Home ಜಿಲ್ಲೆ 18 ಸಾವಿರ ಲಂಚ ಪಡೆದು ಲೋಕಾ ಬಲೆಗೆ  ಬಿದ್ದ ನಗರದ ಸರ್ವೇಯರ್ ಹನುಮಂತಪ್ಪ.

18 ಸಾವಿರ ಲಂಚ ಪಡೆದು ಲೋಕಾ ಬಲೆಗೆ  ಬಿದ್ದ ನಗರದ ಸರ್ವೇಯರ್ ಹನುಮಂತಪ್ಪ.

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:  ನಗರದ ಲೇಔಟ್ ಡೆವಲಪರ್ ಅರವಿಂದ ಎನ್ನುವವರು ಲೇಔಟ್  ರಚನೆಗೆ ಅಗತ್ಯವಿದ್ದ ರಸ್ತೆಗಳ  ಸರ್ವೇ ನಕಾಶೆ ನೀಡಲು 20 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಲ್ಲಿನ  ಸರ್ವೇ ಭೂಮಾಪನಾ ಇಲಾಖೆಯ ಸರ್ವೇಯರ್ ಹನುಂಮತಪ್ಪ 18  ಸಾವಿರ ರೂ ಲಂಚ  ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಸಂಜೆ ಬಂಧಿಸಿದ್ದಾರೆ.

ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಚೇರಿಯಲ್ಲಿ ಸರ್ವೇಯರ್ ಹನುಮಂತಪ್ಪ ಲೋಕಾ ಯುಕ್ತ ಬಲೆಗೆ ಬಿದ್ದರು.

ಅರವಿಂದಅವರು ರಸ್ತೆ ಸರ್ವೇ ನಕ್ಷೆ ಪಡೆಯಲು ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ನೀಡಲು ಹನುಮಂತಪ್ಪ 20 ಸಾವಿರ ರೂ ಲಂಚ ನೀಡುವಂತೆ ಕೋರಿದ್ದರಂತೆ.

ಲಂಚ ನೀಡಲು ಇಚ್ಛಿಸದ ಅರವಿಂದ ಈ ಕುರಿತು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.  ಅವರ ದೂರಿನ  ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾ ಅಧಿಕಾರಿಗಳು. ಅರವಿಂದ ಅವರಿಂದ 18 ಸಾವಿರ ರೂ ನಗದು ಹಣದ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಹನುಮಂತಪ್ಪ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕಾರ್ಯಾ ಚರಣೆ ಯಲ್ಲಿ ಡಿವೈಎಸ್ಪಿ ಎಸ್.ಎಸ್. ಬೀಳಗಿ, ತನಿಖಾಧಿ ಕಾರಿ ಗುರಣ್ಣ ಹೆಬ್ಬಾಳ್, ಸಿಪಿಐ ಸುರೇಶ್ ಹಾಗು ಸಿಬ್ಬಂದಿ ಪಾಲ್ಗೊಂಡಿದ್ದರು.