
ಸAಜೆವಾಣಿ ವಾರ್ತೆ
ಬೀದರ್:ಮೇ.೨೬:ಜನಿವಾರ ಧರಿಸಿದ ಕಾರಣಕ್ಕೆ ಪರೀಕ್ಷಾ ಕೊಠಡಿಗೆ ಪ್ರವೇಶ ನಿರಾಕರಿಸಿದ ಕಾರಣದಿಂದ ಗಣಿತ ಪರೀಕ್ಷೆ ಬರೆಯಲು ಸಾಧ್ಯವಾಗದ ಬೀದರ್‌ನ ಸುಚಿವ್ರತ ಕುಲಕರ್ಣಿ ಅವರಿಗೆ ಸರಾಸರಿ ಅಂಕಗಳ ಆಧಾರದಲ್ಲಿ ೨.೦೬ ಲಕ್ಷ ರ‍್ಯಾಂಕಿAಗ್ ನೀಡಲಾಗಿದೆ.
ಸುಚಿವ್ರತ ಕುಲಕರ್ಣಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೫೬ ಅಂಕ ಪಡೆದಿದ್ದ. ಆತನ ದ್ವಿತೀಯ ಪಿಯುಸಿಯ ಗಣಿತ, ಭೌತಶಾಸ್ತ್ರ. ರಸಾಯನ ಶಾಸ್ತ್ರ ಮತ್ತು ಸಿಇಟಿಯ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಅಂಕವನ್ನು ಪಡೆದು ಸರಾಸರಿ ಮಾಡಿ ???ಯಾಂಕ್ ನೀಡಲಾಗಿದೆ ಎಂದು ಕೆಇಎ ತಿಳಿಸಿದೆ.
ಸುಚಿವೃತ ಕುಲಕರ್ಣಿಗೆ ಜನಿವಾರ ದರಿಸಿದ ಕಾರಣ ಪರೀಕ್ಷೆ ಬರೆಯದಿರಲು ಕೆಇಎ ಕಾರಣವಲ್ಲ. ಪರೀಕ್ಷಾ ಕೇಂದ್ರದಲ್ಲಿದ್ದ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಈ ಘಟನೆ ನಡೆದಿತ್ತು. ಘಟನೆ ವರದಿಯಾದ ತಕ್ಷಣವೇ ನಾನು ಆತನ ತಾಯಿಯ ಜೊತೆ ಮಾತನಾಡಿದ್ದೆ. ಆತನಿಗೆ ಪರೀಕ್ಷೆ ಬರೆಯುವ ಅಥವಾ ಸರಾಸರಿ ಅಂಕದ ಆಧಾರದಲ್ಲಿ ???ಯಾಂಕಿAಗ್ ನೀಡುವ ಎರಡು ಸಾಧ್ಯತೆಗಳನ್ನು ಅತನ ಮುಂದೆ ಇಡಲಾಗಿತ್ತು. ಆತ ಸರಾಸರಿ ಅಂಕದ ಆಧಾರದಲ್ಲಿ ???ಯಾಂಕ್ ನೀಡುವ ಆಯ್ಕೆಯನ್ನು ಸ್ವೀಕರಿಸಿದ್ದ. ಈ ಹಿನ್ನೆಲೆಯಲ್ಲಿ ???ಯಾಂಕ್ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಹೇಳಿದ್ದಾರೆ.