ಸತತ ಸುರಿದ ಮಳೆಗೆ ಮನೆ ಕುಸಿದು 17 ವರ್ಷದ ಬಾಲಕಿ ಸಾವು ಮೃತ ಬಾಲಕಿಯ ಕುಟುಂಬಕ್ಕೆ ಪರಿಹಾರಕ್ಕಾಗಿ ರಸ್ತೆ ತಡೆದು ಪ್ರತಿಭಟನೆ

ಯಡ್ರಾಮಿ:ಸೆ.22:ಪಟ್ಟಣದಲ್ಲಿ ತಡ ರಾತ್ರಿ ಸುರಿದ ಮಳೆಯಿಂದ ಮನೆ ಗೋಡೆ ಕುಸಿದು 17 ವರ್ಷದ ಬಾಲಕಿ ಸಾನಿಯಾ ತಂದೆ ಸೈಪ್ಪನ್ ಸಾಬ್ ಯಲಗಾರ ಮೃತಪಟ್ಟಿದ್ದಾಳೆ.ಶಾಸಕರು 25 ಲಕ್ಷ ಪರಿಹಾರ ನೀಡಬೇಕು ಎಂದು ರಸ್ತೆ ತಡೆದು ಪ್ರತಿಭಟನೆ.

ಸುಮಾರು 2.30 ಗಂಟೆಗೆ ಗೋಡೆ ಕುಸಿದು ಬಾಲಕಿ ಮೃತಪಟ್ಟಿದ್ದು. 4 ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.ಬಾಲಕಿಯ ಶವ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದು.ಗಾಯಗೊಂಡ ನಾಲ್ಕು ಮಕ್ಕಳು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಂದೆ ತಾಯಿಯವರು ಮೈಕ್ರೋ ಫೈನಾನ್ಸ್ ಸಾಲ ಮಾಡಿದ್ದು ಬೆಳಿಗ್ಗೆ ಆದ್ರೆ ಪೈನಾನ್ಸ್ ಅವರು ಬಂದು ಮಾನ ಹರಾಜು ಮಾಡತ್ತಾರೆ ಎಂದು ಅಂಜಿ ಮನೆ ಬಿಟ್ಟು ಹೋಗಿದ್ದಾರೆ.

ಮನೆಯಲ್ಲಿ ಐದು ಜನ ಮಕ್ಕಳು ಮಲಗಿದರು ರಾತ್ರಿ ವೇಳೆ ಗೋಡೆ ಕುಸಿದು ಮಕ್ಕಳ ಮೇಲೆ ಬಿದ್ದು ಒಳಗಡೆ ಸಿಕ್ಕಿಕೊಂಡಾಗ ಪಕ್ಕದ ಮನೆಯವರು ಬಂದು ಕಟ್ಟಡದ ಸಾಮಗ್ರಿ ತೆರವುಗೊಳಿಸಿದರು.

ಮನೆಯಲ್ಲಿ ಐದು ಜನ ಮಕ್ಕಳಲ್ಲಿ ಒಬ್ಬಳು ಮೃತಪಟ್ಟಿದ್ದು ಇನ್ನುಳಿದ ನಾಲ್ಕು ಜನ ಮಕ್ಕಳು ಗಾಯಗಳಾಗಿದ್ದು ಸರಕಾರಿ ಆಸ್ಪತ್ರೆಗೆ ಕಕೊರ್ಂಡು ಬಂದು ಚಿಕಿತ್ಸೆ ನೀಡಲಾಗಿದ್ದು ಮೃತದೇಹ ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದ್ದು.

ಮೃತಪಟ್ಟ ಬಾಲಕಿಯ ಕುಟುಂಬ ಮೈಕ್ರೋ ಫೈನಾನ್ಸ್ ಕಾಟಕ್ಕೆ ಊರು ಬಿಟ್ಟಿದ್ದು. ಪಾಲಕರು ಊರು ಬಿಡದೇ ಹೋಗಿದ್ದರೆ ಮಕ್ಕಳು ಬದುಕುತ್ತಿದವು ಎಂದು ಪ್ರತಿಭಟನೆ ನಡೆಸಿದರು.

ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ಸ್ಥಳದಲ್ಲಿಯೇ ಸರ್ಕಾರದಿಂದ ಪರಿಹಾರ ಒದಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಈ ಕುರಿತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ ಎಂದು ಠಾಣೆಯ ಪಿಎಸ್‍ಐ ತಿಳಿಸಿದ್ದಾರೆ.