12 ಸಾವಿರ ಕೋಟಿ ಮಾದಕ ವಸ್ತು ಜಪ್ತಿ

ಹೈದರಾಬಾದ್, ಸೆ.6– ತೆಲಂಗಾಣದಲ್ಲಿ ಮಾದಕ ವಸ್ತು ಜಾಲ ಭೇಧಿಸಿರುವ ಮಹಾರಾಷ್ಟ್ರದ ಥಾಣೆಯ ಮೀರಾ ಭಯಾಂದರ್ ಪೆÇಲೀಸರು ಸರಿ ಸುಮಾರು 12 ಸಾವಿರ ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡು 13 ಮಂದಿಯನ್ನು ಬಂಧಿಸಿದ್ಧಾರೆ.


ಮಾದಕ ವಸ್ತು ಜಾಲದ ಹಿಂದೆ ಅಂತರರಾಷ್ಟ್ರೀಯ ಸಂಪರ್ಕ ಹೊಂದಿರುವ ಜಾಲ ಇರುವುದು ಪತ್ತೆಯಾಗಿದ್ದು ಅದನ್ನು ಪತ್ತೆ ಮಾಡಲು ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಸಂಗತಿ ಬಹಿರಂಗಪಡಿಸಿದೆ.
ಅತಿದೊಡ್ಡ ಮಾದಕ ವಸ್ತುಗಳ ವಿರೋಧಿ ಕಾರ್ಯಾಚರಣೆಗಳಲ್ಲಿ ಒಂದಾದ ಥಾಣೆ ಜಿಲ್ಲೆಯ ಮೀರಾ ಭಯಾಂದರ್ ಪೆÇಲೀಸರು ತೆಲಂಗಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೃಹತ್ ಮಾದಕ ವಸ್ತುಗಳ ತಯಾರಿಕಾ ಸಿಂಡಿಕೇಟ್ ಅನ್ನು ಬೇಧಿಸಿದ್ದಾರೆ.


ಪೆÇಲೀಸರು ಸುಮಾರು 32,000 ಲೀಟರ್ ಕಚ್ಚಾ ಎಂಡಿ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 12,000 ಕೋಟಿ ರೂ. ಮೌಲ್ಯದ್ದಾಗಿದೆ. ಸುಮಾರು 25 ಲಕ್ಷ ರೂ. ಮೌಲ್ಯದ ಕೇವಲ 200 ಗ್ರಾಂ ಎಂಡಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ತನಿಖೆ ಕೂಡ ಆರಂಭವಾಗಿದೆ
ತನಿಕೆ ತೀವ್ರಗೊಳ್ಳುತ್ತಿದ್ದಂತರ ತೆಲಂಗಾಣದಲ್ಲಿ ದೊಡ್ಡ ಪ್ರಮಾಣದ ಉತ್ಪಾದನಾ ಘಟಕದ ಮೇಳೆ ಮಾದಕ ವಸ್ತು ನಿಯಂತ್ರಣ ಅಧಿಕಾರಿಗಳ ತಂಡ ಘಟನೆಯ ಹಿಂದಿರುವ ವ್ಯಕ್ತಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ


13 ಆರೋಪಿಗಳ ಬಂಧನ, ಜಾಗತಿಕ ಸಂಪರ್ಕ ಪರಿಶೀಲನೆಯಲ್ಲಿದೆ/ಅಧಿಕಾರಿಗಳ ಪ್ರಕಾರ, ಪತ್ತೆಯಾದ ಜಾಲವು ಭಾರತ ಮತ್ತು ವಿದೇಶಗಳಲ್ಲಿ ಬಲವಾದ ಸಂಪರ್ಕ, ಸಂಬಂಧ ಹೊಂದಿದೆ.