
ಬಾದಾಮಿ,ಆ.೧೩: ವಂದೇ ಮಾತರಂ ಗೀತೆಯ ೧೫೦ನೇ ವ?Áðಚರಣೆ ಹಾಗೂ ಸ್ವಾತಂತ್ರ‍್ಯದ ೮೦ನೇ ವ?Àðದ ಸಂಭ್ರಮದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿ?Àತ್ (ಎಬಿವಿಪಿ) ವತಿಯಿಂದ ಬಾದಾಮಿಯಲ್ಲಿ ಭವ್ಯವಾದ ೧೫೦ ಮೀಟರ್ ತಿರಂಗಾ ರ‍್ಯಾಲಿ ನಡೆಯಿತು.ರ‍್ಯಾಲಿಯಲ್ಲಿ ವೀರ ಪುಲಕೇಶಿ ಕಾಲೇಜಿನ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಹ ರ‍್ಯಾಲಿಗೆ ಬೆಂಬಲ ನೀಡಿದರು.
ದೇಶಭಕ್ತಿ ಹಾಗೂ ರಾ?Á್ಟ್ರಭಿಮಾನದ ಸಂದೇಶ ಸಾರಿದ ರ‍್ಯಾಲಿಯು ಬಾದಾಮಿಯ ಪ್ರಮುಖ ಬೀದಿಗಳಲ್ಲಿ ಸಾಗಿತು. ಬೃಹತ್ ತಿರಂಗಾ ಧ್ವಜದೊಂದಿಗೆ ವಿದ್ಯಾರ್ಥಿಗಳು ದೇಶಭಕ್ತಿ ಘೋ?Àಣೆಗಳನ್ನು ಕೂಗುತ್ತಾ ರ‍್ಯಾಲಿಯಲ್ಲಿ ಪಾಲ್ಗೊಂಡರು. ರ‍್ಯಾಲಿಗೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಲವು ಸ್ಥಳಗಳಲ್ಲಿ ಸಾರ್ವಜನಿಕರು ಹೂವುಗಳನ್ನು ಸುರಿಸುವ ಮೂಲಕ ರ‍್ಯಾಲಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ವಿಜಯಪುರ ವಿಭಾಗ ಸಂಚಾಲಕರಾದ ಪ್ರಥಮೇಶ್ ವಾಘಮೋಡೆ ಅವರು ಮಾತನಾಡಿ, ವಂದೇ ಮಾತರಂ ಗೀತೆಯ ೧೫೦ ವ?Àðಗಳ ಪರಂಪರೆ ಹಾಗೂ ಸ್ವಾತಂತ್ರ‍್ಯದ ೮೦ನೇ ವ?Àðದ ಸಂಭ್ರಮವು ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿ ಮತ್ತು ರಾ?Á್ಟ್ರಭಿಮಾನವನ್ನು ಮತ್ತ?ÀÄ್ಟ ಬಲಪಡಿಸುವಂತಾಗಬೇಕು ಎಂದು ಹೇಳಿದರು. ಯುವಜನತೆ ದೇಶದ ಏಕತೆ, ಅಖಂಡತೆ ಹಾಗೂ ರಾ?À್ಟ್ರದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.ರ‍್ಯಾಲಿಯಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯ ಎ.ಎ.ತೋಪಲಕಟ್ಟಿ, ಪಿ.ಎಸ್.ಜವಳಿ, ತಾಲೂಕು ಎಬಿವಿಪಿಯ ಅಧ್ಯಕ್ಷ ಡಾ.ಅವಿನಾಶ ಮಮದಾಪೂರ, ಪದವಿ ಕಾಲೇಜಿನ ಎನ್‌ಎಸ್‌ಎಸ್, ಪಿಯು ಕಾಲೇಜಿನ ಎನ್‌ಸಿಸಿ ಅಧಿಕಾರಿ ಹಾಗೂ ವಿದ್ಯಾರ್ಥಿಗಳು, ಎಬಿವಿಪಿಯ ಕಾರ್ಯಕರ್ತರು, ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.






























