ಗಡಿ ಘರ್ಷಣೆ ೧೫ ಪಾಕ್ ಸೈನಿಕರು ಸಾವು

ಇಸ್ಲಮಾಬಾದ್,ಅ.೧೨- ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಿ ಸೈನಿಕರ ನಡುವೆ ಡುರಾಂಡ್ ರೇಖೆಯ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ೧೫ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ

ಡುರಾಂಡ್ ರೇಖೆಯಲ್ಲಿ ಈ ಘರ್ಷಣೆ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ಪಾಕಿಸ್ತಾನಿ ಸೇನಾ ಕ್ರಮಗಳಿಗೆ ಅಫ್ಘಾನ್ ಪಡೆಳು ದಾಳಿ ನಡೆಸಿದ್ದು ಅದರ ಪರಿಣಾಮ ಈ ಹಿಂಸಾತ್ಮಕ ಘರ್ಷಣೆ ನಡೆದಿದೆ ಎಂದು ಹೇಳಲಾಗಿದೆ

“ಕುನಾರ್ ಮತ್ತು ಹೆಲ್ಮಂಡ್ ಪ್ರಾಂತ್ಯಗಳಲ್ಲಿ ಡುರಾಂಡ್ ರೇಖೆಯಾದ್ಯಂತ ಪಾಕಿಸ್ತಾನಿ ಸೇನೆಯಿಂದ ಹಲವಾರು ಸೇನೆಯ ಹೊರ ಠಾಣೆಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿವೆ” ಎಂದು ಅಫ್ಘಾನ್ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ ಗುಂಪಿನ ನಾಯಕ ನೂರ್ ವಾಲಿ ಮೆಹ್ಸೂದ್ ಸೇರಿದಂತೆ ಅದರ ಹಿರಿಯ ಕಮಾಂಡರ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ

ಅಫ್ಘಾನ್ ಸೇನಾ ಪಡೆಗಳು ಡುರಾಂಡ್ ಲೈನ್ ಬಳಿಯ ಪಾಕಿಸ್ತಾನಿ ಮಿಲಿಟರಿ ಶಿಬಿರಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿವೆ. ವರದಿಗಳ ಪ್ರಕಾರ ಅಫ್ಘಾನ್ ಪಡೆಗಳು ನಂಗರ್ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿನ ಹಲವಾರು ಪಾಕಿಸ್ತಾನಿ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ

ಅಫ್ಘಾನ್ ರಕ್ಷಣಾ ಸಚಿವಾಲಯದ ಪ್ರಕಾರ, “ದಾಳಿಯಲ್ಲಿ ಪಾಕಿಸ್ತಾನಿ ಕಡೆಯ ಸೌಲಭ್ಯಗಳು ಮತ್ತು ಉಪಕರಣಗಳು ನಾಶವಾಗಿವೆ.”ಕುನಾರ್ ಮತ್ತು ಹೆಲ್ಮಂಡ್‌ನಾದ್ಯಂತದ ಸೇನಾ ಶಿಬಿರ ನಾಶವಾಗಿದೆ ಎಂದು ಹೇಳಿದೆ

ಘರ್ಷಣೆಯ ಸಮಯದಲ್ಲಿ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳು ಮತ್ತು ಉಪಕರಣಗಳು ನಾಶವಾಗಿವೆ. ಪಾಕಿಸ್ತಾನಿ ಕಡೆಯಿಂದ ಗಮನಾರ್ಹ ಸಾವುನೋವುಗಳು ಸಂಭವಿಸಿವೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ

“ಕಾಬೂಲ್ ಮೇಲೆ ಪಾಕಿಸ್ತಾನಿ ಸೇನೆ ನಡೆಸಿದ ವಾಯುದಾಳಿಗೆ ಪ್ರತೀಕಾರವಾಗಿ,” ತಾಲಿಬಾನ್ ಪಡೆಗಳು ಗಡಿಯಲ್ಲಿ “ವಿವಿಧ ಪ್ರದೇಶಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ಭಾರೀ ಘರ್ಷಣೆಯಲ್ಲಿ” ತೊಡಗಿವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ತಾಲಿಬಾನ್ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತ್ ಖೋವಾರಾಜ್ ಪ್ರತಿಕ್ರಿಯಿಸಿ ” ಅಫ್ಘಾನಿಸ್ತಾನದ ಪ್ರದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದಿದ್ದಾg.