14ನೇ ದಿನಕ್ಕೆ ಕಾಲಿಟ್ಟ ರೈತರ ಆಹೋರಾತ್ರಿ ಧರಣಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹನೂರು ನ 9 :-
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ರೈತ ಸಂಘಟನೆ ಹಮ್ಮಿಕೊಂಡಿದ್ದ ಆಹೋ ರಾತ್ರಿ ಧರಣಿ ಪ್ರತಿಭಟನೆ 14 ನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ನಡೆದ ಶಾಂತಿಯುತ ಅಹೋರಾತ್ರಿ ಧರಣಿಗೆ ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಚರ್ಚ್ ನ ಧರ್ಮಗುರುಗಳಾದ ಮಾರ್ಷಲ್ ರವರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸದ್ದಾರೆ.


ಹನೂರು ತಾಲೂಕಿನ ಕುರಟ್ಟಿ ಹೊಸೂರು ಪಂಚಾಯಿತಿ, ಶೆಟ್ಟಹಳ್ಳಿ ಪಂಚಾಯಿತಿ, ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಗಳ ಅಂತರ್ಜಲ ಅಭಿವೃದ್ಧಿಗಾಗಿ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರೈತ ಸಂಘಟನೆ ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿ ಪ್ರತಿಭಟನೆ ಮುಂದುವರಿದು ಹದಿಮೂರು ದಿನಗಳು ಕಳೆದು 14 ನೇ (ಇಂದು ಭಾನುವಾರ) ದಿನಕ್ಕೆ ಕಾಲಿಟ್ಟಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಏತನೀರಾವರಿ ಹೋರಾಟ ಸಮಿತಿ ದಿನಾಂಕ : 27-10-2025 ರ ಸೋಮವಾರ ಬೆಳಗ್ಗೆ ಪ್ರಾರಂಭವಾದ ಅಹೋರಾತ್ರಿ ಧರಣಿ ಪ್ರತಿಭಟನೆ 13ನೇ ದಿನಗಳನ್ನು ಪೂರೈಸಿ 14 ನೇ ದಿನ ಭಾನುವಾರಕ್ಕೆ ಕಾಲಿಟ್ಟಿದೆ. ದಂಟಳ್ಳಿ ನೀರಾವರಿ ಯೋಜನೆಗೆ ಡಿ.ಪಿ.ಆರ್. ಮಾಡಿಸುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ. ರೈತರ ಸಮಸ್ಯೆಗಳು ಬಗೆಹರಿಸಬೇಕು ಎಂಬ ರೈತರ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.


ಇದೆ ವೇಳೆ ರೈತ ಸಂಘದ ಅರ್ಪುದರಾಜ್ ಮಾತನಾಡಿ ಹಲವು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ನಡೆಯನ್ನು ಖಂಡಿಸಿ ಇಂದಿಗೆ 13 ದಿನಗಳಿಂದ ಅಹೋರಾತ್ರಿ ಶಾಂತಿಯುತ ಧರಣಿ ನಡೆಸುತ್ತಿದ್ದು ಮೂಲಭೂತ ಸೌಲಭ್ಯ ಕಲ್ಪಿಸುವಂತೆ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧರಣಿಗೆ ಬೆಂಬಲ ಸೂಚಿಸುತ್ತಿದ್ದಾರೆ.


ಈಗಾಗಲೇ ಕಳೆದ 27-10-2025 ರಂದು ಅಹೋರಾತ್ರಿ ಧರಣಿ ಸ್ಥಳಕ್ಕೆ ಆಗಮಿಸಿದ್ದ ಶಾಸಕರಾದ ಎಂ.ಆರ್ ಮಂಜುನಾಥ್ ರವರು ಆಗಮಿಸಿ ರೈತರು ಜೊತೆಗೆ ಮಾತನಾಡಿ ಇನ್ನೊಂದು ವಾರದೊಳಗೆ ಹಾಲೇರಿ ಕೆರೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡುವುದಾಗಿ ಹೇಳಿ ಮಾತಿಗೆ ತಪ್ಪಿರುತ್ತಾರೆ ಎಂದು ತಿಳಿಸಿದರು.


ಧರಣಿಯಲ್ಲಿ ಬಿದರಹಳ್ಳಿ ಚರ್ಚ್ ನ ಫಾದರ್ ಮಾರ್ಷಲ್, ಅರ್ಪುದ ರಾಜ್, ಬಿದರಹಳ್ಳಿ ಪುಟ್ಟಸ್ವಾಮಿ, ಪೀಟರ್, ಸೂಸೈ ಮಾಣಿಕ್ಯಂ, ಜಾನ್ ಜೋಸೆಫ್, ಜಪಮಾಲೆ, ದಂಟಳ್ಳಿ ಮಹದೇವಪ್ಪ, ಕುರಟ್ಟಿ ಹೊಸೂರು ಶಿವು, ಕೊಳಂದೈ ತೆರೆಸಾ, ಶೆಲ್ವ ಮೇರಿ, ರೆಜಿನಾ ಮೇರಿ, ಲೂರ್ದುಮೇರಿ, ರಾಜಣ್ಣ, ಚಿನ್ನ ತಾಯಿ, ಮಾದಮ್ಮ, ಮೈಲ, ಪರಿಮಳಾ, ಹಾಗೂ ಅನೇಕ ನಾಗರಿಕರು ಭಾಗವಹಿಸದ್ದರು.