Home ಜಿಲ್ಲೆ 11 ರಿಂದ 90ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ವ್ಯಸನಮುಕ್ತ ಭಾರತ ಅಭಿಯಾನ: ಬಿ.ಕೆ...

11 ರಿಂದ 90ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ವ್ಯಸನಮುಕ್ತ ಭಾರತ ಅಭಿಯಾನ: ಬಿ.ಕೆ ಪ್ರತಿಮಾ ಬಹೆನ್ ಜಿ

ಬೀದರ್:ಫೆ.8: ಈ ತಿಂಗಳ 11, 12, ಹಾಗೂ 13ರಂದು ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವ ವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ವತಿಯಿಂದ 90ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ವ್ಯಸನಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಜರುಗಲಿದೆ ಎಂದು ಕೇಂದ್ರದ ಸಂಚಾಲಕರಾದ ಬಿ.ಕೆ ಪ್ರತಿಮಾ ಬೆಹೆನ್ ಜಿ ತಿಳಿಸಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಫೆ.11ರಂದು ಮಧ್ಯಾಹ್ನ 2 ಗಂಟೆಗೆ ನಗರದ ಜನವಾಡ ರಸ್ತೆಯ ಜೆ.ಪಿ ನಗರದಲ್ಲಿನ ಬ್ರಹ್ಮಕುಮಾರಿಸ್ ಕೇಂದ್ರ ಪಾವನಧಾಮ ವತಿಯಿಂದ 12 ಕಾರುಗಳ ಮೇಲೆ 12 ಜ್ಯೋತಿಲಿರ್ಂಗಗಳ ಶೋಭಾಯಾತ್ರೆಯು ಇಡೀ ನಗರಾದ್ಯಂತ ಸಂಚರಿಸಿ ನಂತರ ನೆಹರು ಕ್ರೀಡಾಂಗಣದ ಎದುರಿರುವ ಸಾಯಿ ಸ್ಕೂಲ್ ಆವರಣಕ್ಕೆ ತಲುಪಿ ಸಾಯಂಕಾಲ 6 ಗಂಟೆಗೆ ಜೀವನೋತ್ಸವ ಪ್ರವಚನ ಮಾಲಿಕೆಯ ಉದ್ಘಾಟನಾ ಸಮಾರಂಭ ಜರುಗಲಿದೆ. ನವ ದೆಹಲಿಯ ರಾಷ್ಟ್ರೀಯ ಪ್ರೇರಣಾದಾಯಿ ಪ್ರವಚನಕಾರರಾದ ರಾಜಯೋಗಿ ಬಿ.ಕೆ ಪಿಯುಷ್ ಭಾಯಿಜಿ ಅವರಿಂದ ಜೀವನೋತ್ಸವ ಪ್ರವಚನ ಮಾಲೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮವನ್ನು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಸಮಾರಂಭ ಉದ್ಘಾಟಿಸಲಿದ್ದು, ತನ್ನ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ರಾಜಯೋಗಿ ಪಿಯುಷ್ ಭಾಯಿಜಿ ಅವರು ಮುಖ್ಯ ಪ್ರವಚನಕಾರರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಕೆ ಸಿ ವೀರಣ್ಣ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಗುರಮ್ಮ ಸಿದ್ದಾರೆಡ್ಡಿ, ಗುರುದ್ವಾರ ಪ್ರಬಂಧಕ ಸಮಿತಿಯ ಅಧ್ಯಕ್ಷರಾದ ಡಾ.ಬಲಬೀರ್ ಸಿಂಗ್ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಬೆಹೆನಜಿ ಕಾರ್ಯಕ್ರಮದ ವಿವರಣೆ ನೀಡಿದರು.
ಕೇಂದ್ರದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ಕನವರು ಈ ಸಂದರ್ಭದಲ್ಲಿ ಮಾತನಾಡಿ, ವ್ಯಸನ ಮುಕ್ತ ಭಾರತ ಅಭಿಯಾನದಡಿ ಫೆ.11, 12 ಹಾಗೂ 13 ಸೇರಿದಂತೆ ಈ ತಿಂಗಳ ಪಯರ್ಂತರ ಒಂದು ಆರೋಗ್ಯಕರ ಸುಖಿ ಸಂಪನ್ನ ವ್ಯಸನ ಮುಕ್ತ ಭಾರತ ದೇಶಕ್ಕಾಗಿ ಬ್ರಹ್ಮಕುಮಾರಿಸ್ ಮತ್ತು ಕೇಂದ್ರ ಸರ್ಕಾರದ ಸಯುಕ್ತಾಶ್ರಯದಡಿ ಸುಸಜ್ಜಿತ ಅಭಿಯಾನದ ಪ್ರಚಾರ ಕಾರ್ಯ ಕೈಗೊಂಡಿರುವ ವಾಹನದಲ್ಲಿ ದೊಡ್ಡ ಎ???ಡಿ ಸ್ಕ್ರೀನ್ ಹಾಗೂ ಮಲಗಿರುವ ಕುಂಭಕರ್ಣನ ಮೂರ್ತಿ ಎದ್ದು ಸಂದೇಶ ನೀಡುವ ವ್ಯವಸ್ಥೆ ಇದೆ. ಇದಲ್ಲದೆ ಎಲ್ಲಾ ಕಾಲೇಜು, ಕಚೇರಿ, ಸಂಘ -ಸಂಸ್ಥೆಗಳಲ್ಲಿ ಹಾಗೂ ನಮ್ಮ ಸ್ಥಳೀಯ ಕೇಂದ್ರಗಳಲ್ಲಿ ಸಹ ಈ ವ್ಯಸನ ಮುಕ್ತಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಾಗೆ ಈ ತಿಂಗಳ 16ರಿಂದ ಐದು ದಿನಗಳ ಕಾಲ ಬ್ರಹ್ಮಾಕುಮಾರಿಸ್ ಕೇಂದ್ರ ಪಾವನಧಾಮ ಆವರಣದಲ್ಲಿ ಸಾಯಂಕಾಲ 6:00 ಗಂಟೆಯಿಂದ 7 ಗಂಟೆ ವರೆಗೆ ರಾಜಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಗುರುದೇವಿ ಅಕ್ಕನವರು ವಿವರಿಸಿದರು.