
ಗಾಂಧಿನಗರ, ಮೇ. 27- 1947ರಲ್ಲಿ ಕಾಶ್ಮೀರಕ್ಕೆ ನುಗ್ಗಿದ ಮುಜಾಹಿದ್ದೀನ್‍ಗಳನ್ನು ಕೊಂದು ಹಾಕಿದ್ದಾರೆ. ಈಗ ನಾವು ಇಂತಹ ಪರಿಸ್ಥಿತಿ ಎದುರಿಸುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 1947ರಲ್ಲಿ ಸರದಾರ್ ವಲ್ಲಭಭಾಯಿ ಪಟೇಲ್ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಬಯಸಿದ್ದರು. ಪಿಒಕೆ ಮರಳಿ ಪಡೆಯುವವರೆಗೂ ಸೇನಾ ಕಾರ್ಯಾಚರಣೆ ನಿಲ್ಲಿಸಬಾರದು ಎಂದು ಅವರು ಬಯಿಸಿದ್ದರು. ಆದರೆ ಅಂದಿನ ಸರ್ಕಾರ ಇವರ ಸಲಹೆಯನ್ನು ತಿರಸ್ಕರಿಸಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.
ಗುಜರಾತ್ ನ ಗಾಂಧಿನಗರದಲ್ಲಿ 2ನೇ ದಿನವಾದ ಇಂದು ರೋಡ್ ಶೋ ನಡೆಸಿದ ಬಳಿಕ 5,536 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ, ಮಾತನಾಡಿದ ಅವರು 1947ರಲ್ಲಿ ದೇಶ ವಿಭಜನೆಯಾದಾಗ ಮೂರು ಭಾಗಗಳಾಗಿ ವಿಂಗಡಣೆಯಾಗಿತ್ತು. ಕಾಶ್ಮೀರದಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆದ ಬೆನ್ನಲ್ಲೇ ಪಾಕಿಸ್ತಾನ ಕಾಶ್ಮೀರ ಒಂದು ಭಾಗವನ್ನು ಆಕ್ರಮಿಸಿಕೊಂಡಿತ್ತು ಎಂದರು.ಒಂದು ವೇಳೆ ಮುಜಾಹಿದ್ದೀನ್ ಗಳನ್ನು ಕೊಂದು ಹಾಕಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. 75 ವರ್ಷಗಳಿಂದ ನಾವು ತೊಂದರೆಯನ್ನು ಎದುರಿಸುತ್ತಿದೇವೆ. ಪಹಲ್ಗಾಮ್ ನಲ್ಲಿ ನಡೆದಿದ್ದು ಈ ದಾಳಿಯ ವಿಕೃತ ರೂಪವಾಗಿತ್ತು. ಪ್ರತಿ ಬಾರಿಯೂ ಪಾಕಿಸ್ತಾನವನ್ನು ಭಾರತೀಯ ಸೇನೆ ಸದೆಬಡಿದಿದೆ. ಹೀಗಾಗಿ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಮನವರಿಕೆಯಾಗಿದೆ ಎಂದರು.
ಭಯೋತ್ಪಾದನೆ ಪರೋಕ್ಷ ಯುದ್ಧವಲ್ಲ. ಇದು ಪಾಕ್ ನ ಯುದ್ಧ ತಂತ್ರವಾಗಿದೆ. ಪಾಕಿಸ್ತಾನ ನಡೆಸಿದ ಯೋಜಿತದಾಳಿಗೆ ತಕ್ಕ ಉತ್ತರ ನೀಡಿದ್ದೇವೆ. 1960ರ ಸಿಂಧೂನದಿ ಜಲ ಒಪ್ಪಂದವನ್ನು ಕೆಟ್ಟದಾಗಿ ಸಂಧಾನ ಮಾಡಲಾಗಿತ್ತು. ಕಾಶ್ಮೀರದಲ್ಲಿ ಅಣೆಕಟ್ಟೆಗಳ ಹೂಳು ತೆಗೆಯುವುದನ್ನು ನಿಷೇಧಿಸುವ ನಿಬಂಧನೆಯನ್ನು ಹೊಂದಿತ್ತು ಎಂದು ಹೇಳಿದರು. ಭಾರತ ಈಗ ವಿಶ್ವದಲ್ಲೇ 4ನೇ ಅತೀ ದೊಡ್ಡ ಆರ್ಥಿಕ ದೇಶವಾಗಿ ಬೆಳೆದಿದೆ. 2014ರಲ್ಲಿ ತಾವು ಪ್ರಧಾನಿಯಾದಾಗ ನಮ್ಮ ಸ್ಥಾನ 11ರಲ್ಲಿ ಇತ್ತು. ನಾವು ಅಭಿವೃದ್ಧಿ ಕಾರ್ಯಗಳಲ್ಲಿ ನಿರಂತರಾಗಿದ್ದೇವೆ ಎಂದು ಮೋದಿ ತಿಳಿಸಿದರು.