ಚೆನ್ನಬಸವ ಪಟ್ಟದೇವರ ೧೯ನೇ ಪಟ್ಟಾಭಿಷೇಕ ವಾರ್ಷಿಕೋತ್ಸವ ನಾಳೆಯಿಂದ

ಆಳಂದ:ಡಿ.೭: ಪಟ್ಟಣದ ಶರಣ ನಗರದ ಶ್ರೀ ಸದ್ಗುರು ರೇವಣಸಿದ್ಧ ಶಿವಶರಣ ಮಂಟಪದಲ್ಲಿ ಈ ಬಾರಿ ಐತಿಹಾಸಿಕ ಆಧ್ಯಾತ್ಮಿಕ ಮಹಾಮೇಳ ನಡೆಯಲಿದೆ. ಸದ್ಗುರು ಶ್ರೀ ರೇವಣಸಿದ್ದ ಶಿವಶರಣ ಮಹಾಸ್ವಾಮಿಗಳವರ ೭೫ನೇ ವರ್ಷದ ಅಮೃತ ಮಹೋತ್ಸವ, ತೀರ್ಥಲಿಂಗ ಪಟ್ಟದೇವರ ೧೯ನೇ ವರ್ಷದ ಪುಣ್ಯಾರಾಧನೆ ಹಾಗೂ ಪ್ರಸ್ತುತ ಪೀಠಾಧಿಪತಿ ಚೆನ್ನಬಸವ ಪಟ್ಟದೇವರ ೧೯ನೇ ಪಟ್ಟಾಭಿಷೇಕ ವಾರ್ಷಿಕ ಮಹೋತ್ಸವವು ಡಿ.೯ರಿಂದ ೧೪ ರವರೆಗೆ ಅದ್ಧೂರಿಯಾಗಿ ಜರಗಲಿದೆ.
ಈ ಕುರಿತು ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಕಾರ್ಯಕ್ರಮ ಪತ್ರಿಕೆ ಬಿಡುಗಡೆಗೊಳಿಸಿ ಶನಿವಾರ ಮಾತನಾಡಿದ ಅವರು, ಬೀದರ್ ಚಿದಂಬರಾಶ್ರಮದ ಡಾ. ಶಿವಕುಮಾರ್ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜರುಗಲಿವೆ ಎಂದರು.
ಈಗಾಗಲೇ ಒಂದು ತಿಂಗಳಿನಿAದ ಶರಣಮಂಟಪದಿAದ ಭರದ ಸಿದ್ಧತೆ ನಡೆಯುತ್ತಿದೆ. ಸಾವಿರಾರು ಭಕ್ತರಿಗೆ ದಿನನಿತ್ಯ ಅನ್ನಪ್ರಸಾದ, ರೊಟ್ಟಿ-ಪಲ್ಯ ತಯಾರಿಕೆ, ಭಾರೀ ಪೆಂಡಾಲ್, ವೇದಿಕೆ ನಿರ್ಮಾಣ, ದೀಪಾಲಂಕಾರ, ಧ್ವಜಸ್ತಂಭ ಸ್ಥಾಪನೆ ಸೇರಿದಂತೆ ಎಲ್ಲ ವ್ಯವಸ್ಥೆಗಳು ಯುದ್ಧೋಪಾದಿಯಲ್ಲಿ ಸಾಗಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮ ವಿವರ: ಡಿ. ೯ ರಂದು ಸಂಜೆ ೭ ಗಂಟೆ: ೬೩ ಮಹಾಶರಣರ ಮಂಟಪಕ್ಕೆ ವಿಶೇಷ ಪೂಜೆ ಕಾರ್ಯಕ್ರಮಕ್ಕೆ ಜಿಡಗಾ, ಮಗಳಕೋಡ ಮಠದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯದಲ್ಲಿ ನಡೆಯಲಿದೆ ಪ್ರವಚನಕಾರ ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ ಅವರಿಂದ ಐದು ದಿನಗಳ ಕಾಲ ಪ್ರವಚನ ನಡೆಯಲಿದೆ ಎಂದು ಹೇಳಿದರು. ಡಿ. ೧೦ ಬೆಳಗ್ಗೆ ೮ ಗಂಟೆ: ಪ್ರಣವ ಧ್ವಜಾರೋಹಣ ಮೈಂದರಗಿ ಗೌರಿಕಟ್ಟಾ ಅಭಿನವ ರೇವಣಸಿದ್ಧ ಪಟ್ಟದೇವರು (ಹಿರೇಮಠ) ನೆರವೇರಿಸುವರು. ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳಸಾನ್ನಿಧ್ಯದಲ್ಲಿ ಮೈಂದ್ರಿಗಿ ಹಿರೇಮಠದ ಅಭಿನವ ರೇವಣಸಿದ್ಧ ಪಟ್ಟದೇವರು ನೀಲಕೇರಿಯ ಘನಲಿಂಗ ಸ್ವಾಮಿಗಳು ನೇತೃತ್ವ ವಹಿಸುವರು. ಸಂಜೆ ೭ ಗಂಟೆ: “ಸತ್ಯವಂತರ ಸಂಗವಿರಲು ತೀರ್ಥವೇತಕೆ” – ಪ್ರವಚನ ಸಾನಿಧ್ಯವನ್ನು ಗುಳೇದಗುಡ್ಡ ಮಠದ ಶ್ರೀ ಕಾಶಿನಾಥ ಮಹಾಸ್ವಾಮಿಗಳು ಆಳಂದಿ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಮೈಂದರ್ಗಿ ಶ್ರೀ ಅಭಿನವ ರೇವಣಸಿದ್ಧ ಪಟ್ಟದೇವರು ಆಗಮಿಸುವರು.
ಡಿ. ೧೧ ರಂದು ಬೆಳಗ್ಗೆ ೧೦:೧೫ ಗಂಟೆ: “ಮನಯೇವ ಕಾರಣಂ ಬಂಧ ಮೋಕ್ಷಯೋ” ವಿಷಯದ ಪ್ರವಚನದ ಸಾನಿಧ್ಯ ಮಾದನಹಿಪ್ಪರಗ ಚಲಗೇರಾ ಮಠದ ಶಾಂತಿವೀರ ಶಿವಾಚಾರ್ಯರು ವಹಿಸುವರು.
ಮೈಂದರಗಿ ಸಿದ್ಧಾಶ್ರಮ ವಿರಕ್ತಮಠದ ಮೃತ್ಯುಂಜಯ ಮಹಾಸ್ವಾಮಿಗಳು, ಮುತ್ಯಾನ ಬಬಲಾದ, ಗಳಸಂಗಿ ಮಠದ ಗುರುಪಾದಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸುವರು ಸಂಜೆ ೭:೧೫ ಗಂಟೆ: “ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ” ಪ್ರವಚನದ ಸಾನಿಧ್ಯ: ಶಿರಹಟ್ಟಿ ಬಾಳೆಹೊಸೂರು ಸಂಸ್ಥಾನ ಪೀಠದ ಜಗದ್ಗುರು ಶ್ರೀ ಫಕೀರದಿಂಗಾಲೇಶ್ವರ ಮಹಾಸ್ವಾಮಿಗಳು ವಹಿಸುವರು. ರಾವೂರ್ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಹುಲ್ಯಾಳ ಆಶ್ರಮದ ಶರಣಿ ಜಯಶ್ರೀದೇವಿ ತಾಯಿ ನೇತೃತ್ವದಲ್ಲಿ ಹಾಗೂ ಡಿ.೧೨ರ ಬೆಳಗಿನ ೧೦:೧೫ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಕಡಗಂಚಿ ಮಠದ ಶ್ರೀ ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಯಳಸಂಗಿ ಸಿದ್ಧಾರೂಢ ಮಠದ ಪರಮಾನಂದ ಮಹಾಸ್ವಾಮಿಗಳು ಕಿಣ್ಣಿಸುಲ್ತಾನ್ ಮಠದ ಶಿವಶಾಂತಲಿAಗ ಶಿವಾಚಾರ್ಯರು ಆಗಮಿಸುವರು. ಸಂಜೆ ಸಮಾರಂಭಕ್ಕೆ ಬೀದರನ ಡಾ. ಶಿವುಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯದಲ್ಲಿ ದೇವಂತಿಗೆ ಹಿರೇಮಠದ ಶ್ರೀ ರೇಣುಕಾ ಶಿವಾಚಾರ್ಯರು, ಬೀದರ್ ಶಿವಪ್ರಕಾಶನಂದಗಿರಿ ಸ್ವಾಮಿಗಳು ಆಗಮಿಸುವರು.
ಡಿ ೧೩ರ ಬೆಳಗಿನ ಧಾರ್ಮಿಕ ಸಮಾರಂಭ ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಸಾನ್ನಿಧ್ಯದಲ್ಲಿ ಕಲಬುರಗಿ ಸಿದ್ಧಾರೂಢ ಮಠದ ಲಕ್ಷ್ಮೀದೇವಿ ತಾಯಿ, ಚಳಕಾಪುರ ಶಂಕರಾನAದ ಮಹಾಸ್ವಾಮಿಗಳು, ಬೀದರ್ ಗುರುದೇವ ಆಶ್ರಮದ ಗಣೇಶಾನಂದ ಮಹಾಸ್ವಾಮಿಗಳು, ನೀಲಾಂಬಿಕಾ ತಾಯಿ ನಂದಾದೇವಿ ತಾಯಿ ಆಗಮಿಸುವರು.
ಸಂಜೆ ಸಮಾರಂಭದ ಸಾನ್ನಿಧ್ಯವನ್ನು ಇಂಚಲ ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು, ಚೋಡಕುರಳ್ಳಿ ಮಠದ ಚಿದಾನಂದ ಭಾರತಿ ಶ್ರೀ, ನಿಂಬರ್ಗಾ ವಿರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು, ಸೊಲ್ಲಾಪುರ ಬಸವರೂಢ ಮಠದ ಶಿವಪುತ್ರ ಮಹಾಸ್ವಾಮಿಗಳು, ಅಕ್ಕಲಕೋಟ ವಿರಕ್ತಮಠದ ಬಸವಲಿಂಗ ಮಹಾಸ್ವಾಮಿಗಳು ಆಗಮಿಸುವರು. ಡಿ. ೧೪ ಬೆಳಗ್ಗೆ ೧೦:೧೫ಕ್ಕೆ ನಡೆಯುವ ಸಮಾರೋಪ ಸಮಾರಂಭ ಸಾನ್ನಿಧ್ಯವನ್ನು ಗುಳೇದಗುಡ್ಡ ಗುರುಸಿದ್ಧೇಶ್ವರ ಮಠದ ಜಗದ್ಗುರು ಬಸವರಾಜ ಪಟ್ಟದೇವರ ವಹಿಸುವರು. ಸಸ್ತಾಪೂರದ ಸÀದಾನಂದ ಮಹಾಸ್ವಾಮಿಗಳು ಮೈಂದರಗಿ ಹಿರೇಮಠದ ಅಭಿನವ ರೇವಣಸಿದ್ಧ ಪಟ್ಟದೇವರು,
ನೀಲಕೇರಿ ಸಿದ್ಧಾರೂಢ ಮಠದ ಘನಲಿಂಗ ಶ್ರೀಗಳು, ಆಳಂದ್ ನಂದವಾಡಗಿ, ಚಾಲವಾದಿ ಶ್ರೀ ಮಹಂತೇಶ್ವರ ಸಂಸ್ಥಾನ ಹಿರೇಮಠದ ಹಿರಿಯ ಪೀಠಾಧಿಪತಿ ಶ್ರೀ ಮಹಾಂತಲಿAಗ ಶಿವಾಚಾರ್ಯರು ಸೇರಿದಂತೆ ಈ ಆರು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ರಾಜಕೀಯ ಗಣ್ಯರು, ನಾಡಿನ ಹಿರಿಯ ಗುರುಚರಮೂರ್ತಿಗಳ ಉಪಸ್ಥಿತಿ ನಿಗದಿಯಾಗಿದೆ.
ಶರಣ ಮಂಟಪದ ಕಾರ್ಯಕರ್ತರು, ಸ್ವಯಂಸೇವಕರು ಹಾಗೂ ಭಕ್ತರು ದಿನರಾತ್ರಿ ಶ್ರಮ ವಹಿಸಿ ಸಿದ್ಧತೆ ಮಾಡುತ್ತಿದ್ದು, “ಎಂದಿನAತೆ ಈ ಬಾರಿಯೂ ಸಾವಿರಾರು ಭಕ್ತರು ಆಗಮಿಸಿ ದಿವ್ಯ ದರ್ಶನ-ಆಶೀರ್ವಾದ ಪಡೆಯಲಿದ್ದಾರೆ” ಎಂದು ಮಂಟಪದ ಕಮಿಟಿ ಅಧ್ಯಕ್ಷ ಸೂರ್ಯಕಾಂತ ತಟ್ಟಿ ಹಾಗೂ ಶ್ರೀಶೈಲ ಉಳ್ಳೆ ಅವರು ತಿಳಿಸಿದ್ದಾರೆ.