ಕೋಲಾರ,ಆ.೨೬- ತಾಲೂಕಿನ ಸುಗುಟೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ನೂತನ ಕಟ್ಟಡ ಶಂಕು ಸ್ಥಾಪನೆ ಹಾಗೂ ೨೦೨೪ – ೨೫ ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ವೇಮಗಲ್ ಕ್ಷೇತ್ರ ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಚಂಜಮಲೆ ರಮೇಶ್ ಗುದ್ದಲಿ ಪೂಜೆ ನೆರವೇರಿಸಿದ ನಂತರ ಸಾಮಾನ್ಯ ಸಭೆಗೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದುವರೆಗೂ ಸುಗಟೂರು ಹೋಬಳಿ ಕೇಂದ್ರದಲ್ಲಿ ಹಾಲಿನ ಕೇಂದ್ರದ ಸ್ವಂತ ಕಟ್ಟಡ ತಮ್ಮ ಅವಧಿಯಲ್ಲಿ ನೂತನ ಕಟ್ಟಡ ಶೀಘ್ರವಾಗಿ ನಿರ್ಮಾಣ ಮಾಡಿ ಹಾಲು ಶೇಖರಣ ಘಟಕವನ್ನು ಬೇರೊಂದು ಗ್ರಾಮದಿಂದ ಇಲ್ಲಿಗೆ ವರ್ಗಾಯಿಸಲಾಗುವುದೆಂದು ತಿಳಿಸಿದರು
ಕೋಲಾರ ಒಕ್ಕೂಟದ ನಿಧಿ ಜೊತೆಗೆ ಧರ್ಮಸ್ಥಳ ಯೋಜನೆ ಹಾಗೂ ಇತರ ಮೂಲಗಳಿಂದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಇರುವ ಹಣವನ್ನು ಶೀಘ್ರವಾಗಿ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.
ರೈತರು ದೇಶದ ಬೆನ್ನೆಲುಬಾಗಿದ್ದು ಹಾಲು ಉತ್ಪಾದನೆ ಕೋಲಾರ ಜಿಲ್ಲೆಯ ಜೀವನಾಡಿಯಾಗಿದೆ. ಗುಣಮಟ್ಟದ ಹಾಲನ್ನು ರೈತರು ಉತ್ಪಾದನೆ ಮಾಡಿ ಪ್ರತಿನಿತ್ಯ ಡೈರಿಗೆ ಸರಬರಾಜು ಮಾಡಬೇಕೆಂದು ಮನವಿ ಮಾಡಿದರು. ಹಾಲು ಉತ್ಪಾದಕರ ಸರ್ವತೋಮುಖ ಅಭಿವೃದ್ಧಿಗಾಗಿ ತಾವು ಬದ್ಧ ಎಂದು ತಿಳಿಸಿದರು.
ಸುಗಟೂರು ಡೈರಿ ವಾರ್ಷಿಕವಾಗಿ ಎರಡು ಕೋಟಿ ರೂಪಾಯಿ ಹಾಲಿನ ವ್ಯಾಪಾರ ವಹಿವಾಟು ನಡೆಸಿದ್ದು ೧೬.೩೧ ಲಕ್ಷ ವ್ಯಾಪಾರ ಲಾಭಾಂಶ ಒಂದಿದ್ದು ಸುಗುಟೂರು ಹೋಬಳಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಕೋಲಾರ ಹಾಲು ಒಕ್ಕೂಟದ ನಾಮನಿ ನಿರ್ದೇಶಕ ಯೂನಸ್ ಷರೀಫ್ ತಾವು ೫ ಲಕ್ಷಗಳ ಅನುದಾನವನ್ನು ಕಟ್ಟಡಕ್ಕೆ ಒದಗಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೋಲಾರ ಹಾಲು ಒಕ್ಕೂಟದ ಶಿಬಿರ ಉಪ ವ್ಯವಸ್ಥಾಪಕ ಡಾ. ಮಹೇಶ್ ಆರ್, ಸಮಾಲೋಚನ ವಿಸ್ತರಣಾಧಿಕಾರಿ ಶ್ರೀಕಾಂತ್ ಎಸ್, ಸುಗಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂಕತಟ್ಟಿ ಭೂಪತಿಗೌಡ, ಮಾಜಿ ಅಧ್ಯಕ್ಷರಾದ ನಾರಾಯಣಗೌಡ, ಎಸ್ ಎಂ ಮಂಜುನಾಥ್, ಎಪಿಎಂಸಿ ಮಾಜಿ ನಿರ್ದೇಶಕ ಹಾಗೂ ಹಾಲಿ ಗ್ರಾಮ್ ಪಂಚಾಯ್ತಿ ಸದಸ್ಯ ಕೆ. ರವಿ ಸುಗಟೂರು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಸ್.ಪಿ ಕೃಷ್ಣ, ಉಪಾಧ್ಯಕ್ಷ ನಾರಾಯಣ ಮೂರ್ತಿ, ಸದಸ್ಯರುಗಳಾದ ರವಿಕುಮಾರ್, ಬೈಚಪ್ಪ, ನಾಗಯ್ಯ ರೆಡ್ಡಿ, ಎಸ್ಸಾರ್ ನಾಗರಾಜ್, ಎಸ್ ಆರ್ ನಾರಾಯಣಸ್ವಾಮಿ, ಎಸ್ ಎಲ್ ಚಂದ್ರಪ್ಪ, ಸೈಯದ್ ಖಾಲಿಮೂಲ, ಎಸ್. ಮುನಿನಾರಾಯಣಸ್ವಾಮಿ, ನಂಜಮ್ಮ, ನಾರಾಯಣಮ್ಮ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ತಿರುಮಲಪ್ಪ, ಗ್ರಾಮದ ಹಿರಿಯ ಮುಖಂಡರಾದ ಸೈಯದ್ ಸಿರಾಜ್, ಸುಗಟೂರು ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯದರ್ಶಿ ಎಸ್.ಕೆ. ಜನಾರ್ದನರಾಜು, ಹಾಲು ಪರೀಕ್ಷಕ ಎಲ್, ವಿನೋದ್, ಶ್ರೀನಿವಾಸ್, ಕೃಷ್ಣಪ್ಪ ಮುಂತಾದವರು ಹಾಜರಿದ್ದರು.
























