2 ದಶಕಗಳ ಬಳಿಕ ನಕ್ಸಲ್ ಬಾಧಿತ ಭೀಮ ಬಂದ್‍ನಲ್ಲಿ ಮತದಾನ

ಪಾಟ್ನಾ,ನ.6- ಬಿಹಾರ ವಿಧಾನಸಭೆಗೆ ಚುನಾವಣೆ ಪ್ರಗತಿಯಲ್ಲಿದ್ದು ಸುಮಾರು ಎರಡು ದಶಕಗಳ ನಂತರ ಬಿಹಾರದ ಮುಂಗೇರ್ನ ನಕ್ಸಲ್ ಪೀಡಿತ ಭೀಮಬಂದ್ ಪ್ರದೇಶದಲ್ಲಿ ಮತದಾನ ನಡೆಯುತ್ತಿದೆ.
ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಕಾರಣಗಳಿಂದಾಗಿ ಮತದಾನ ವರ್ಷಗಳ ಕಾಲ ಸ್ಥಗಿತಗೊಂಡಿತ್ತು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಭದ್ರತಾ ಕಾರಣದಿಂದ ಸುಮಾರು 20 ವರ್ಷಗಳಿಂದ ಮತದಾನ ನಡೆದಿರಲಿಲ್ಲ ಎಂದು ಅಧಿಕಾರಿಗಳು ಧೃಡಪಡಿಸಿದ್ದಾರೆ, ಇತ್ತೀಚಿನ ವರ್ಷದಲ್ಲಿ ಬಿಹಾರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಕ್ಸಲ್ ಮುಕ್ತ ಮಾಡಿದ ಹಿನ್ನೆಲೆಯಲ್ಲಿ ಮತದಾನ ನಡೆದಿದೆ.


ಭದ್ರತಾ ಕಾರಣ ಸೇರಿದಂತೆ ಪ್ರತಿಕೂಲ ಘಟನೆಯಿಂದಾಗಿ ಮತದಾನ ಪ್ರಕ್ರಿಯೆ ದೀರ್ಘಕಾಲದವರೆಗೆ ಸ್ಥಗಿತಗೊಂಡಿತ್ತು . ಇದೀಗ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಅಭಿವೃದ್ದಿ ಆಗುತ್ತಿದ್ದು ಈ ಹಿನ್ನೆಲೆಯಲ್ಲಿ ಇಂದು ಮತದಾನ ನಡೆದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.


ನಕ್ಸಲ್ ಬಾಧಿತ ಮುಂಗೇರ್ನ ಪ್ರದೇಶದಲ್ಲಿ ಮತದಾನಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು, ಮೊದಲೇ ಸ್ಥಳಕ್ಕೆ ಭೇಟಿ ನೀಡಿದ್ದೆವು ಮತ್ತು ಮತದಾರರು ಯಾವುದೇ ಭಯವಿಲ್ಲದೆ ಬಂದು ಮುಕ್ತವಾಗಿ ಮತ ಚಲಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆದಿದೆ, ಇನ್ನುಳಿದ ಕ್ಷೇತ್ರಗಳಿಗೆ ನವಂಬರ್ 11ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.