
ಸಂಜೆವಾಣಿ ನ್ಯೂಸ್
ಮೈಸೂರು:ಜ.14:- ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮದ ಆಕ್ಸ್‍ಫರ್ಡ್ ಪಬ್ಲಿಕ್ ಶಾಲೆಯ 14ನೇ ವರ್ಷದ ವಾರ್ಷಿಕೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿರಿಯಾಪಟ್ಟಣ ತಾಲೂಕಿನ ಗ್ಯಾರೆಂಟಿ ಅನುಷ್ಠಾನ ಆಸ್ರಯ ಸಮಿತಿಯ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ಅವರು ವಹಿಸಿದ್ದರು.
ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಸುಮಿತ್, ಮಾಜಿ ಅಧ್ಯಕ್ಷ ಸಚ್ಚಿನ್,ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ದೀಪು, ಜಗದೀಶ್, ಸಂಸ್ಥೆಯ ನಿರ್ದೇಶಕ ಕೆ.ಬಿ.ಸುಬ್ರಹ್ಮಣ್ಯ, ಡಿಟಿಎಂಎನ್ ಸಂಸ್ಥೆಯ ಆಡಳಿತ ಸಂಸ್ಥಾಪಕ ನಟರಾಜು, ಶಾಲಾ ವ್ಯವಸ್ಥಾಪ ಕಾಂತರಾಜು, ಮುಖ್ಯ ಶಿಕ್ಷಕಿ ಜಯಶೀಲ ಮತ್ತು ಶಿಕ್ಷಕ ವೃಂದದವರು, ಪೆÇೀಷಕರು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು. ಇದೇ ವೇಳೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.




























