
ಸಂಜೆವಾಣಿ ವಾರ್ತೆ
ಹನೂರು ನ 14 :- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ರೈತ ಸಂಘಟನೆ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿ ಪ್ರತಿಭಟನೆ 18 ನೇ ದಿನಗಳನ್ನು ಪೂರೈಸಿ 19 ನೇ ದಿನ ಶುಕ್ರವಾರಕ್ಕೆ ಕಾಲಿಟ್ಟಿದೆ.
ಹನೂರು ತಾಲೂಕಿನ ಕುರಟ್ಟಿ ಹೊಸೂರು ಪಂಚಾಯಿತಿ, ಶೆಟ್ಟಹಳ್ಳಿ ಪಂಚಾಯಿತಿ, ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಗಳ ಅಂತರ್ಜಲ ಅಭಿವೃದ್ಧಿಗಾಗಿ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ದಿನಾಂಕ:27-10-2025 ರಿಂದ ಹಲವು ಪ್ರಮುಖ ಸಮಸ್ಯೆಗಳನ್ನು ಬಗೆ ಹರಿಸದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ನಡೆಯನ್ನು ಖಂಡಿಸಿ ಇಂದಿಗೆ 18 ದಿನಗಳಿಂದ ಪ್ರತಿಭಟನೆ ಮಾಡಲಾಗಿದೆ. ಈ ಭಾಗದ ಸಮಸ್ಯೆಗಳನ್ನು ಜರೂರಾಗಿ ಬಗೆ ಹರಿಸಬೇಕಿದೆ ಎಂದು ಸರ್ಕಾರ ಹಾಗೂ ಶಾಸಕರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಹೋರಾತ್ರಿ ಧರಣಿಯಲ್ಲಿ ಅರ್ಪುತ್ ರಾಜ್, ಪುಟ್ಟಸ್ವಾಮಿ, ಪೀಟರ್, ಲೂರ್ದುಸ್ವಾಮಿ, ದಿವ್ಯಾ ನಂದ, ರಾಜು, ರಾಜ, ಚಾಲ್ರ್ಸ್, ಅರುಳ್ ದಾಸ್, ಶಾಂತಿ ಬಗ್ಗೆ ರಾಣಿ, ಕೊಳಂದೈತೆರೆಸಾ, ಸಲೋಮಿ, ವನೆಜರೋಸ್ಮೇರಿ, ರೋಸ್ ಮೇರಿ, ಸಗಾಯಮೇರಿ, ಕಮಲಾ ಮೇರಿ, ಸೆಲ್ವಾಮೇರಿ, ಸಂದನಮೇರಿ ಇತರರು ಭಾಗವಹಿಸಿದ್ದರು.




























