
ಬಸವನ ಬಾಗೇವಾಡಿ:ಡಿ.30: ವಿಶ್ವಗುರು ಬಸವಣ್ಣವರು ಸಮಾನತೆ ಸಮಾಜ ಕಟ್ಟುವುದು ರೊಂದಿಗೆ ಲಿಂಗಾಯತ ಮತ ಸ್ಥಾಪಕರು 12ನೇ ಶತಮಾನದ ಅನುಭವ ಮಂಟಪ ಇಂದಿನ ಪಾರ್ಲಿಮೆಂಟಿಗೆ ಪ್ರೇರಣೆ ಎಂದು ಬೆಂಗಳೂರಿನ ಡಾ. ರಾಜಶೇಖರ್ ಮಠಪತಿ ಮಾತನಾಡಿದರು
ಪಟ್ಟಣದ ಓಂ ನಗರದಲ್ಲಿರುವ ಶ್ರೀ ಮಾತೆ ಕಾಳಕಾದೇವಿಯ ಸಭಾಂಗಣ ದಲ್ಲಿ ನಡೆದ ಬಾಲಕಿ ಭುವನ ಗುಳೇದಗುಡ್ಡ ದ ಅನ್ ರಿಟರ್ನ್ ಸಿ ಹಾಗೂ ಎಂ ಎ ಗುಳೇದಗುಡ್ಡ ಅವರ ಮೂರನೇ ಕೃತಿ ಕಾಲಿಯಾಗದ ಕಡಲು ಕವನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಅನುಭವ ಮಂಟಪ ನಿಜವಾದ ಸಾಕ್ಷಿ ಹೆಣ್ಣು ಗಂಡು ಜಾತಿ ಭೇದ ಮೇಲು ಕೀಳು ಮಾಡದೆ ಶರಣರು ಸರ್ವರನ್ನು ಸಮನಾಗಿ ಕಂಡರು ಅವರ ತಂದೆಯ ಉಪಸ್ಥಿತಿಯಲ್ಲಿ ಮಗಳ ಕಾವ್ಯ ಸಂಕಲನ ಬಸವ ನಾಡಿನಿಂದ ಹೊರಬರುತ್ತಿರುವುದು ಸ್ವಾಗತ ಹೆತ್ತವರು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಮದುವೆ ಮಾಡಿ ಸಂಭ್ರಮಿಸುವ ಪಾಲಕರನ್ನು ನೋಡಿದ್ದೇವೆ ಆದರೆ ಗುಳೇದಗುಡ್ಡವರು ತಮ್ಮ ಮಗಳಿಗೆ ಸಾಹಿತ್ಯದ ದಾರಿಯೆರೆಯುತ್ತಿರುವುದು ಸಂತೋಷದ ವಿಷಯ ಇಂದಿನ ಕಾಲ ಆಕರ್ಷಿಕ ವಾದಂತಹ ಕಾಲ ಘಟ್ಟದಲ್ಲಿಯೂ ಅವಳ ಸಾಹಿತ್ಯ ಸಾಧನೆ ನಿಜಕ್ಕೂ ಇತರ ಮಕ್ಕಳಿಗೆ ಮಾದರಿಯಾಗಿದ್ದಾರೆ ಎಂದರು, ಶಿಕ್ಷಕಿ ಮಾಯಾ ಶಂಕರ್ ಲು ಗಾಡೆ ದಿ ಅನ್ ರಿಟರ್ನ್ ಸಿ ಕೃತಿ ಪರಿಚಯಿಸಿ ಮಾತನಾಡಿ ಆಟ ಆಡುವ ವಯಸ್ಸಿನಲ್ಲಿ ಮಾಧ್ಯಮದ ಸೆಳೆತದಲ್ಲಿ ಕವನ ರಚಿಸಿ ಸಮಾಜಕ್ಕೆ ಆಕರ್ಷಣೀಯ ಕಾರ್ಯ ಶ್ರೇಷ್ಠವಾದದ್ದು ಓದುವನ ಮನಸ್ಸು ಅರಿತುಕೊಂಡು ಭುವನ 15 ರಿಂದ 20 ಸಾಲಿನ ಪ್ರತಿ ಕವನಗಳು ಓದಿಕೊಂಡು ಹೋಗುತ್ತವೆ ದೊಡ್ಡ ವಿಚಾರಗಳನ್ನು ಪುಟ್ಟ ಬಾಲಕೀಯ ಸಣ್ಣ ಕೃತಿಯಲ್ಲಿ ಮೂಡಿಬಂದಿವೆ ಎಂದು ಕೃತಿ ಪರಿಚಯಿಸಿದರು ಅದರಂತೆ ಶಿಕ್ಷಕ ಸಾಹೇಬ ಗೌಡ ಬಿರಾದಾರ ಖಾಲಿಯಾಗದ ಕಡಲು ಕೃತಿ ಪರಿಚಯಿಸಿದರು ಈ ಕೃತಿ ಮಾನವನಿಗೆ ದಾರಿದೀಪವಾಗಿವೆ ಅಲ್ಲದೆ ಸಮಾಜದ ಅಂಕು ಡೊಂಕುಗಳನ್ನು ತಿದ್ದುವುದಾಗಿದೆ ಆಧ್ಯಾತ್ಮದ ಸಂಬಂಧಕ್ಕೆ ಕೆಲವೊಂದು ಕವನಗಳಿವೆ, ಕೆಲವೊಂದು ಕವನಗಳು ಪ್ರೀತಿ ಪ್ರೇಮಕ್ಕೆ ಇವೆ ಒಟ್ಟಾರೆ ಈ ಕಾಲಿಯಾಗದ ಕಡಲು ಕೃತಿ ಒಂದು ಉತ್ತಮವಾದಂತಹ ಕವನ ಸಂಕಲನವಾಗಿದೆ ಕಾರ್ಯಕ್ರಮದ ಸಾನಿಧ್ಯವಯಸಿದ ಶಿವಪ್ರಕಾಶ್ ಶಿವಾಚಾರ್ಯ ಮಾತನಾಡಿ ಮೊಬೈಲ್ ಬಂದಮೇಲೆ ಬಹಳಷ್ಟು ಜನ ಪುಸ್ತಕ ಓದುವುದನ್ನು ನಿಲ್ಲಿಸಿದ್ದಾರೆ ಹಿಂದಿನ ಕಾಲದಲ್ಲಿ ಪತ್ರ ಬರೆದು ಅಂಚೆ ಡಬ್ಬಿಗೆ ಹಾಕುವ ಖುಷಿ ಇಂದು ಮಾಯವಾಗಿದೆ ಪುಸ್ತಕಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನ ಲಭಿಸುತ್ತದೆ ಎಂದರು ಸಿದ್ದಲಿಂಗ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಆಶೀರ್ವಚನ ನೀಡಿದರು ಶ್ರೀ ಎಸ್ ಎಸ್ ಜಳಕಿ ನಿವೃತ್ತ ಉಪಪ್ರಚಾರರು ಹಾಗೂ ಶ್ರೀ ಕೆ ಬಿ ಕಡೆಮನಿ ನಿವೃತ್ತ ಉಪನ್ಯಾಸಕರು ಮತ್ತು ಶ್ರೀ ಎಂ ಎ ಗುಳೇದಗುಡ್ ಕಾರ್ಯಕ್ರಮದಲ್ಲಿ ಮಾತನಾಡಿದರು ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಎಚ್ ಬಿ ಬಾರಿ ಕಾಯಿ ಅಧ್ಯಕ್ಷರು ಶಿಕ್ಷಕರ ಸಂಘ ಬಸವನಬಾಗೇವಾಡಿ ಇವರು ನಡೆಸಿಕೊಟ್ಟರು ಪ್ರಾರ್ಥನೆಯನ್ನು ಶ್ರೀಮತಿ ಡಾ. ವೀಣಾ ಗುಳೇದಗುಡ್ಡ ಹಾಗೂ ಪೂರ್ಣಿಮಾ ಅವರು ನಡೆಸಿದರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಲ್ಲಿಕಾರ್ಜುನ ಗುಡಿ ಹಾಗೂ ಶ್ರೀಮತಿ ಶ್ರೀದೇವಿ ಹಿರೇಮಠ ನೆರವೇರಿಸಿದರು























