
ಕಲಬುರಗಿ,ಡಿ.27-ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗಿನಲ್ಲಿ ಇದ್ದ 2.69 ಲಕ್ಷ ರೂ.ಮೊತ್ತದ 19 ಗ್ರಾಂ.ಬಂಗಾರದ ಆಭರಣ ಕಳವಾಗಿರುವ ಘಟನೆ ನಗರದ ಜನತಾ ಬಜಾರ್‍ದಲ್ಲಿ ನಡೆದಿದೆ.
ನಗರದ ತಾರಫೈಲ್‍ನ ನಿರ್ಮಲಾ ಕಮಲಾಕರ್ ಶಿವನೂರ (55) ಎಂಬುವವರೆ ಬಂಗಾರದ ಆಭರಣ ಕಳೆದುಕೊಂಡಿದ್ದು, ಅವರು ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ನಿರ್ಮಲಾ ಅವರು ತಮ್ಮ ಬಳಿ ಇದ್ದ 20 ಗ್ರಾಂ.ಬಂಗಾರದ ಆಭರಣಗಳನ್ನು ಮಾರಾಟ ಮಾಡಿ ಹೊಸ ಬಂಗಾರದ ಆಭರಣಗಳನ್ನು ಖರೀದಿ ಮಾಡಲು ಸರಾಫ್ ಬಜಾರಿಗೆ ಹೋಗಿ ಹಳೆ ಬಂಗಾರದ ಆಭರಣಗಳ ಪೈಕಿ 11 ಗ್ರಾಂ.ಬಂಗಾರದ ತಾಳಿ ಮತ್ತು ಗುಂಡುಗಳನ್ನು ಬಂಗಾರದ ಅಂಗಡಿಯಲ್ಲಿ ಕೊಟ್ಟು ಅದರಲ್ಲಿ ತಾಳಿ ಹೊರತು ಪಡಿಸಿ ಉಳಿದ ಗುಂಡುಗಳನ್ನು ಕರಗಿಸಿದಾಗ 8 ಗ್ರಾಂ.ಆಗಿದೆ. 8 ಗ್ರಾಂ.ಬಂಗಾರದ ಗಟ್ಟಿಯನ್ನು ಮಾರಾಟ ಮಾರಾಟ ಮಾಡಲು ಹೋದಾಗ ಬಂಗಾರದ ಅಂಗಡಿಯವರ ಜೊತೆ ಹಣದ ವ್ಯವಹಾರ ಹೊಂದದೇ ಇರುವುದರಿಂದ ಆಭರಣಗಳನ್ನು ಚಿಕ್ಕ ಪರ್ಸ್‍ನಲ್ಲಿ ಹಾಕಿ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡು ಜನತಾ ಬಜಾರ್‍ಗೆ ಬಂದು ಹೂವು ಖರೀದಿ ಮಾಡುತ್ತಿದ್ದಾಗ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದ 19 ಗ್ರಾಂ.ಬಂಗಾರದ ಆಭರಣಗಳು ಕಳವಾಗಿವೆ.
ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

























