
ಕಲಬುರಗಿ;ನ.7: ನವೆಂಬರ್ 7, 1875 ರಲ್ಲಿ ಬಂಕಿಮಚಂದ್ರ ಚಟರ್ಜಿ ಅವರು ಬರೆದ ವಂದೇ ಮಾತರಂ ಹಾಡಿನ 150ನೇ ವಾರ್ಷಿಕೋತ್ಸವವನ್ನು ಗುರುತಿಸಲು ಶುಕ್ರವಾರ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಿಂದ ಪ್ರಧಾನಿ ನರೇಂದ್ರ ಮೋದಿಯವರ ನೇರ ಪ್ರಸಾರದೊಂದಿಗೆ ಶರಣಬಸವ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ವಿವಿಯ ಕುಲಸಚಿವ ಡಾ. ಎಸ್. ಜಿ. ಡೊಳ್ಳೆಗೌಡರ್ ನೇತೃತ್ವದಲ್ಲಿ ಭಾರತದ ರಾಷ್ಟ್ರೀಯ ಗೀತೆ “ವಂದೇ ಮಾತರಂ”ನ ಸಾಮೂಹಿಕ ನಿರೂಪಣೆಯಲ್ಲಿ ಭಾಗವಹಿಸಿದ್ದರು.
ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಹೆಚ್ಚಾಗಿ ಮಹಿಳಾ ವಿದ್ಯಾರ್ಥಿಗಳು, ದೊಡ್ಡಪ್ಪ ಅಪ್ಪಾ ಸಭಾಂಗಣದಲ್ಲಿ ಒಟ್ಟುಗೂಡಿದ್ದರು. ಭಾರತದ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಬ್ರಿಟಿμï ಆಡಳಿತಗಾರರ ವಿರುದ್ಧ ದಂಗೆ ಎಬ್ಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ವಿಭಿನ್ನ ಭಾμÉಗಳನ್ನು ಮಾತನಾಡುವ, ವಿಭಿನ್ನ ಸಂಸ್ಕøತಿಗಳಿಂದ ಕೂಡಿರುವ ಜನರಲ್ಲಿ ಒಂದು ಪ್ರೇರಣಾ ಶಕ್ತಿಯಾಗಿ ಪಾತ್ರ ವಹಿಸಿದ “ವಂದೇ ಮಾತರಂ” ಗೀತೆಯ ರೋಮಾಂಚಕ ನಿರೂಪಣೆಯಲ್ಲಿ ಭಾಗವಹಿಸಿದ್ದರು.
ಈ ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವವನ್ನು ಗುರುತಿಸಲು ಕೇಂದ್ರ ಸರ್ಕಾರವು ಇಂದಿನಿಂದ ನವೆಂಬರ್ 07, 2026 ರವರೆಗೆ ವರ್ಷವಿಡೀ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಪ್ರಮುಖರಲ್ಲಿ ವಿವಿಯ ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ ಸೇರಿದಂತೆ ವಿಶ್ವವಿದ್ಯಾಲಯದ ಎಲ್ಲಾ ಅಧ್ಯಾಪಕರು ಮತ್ತು ವಿವಿಧ ವಿಭಾಗಗಳ ಡೀನರು ಹಾಗೂ ಮುಖ್ಯಸ್ಥರು ಉಪಸ್ಥಿತರಿದ್ದರು.

























