಯದ ಹೆಸರಿನಲ್ಲಿ ಎಸ್.ಬಿ.ಐ. ಬ್ಯಾಂಕಿನಲ್ಲಿರುವ ಖಾತೆಗೆ ಜಮೆ ಮಾಡಲಾಗಿದೆ.


ಉಪತಹಶೀಲ್ದಾರ್ ಮೋಹನ್ ಕುಮಾರ್ ಮಾತನಾಡಿ, ಧಾರ್ಮಿಕ ದತ್ತಿ ಇಲಾಖೆಯ ಸಮ್ಮುಖದಲ್ಲಿ, ಎಣಿಕೆ ಮಾಡಿದ ಕಾಣಿಕೆಯನ್ನು ಉಳಿತಾಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದ್ದು, ಇಲಾಖೆಯ ನಿಯಮಗಳ ಪ್ರಕಾರ, ಮೇಲಾಧಿಕಾರಿಗಳು ಈ ಹಣದ ಬಳಕೆಯ ಕುರಿತು ತೀರ್ಮಾನಿಸುತ್ತಾರೆ.


ದೇವಾಲಯಗಳು ಜನರಲ್ಲಿ ಸಾಮರಸ್ಯವನ್ನು ಮೂಡಿಸುವಂತಹ ಕೇಂದ್ರಗಳಾಗಿದ್ದು, ಇಂತಹ ದೇವಾಲಯಗಳ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದರು.’