
ಸಂಜೆವಾಣಿ ವಾರ್ತೆ
ಹನೂರು ನ 8 :- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ರೈತ ಸಂಘಟನೆ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಶುಕ್ರವಾರ ವಡ್ಡರ ದೊಡ್ಡಿ ಚರ್ಚ್ ಧರ್ಮಗುರುಗಳಾದ ಫಾದರ್ ಜೋಸೆಫ್ ಪೌಲ್ ರಾಜ್, ವಡಕೆಹಳ್ಳದ ಫಾದರ್ ಸ್ಟೀಫನ್, ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಹನೂರು ತಾಲೂಕಿನ ಕುರಟ್ಟಿ ಹೊಸೂರು ಪಂಚಾಯಿತಿ, ಶೆಟ್ಟಹಳ್ಳಿ ಪಂಚಾಯಿತಿ, ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಗಳ ಅಂತರ್ಜಲ ಅಭಿವೃದ್ಧಿಗಾಗಿ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರೈತ ಸಂಘಟನೆ ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿ ಪ್ರತಿಭಟನೆ ಮುಂದುವರಿದು ಹನ್ನೆರಡು ದಿನಗಳು ಕಳೆದು 13ನೇ (ಇಂದು ಶನಿವಾರ) ದಿನಕ್ಕೆ ಕಾಲಿಟ್ಟಿದೆ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆ ವಡಕೆಹಳ್ಳ ಗ್ರಾಮದ ಚರ್ಚ್ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ರೈತ ಸಂಘಟನೆ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ದಿಕ್ಕಾರ ಘೋಷಣೆಗಳನ್ನು ಕೂಗಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ದಂಟ್ಟಳ್ಳಿ ಏತ ನೀರಾವರಿ ಯೋಜನೆ ಡಿ.ಪಿ.ಆರ್ ಮಾಡುವವರಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಆಗ್ರಹಿಸಿದ್ದಾರೆ.
12 ನೇ ದಿನದ ಅಹೋರಾತ್ರಿ ಧರಣಿಗೆ ಮಾರ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಡ್ಡರ ದೊಡ್ಡಿ ಚರ್ಚ್ ಧರ್ಮಗುರುಗಳಾದ ಫಾದರ್ ಜೋಸೆಫ್ ಪೌಲ್ ರಾಜ್, ವಡಕೆಹಳ್ಳದ ಫಾದರ್ ಸ್ಟೀಫನ್, ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಮುಖ ಸಮಸ್ಯೆಗಳನ್ನು ಬಗೆಹರಿಸದ ಸರ್ಕಾರದ ನಡೆಯನ್ನು ಖಂಡಿಸಿ 12 ದಿನಗಳಿಂದ ಅಹೋರಾತ್ರಿ ಶಾಂತಿಯುತ ಧರಣಿ ನಡೆಸುತ್ತಿದ್ದು ಮೂಲಭೂತ ಸೌಲಭ್ಯ ಕಲ್ಪಿಸುವಂತೆ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಬೆಂಬಲ ಸೂಚಿಸಿದ್ದಾರೆ.
ಪ್ರತಿಭಟನೆ ವೇಳೆ ರೈತರೊಬ್ಬರು ಮುಖ್ಯ ರಸ್ತೆಯಲ್ಲಿ ಕುಳಿತು ಹುಲ್ಲು ಗಿಡಗಳನ್ನು ತಲೆಯ ಮೇಲೆ ಇಟ್ಟುಕೊಂಡು. ಮಮಟಿಯನ್ನು (ಮಣ್ಣು ಬಗೆಯುವ ಸಾಧನ) ಹೆಗಲ ಮೇಲೆ ಹಾಕಿ ಪ್ರತಿಭಟಿಸಿ ನಾವು ರೈತರು ನಮಗೆ ಬೆಳೆ ಬೆಳೆಯಲು ಕುಡಿಯಲು ನೀರು ಕೊಡಿ ಎಂದು ಆಗ್ರಹಿಸಿ ಧರಣಿ ಸತ್ಯಾಗ್ರಹ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಏತನೀರಾವರಿ ಹೋರಾಟ ಸಮಿತಿ ದಿನಾಂಕ : 27-10-2025 ರ ಸೋಮವಾರ ಬೆಳಗ್ಗೆ ಪ್ರಾರಂಭವಾದ ಅಹೋರಾತ್ರಿ ಧರಣಿ ಪ್ರತಿಭಟನೆ 12 ನೇ ದಿನಗಳನ್ನು ಪೂರೈಸಿ 13 ನೇ ದಿನ ಶನಿವಾರಕ್ಕೆ ಕಾಲಿಟ್ಟಿದೆ. ದಂಟಳ್ಳಿ ನೀರಾವರಿ ಯೋಜನೆಗೆ ಡಿ.ಪಿ.ಆರ್. ಮಾಡಿಸುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ. ರೈತರ ಸಮಸ್ಯೆಗಳು ಬಗೆಹರಿಸಬೇಕು ಎಂಬ ರೈತರ ಪ್ರತಿಭಟನೆ ಮುಂದುವರಿಸಿದ್ದಾರೆ.
ಈ ಸಮಯದಲ್ಲಿ ರೈತ ಹೋರಾಟಗಾರರಾದ ಅರ್ಪುತ್ ರಾಜ್, ಪೀಟರ್, ಪುಟ್ಟಸ್ವಾಮಿ, ಲೂರ್ದುಸ್ವಾಮಿ, ದಿವ್ಯಾನಂದ, ಅಂತೋಣಿ ಸ್ವಾಮಿ, ದಂಟಳ್ಳಿ ಗೌಡ್ರು ಶಿವಪ್ಪ, ಕೊಳಂದೈತೆರೆಸಾ, ಚಿನ್ನಾತಳ್, ಸಗಾಯಮೇರಿ, ಪೆರಿಯ ನಾಯಗಮ್ಮಾಳ್, ಜೋಸೆಫ್ ಮಾಗಗಮನಫೆÇಜಿ ಸೈನಿಕರು, ಜೋಸ್ವಾ ಸೇರಿದಂತೆ ರೈತ ಮುಖಂಡರು ಮಹಿಳೆಯರು ಭಾಗವಹಿಸಿದ್ದರು.



























