ಕೋಲಾರ,ಅ,೨೯-ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ( ಸಿ.ಐ.ಟಿ.ಯು.) ಕೋಲಾರ ಜಿಲ್ಲಾ ೭ನೇ ಸಮ್ಮೇಳನವು ಅ,೨೫ ಮತ್ತು ೨೬ ರಂದು ಎರಡು ದಿನಗಳ ಕಾಲ ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಯಶಸ್ವಿಯಾಗಿ ನೆರವೇರಿತು. ಸಮ್ಮೇಳನದಲ್ಲಿ ೧೭ ಪ್ರಮುಖ ನಿರ್ಣಯಗಳನ್ನು ಮಂಡಿಸಲಾಯಿತು. ಈ ನಿರ್ಣಯಗಳನ್ನು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಅನುಷ್ಠನಕ್ಕೆ ತರಲು ಒಮ್ಮತವಾಗಿ ನಿರ್ಧರಿಸಲಾಯಿತು. ಹಾಗೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಎಂದು ಜಿಲ್ಲಾ ನೂತನ ಅಧ್ಯಕ್ಷ ಪಿ. ಶ್ರೀನಿವಾಸ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಸಿ.ಐ.ಟಿ.ಯು ಸಂವಿಧಾನ ಬದ್ದವಾಗಿ ತಾಲ್ಲೂಕು ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಸಮ್ಮೇಳಗಳನ್ನು ನಡೆಸಿ ಪ್ರಮುಖ ನಿರ್ಣಯಗಳನ್ನು ಅನುಷ್ಟನಕ್ಕೆ ತರಲು ಹೋರಾಟಗಳ ರೂಪರೇಷೆಗಳನ್ನು ಆಯೋಜಿಸಲಾಗುವುದು. ವಿವಿಧ ವಿಭಾಗದ ಕಾರ್ಮಿಕರನ್ನು ಸಂಘಟಿಸಿ ಪ್ರತಿನಿಧಿಗಳು ಆಯ್ಕೆ ಮಾಡಿ ಕೊಂಡು ನಿರ್ಣಯಗಳನ್ನು ಅನುಷ್ಟನಕ್ಕೆ ತರುವ ಚಟುವಟಿಕೆಗಳನ್ನು ಚರ್ಚಿಸಲಾಗುವುದು .ಪ್ರಸ್ತುತ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಮತ್ತು ರಾಜ್ಯ ಮಟ್ಟದ ಕಾಂಗ್ರೆಸ್ ಸೇರಿದಂತೆ ಎರಡು ಪಕ್ಷಗಳ ಜನವಿರೋಧಿ ಧೋರಣೆಗಳ ವಿರುದ್ದ ಪ್ರತಿಭಟನೆಗಳು ಅನಿವಾರ್ಯವಾಗಲಿದೆ ಎಂದರು.
ರಾಜ್ಯದಲ್ಲಿ ನಮಗೆ ಕೈಗಾರಿಕೆಗಳು ಬೇಕು ಅದರೆ ಕಾರ್ಮಿಕರನ್ನು ಶೋಷಿಸುವಂತಾಗ ಬಾರದು. ಸಂವಿಧಾನ ಬದ್ದವಾದ ಕಾಯ್ದೆಗಳನ್ನು ಗಾಳಿಗೆ ತೊರಲಾಗುತ್ತಿದೆ ಮಹಿಳಾ ಕಾರ್ಮಿಕರನ್ನು ಶೋಷಣೆ ಮಾಡಲಾಗುತ್ತಿದೆ. ಕಾಯ್ದೆ ಪ್ರಕಾರ ನಿಗಧಿತ ಅವಧಿಯವರೆಗೆ ದುಡಿಸಿ ಕೊಳ್ಳದೆ ಹೆಚ್ಚುವರಿಯಾಗಿ ದುಡಿಸಿ ಕೊಳ್ಳುವ ಮೂಲಕ ಶೋಷಿಸಲಾಗುತ್ತಿದೆ. ಪಿ.ಎಫ್, ಇ.ಎಸ್.ಐ. ಸೇರಿದಂತೆ ಯಾವೂದೇ ಸೌಲಭ್ಯಗಳು ಕಲ್ಪಿಸುವಲ್ಲಿ ವಿಫಲವಾಗಿದೆ, ತೆರಿಗೆಗಳು ಸೌಲಭ್ಯಗಳನ್ನು ನೀಡುವುದನ್ನು ತಪ್ಪಿಸಿ ಕೊಳ್ಳಲು ಕೈಗಾರಿಕೆಗಳನ್ನು ವಿಭಜಿಸಿ ಕೊಂಡು ಹಳೆ ಕಾರ್ಮಿಕರನ್ನು ಬೀದಿ ಪಾಲು ಮಾಡಿ ಹೊಸಬರನ್ನು ನೇಮಿಸಿ ಕೊಳ್ಳುವ ಮೂಲಕ ಉದ್ಯೋಗದಲ್ಲಿ ಯಾವೂದೇ ಭದ್ರತೆ ಇಲ್ಲದೆ ಕಾರ್ಮಿಕರನ್ನು ತ್ರಿಶಂಕು ಸ್ಥಿತಿಗೆ ದೂಡಲಾಗುತ್ತಿದೆ ಎಂದು ಕಳವಳ ವ್ಯಕ್ತ ಪಡೆಸಿದರು
.
ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಕೃಷಿ ಅಧಾರಿತ ಕೈಗಾರಿಕೆಗಳನ್ನು ಸ್ಥಾಪಿಸ ಬೇಕು.ಕೈಗಾರಿಕೆಗಳಲ್ಲಿ ಕಾರ್ಮಿಕರ ಕಾಯ್ದೆಗಳನ್ನು ಕಡ್ಡಾಯವಾಗಿ ಜಾರಿಗೆ ಮಾಡ ಬೇಕು. ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗ ನೀಡ ಬೇಕು. ಕಾರ್ಪೋರೇಟ್ ಬಂಡವಾಳ ಪರ ರೂಪಿಸಿರುವ ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಗೆ ತರಬಾರದು, ರೂ ೩೬ ಸಾವಿರ ಸಮಾನ ಕನಿಷ್ಠ ವೇತನ ನಿಗಧಿ ಪಡೆಸ ಬೇಕು. ಗುತ್ತಿಗೆ ಪದ್ದತಿ ನಿಯಂತ್ರಣಕ್ಕಾಗಿ ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಕಾನೂನು ಜಾರಿಗೆ ತರಲು ಒತ್ತಾಯಿಸಲು ನಿರ್ಣಯಿಸಲಾಯಿತು ಎಂದರು.
ನಿರೂದ್ಯೋಗ ಸಮಸ್ಯೆ ನಿವಾರಣೆ ಮಾಡಲು, ಕೋರ್ಟ್ ತೀರ್ಪುಗಳನ್ನು ಜಾರಿ ಮಾಡ ಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ನಿಧಿ ದುರುಪಯೋಗ ನಿಲ್ಲಿಸ ಬೇಕು. ಎಲ್ಲಾ ಯೋಜನೆಯ ನೌಕರರನ್ನು ಖಾಯಾಂ ಮಾಡಲು ನ್ಯಾಯಾಲಯದ ತೀರ್ಪುಗಳನ್ನು ಅನುಷ್ಟನಕ್ಕೆ ತರಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ದುರುಪಯೋಗಗಳಿಗೆ ಕಡಿವಾಣ ಹಾಕ ಬೇಕು. ಇ.ಪಿ.ಎಫ್. ನಿವೃತ್ತಿ ವೇತನವನ್ನು ಕನಿಷ್ಟ ೧೦ ಸಾವಿರಕ್ಕೆ ಏರಿಕೆ ಮಾಡ ಬೇಕು. ಚಿನ್ನದ ಗಣಿಯನ್ನು ಪುನರ್ ಆರಂಭಿಸ ಬೇಕು ಮತ್ತು ಪರಿಹಾರ ಹಾಗೂ ಗಣಿ ಕಾರ್ಮಿಕರ ನಿವಾಸಗಳನ್ನು ಅವರಿಗೆ ಹಕ್ಕು ನೀಡ ಬೇಕೆಂದು ಒತ್ತಾಯಿಸಲು ತೀರ್ಮಾನಿಸಲಾಯಿತು ಎಂದು ಹೇಳಿದರು.
ನೂತನ ಸಮಿತಿ ರಚನೆ-
ಅಧ್ಯಕ್ಷ ರಾಗಿ ಪಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ. ಖಜಾಂಜಿಯಾಗಿ ಹೆಚ್.ಬಿ. ಕೃಷ್ಣಪ್ಪ, ಉಪಾಧ್ಯಕ್ಷರಾಗಿ ಗಾಂಧಿ ನಗರ ನಾರಾಯಣಸ್ವಾಮಿ, ಅಮರನಾರಾಯಣಪ್ಪ, ಎ.ಆರ್.ಬಾಬು ಪಿ.ಆನಂದ್ ರಾಜ್, ಅಂಜಲಮ್ಮ. ಪಿ.ತಂಗರಾಜ್. ಕಾರ್ಯದರ್ಶಿಗಳಾಗಿ ಬಿ.ಎಲ್. ಕೇಶವರಾವ್. ಎಂ.ಜಯಲಕ್ಷ್ಮೀ, ಎಂ ಭೀಮರಾಜ್, ಶಿವಾನಂದ್, ಎಸ್.ಎ.ಆನಂದ್, ಲಿಯೋರಾಜ್, ಐ.ಸಿ. ವೀರ ಭದ್ರ, ಎನ್.ಕಲ್ಪನಾ,ವಿ.ಹರೀಶ್ ಇವರುಗಳು ಆಯ್ಕೆಯಾಗಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ನೊತನ ಪದಾಧಿಕಾರಿಗಳು ಉಪಸ್ಥಿತರಿದ್ದರು.


























