175ನೇ ಅನುಭವ ಮಂಟಪದ ತಿಂಗಳ ಕಾರ್ಯಕ್ರಮ, ವಿಶ್ವ ಪರಿಸರ ದಿನಾಚರಣೆ

ಬೀದರ,ಜೂ.13: ನಗರದ ಡಾ. ಚೆನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ 175ನೇ ಅನುಭವ ಮಂಟಪ ತಿಂಗಳ ಕಾರ್ಯಕ್ರಮ ಹಾಗೂ ವಿಶ್ವಪರಿಸರ ದಿನಾಚರಣೆ ಜರುಗಿತು.
ನಿವೃತ್ತ ಪ್ರಾಚಾರ್ಯರ ಪೆÇ್ರ. ವಿಶ್ವನಾಥ ಗಂದಿಗುಡಿ ಉದ್ಘಾಟಕರಾಗಿ ಆಗಮಿಸಿ, ಮಾತನಾಡುತ್ತ, ಜಗತ್ತಿನ ಸುಮಾರು 150 ರಾಷ್ಟ್ರಗಳು ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಿದ್ದಾರೆ. ಇದರ ಉದ್ದೇಶ ಪ್ರಕೃತಿಯಲ್ಲಿ ಜಲಮಾಲಿನ್ಯ, ವಾಯುಮಾಲಿನ್ಯ, ಭೂಮಾಲಿನ್ಯ ತಡೆಗಟ್ಟಿ ಪರಿಸರ ಸಂರಕ್ಷಣೆ ಮಾಡುವುದಾಗಿದೆ. ಜನರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮಾಡುವ ಉದ್ದೇಶವಾಗಿದೆ. ಜನಜಂಗುಳಿ ಹೆಚ್ಚಾಗಿ ಅರಣ್ಯಗಳ ನಾಶವಾಗುವುದರಿಂದ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಮಾರಕ ರೋಗಗಳು ಬರುತ್ತಲಿವೆ, 12ನೇ ಶತಮಾನದಲ್ಲಿ ಬಸವಾದಿ ಶರಣರಲ್ಲಿ ಶ್ರೇಷ್ಠರಾದ ದಾರ್ಶನಿಕರು, ಆಧ್ಯಾತ್ಮಿಕ ಪುರುಷರಾದ, ಅಲ್ಲಮಪ್ರಭು, ಅಕ್ಕಮಹಾದೇವಿ ತಾಯಿಯವರು ಪರಿಸರವಾದಿಗಳಾಗಿದ್ದು, ತಮ್ಮ ವಚನಗಳಲ್ಲಿ ಮಾನವ ಮತ್ತು ಪರಿಸರದ ಅವಿನಾಭಾವ ಸಂಬಂಧವನು ತೋರಿಸಿದ್ದಾರೆ. ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಹೊಣೆಗಾರಿಕೆಯಾಗಿದೆ ಎಂದು ನುಡಿದರು.
ಬಸವಕಲ್ಯಾಣ ಅನುಭವ ಮಂಟಪದ ಖ್ಯಾತ ಪ್ರವಚನಕಾರರಾದ ಪರಮ ಪೂಜ್ಯ ನಿರಂಜನ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶಿರ್ವಚನ ನೀಡುತ್ತ ಭಗವಂತನು ಈ ಭೂ ಮಂಡಲದ ಮೇಲೆ ಎಲ್ಲವನ್ನು ಉಚಿತವಾಗಿ ನೀಡಿದ್ದಾನೆ. ಆದರೆ ಮಾನವ ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ಒಂದು ವೇಳೆ ಮನುಷ್ಯ ನಿಸರ್ಗ ಹಾಳುಮಾಡಲಾರದೆ ಜಲ ಸಂಪತ್ತು, ವಾಯುಸಂಪತ್ತು, ಭೂ ಸಂಪತ್ತು ಹೆಚ್ಚಿಸಿ ಆರೋಗ್ಯವಂತ, ಅಭಿವೃದ್ಧಿ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ನುಡಿದರು.
ಪೂಜ್ಯರಾದ ಬಸವಲಿಂಗದೇವರು, ಶರಣ ಶಿವಬಸವ, ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ಸಂಚಾಲಕಿ ಸುವರ್ಣಾ ಚಿಮಕೋಡೆಯವರು ವೇದಿಕೆಯ ಮೇಲೆ ಗೌರವ ಉಪಸ್ಥಿತರಿದ್ದರು ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ರಾಜಾಬಾಯಿ ಜಿ. ಷಟಸ್ಥಲ ಕುರಿತು ವಚನ ಚಿಂತನೆ ನೀಡಿದರು ಇದೇ ಸಂದರ್ಭದಲ್ಲಿ ಗುನ್ನಳ್ಳಿ ಗ್ರಾಮದ ಚಿತ್ರಕಲಾ ಯುವ ಪ್ರತಿಭೆ ಹಣಮಂತ ಮಲ್ಕಾಪೂರೆ ರವರು ಲಲಿತ ಕಲಾ ಅಕಾಡೆಮಿಯಿಂದ ರಾಜ್ಯ ಸರಕಾರದಿಂದ ನಡೆಸಿರುವ “ತಳವಿಲ್ಲದ ಬಾವಿ” ಎಂಬ ಚಿತ್ರ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಅವರನ್ನು ಪೂಜ್ಯರು ಸನ್ಮಾನಿಸಿದರು.
ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳಿಂದ ಪರಿಸರ ಸಂರಕ್ಷಣೆ ಎಂಬ ನಾಟಕ ಪ್ರದರ್ಶಿಸಲಾಯಿತು. ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದವರಿಂದ ಗುರುಬಸವ ಪ್ರಾರ್ಥನೆ ನೆರವೇರಿತು. ದಾಸೋಹಿಗಳಾದ ಗೀತಾ ರಾಜಕುಮಾರ ಕಪ್ಪರಗಾಂವ ರವರು ಬಸವ ಗುರುವಿನ ಪೂಜೆ ನೇರವೇರಿಸಿದರು. ಉಮಾಕಾಂತ ಮಿಸೆ ಅತಿಥಿ ಪರಿಚಯ ಭಾಷಣೆಮಾಡಿದರೆ, ಮಾಲಾಶ್ರೀ.ಜಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಹುಗ್ಗೆಳ್ಳಿ ನಿರೂಪಿಸಿದರೆ, ಸ್ನೇಹಾ ಮೂಲಗೆ ವಂದಿಸಿದರು.
ಚೆನ್ನಬಸಪ್ಪಾ ನೌಬಾದೆ, ಶ್ರೀನಿವಾಸ ಪಾಪಡೆ ಮತ್ತು ರೇವಣಪ್ಪಾ ಮೂಲಗೆ ವಚನ ಸಂಗೀತ ನಡೆಸಿಕೊಟ್ಟರು.ಪ್ರಮುಖರಾದ ಶ್ರೀಕಾಂತ ಬಿರಾದಾರ, ಸಂಗ್ರಾಮಪ್ಪಾ ಬಿರಾದಾರ, ಸಂಗ್ರಾಮ ಎಂಗಳೆ, ಶರಣಪ್ಪಾ ಚಿಮಕೋಡೆ, ಗುರುನಾಥ ಬಿರಾದಾರ, ಭೂಷÀಣ ಬಿರಾದಾರ, ಮಲ್ಲಿಕಾರ್ಜುನ ಹುಡಗೆ, ಡಾ.ವೈಜಿನಾಥ ಬಿರಾದಾರ, ಸಂತೋಷ, ಲಕ್ಷ್ಮೀಬಾಯಿ ಮಾಳಗೆ, ಭಾರತಿ ಪಾಟೀಲ್, ಮೀನಾಕ್ಷಿ ಪಾಟೀಲ್, ಲಕ್ಷ್ಮೀ ಬಿರಾದಾರ, ಭಾಗಿರತಿ ಕೊಂಡಾ, ಮಹಾದೇವಿ ಬಿರಾದಾರ ಮತ್ತು ಪ್ರಸಾದ ನಿಲಯ ವಿದ್ಯಾರ್ಥಿಗಳು ಹಾಗೂ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳು ಭಾಗವಹಿಸಿದರು.