ನಗರದ ಕಬ್ಬನ್ ಪಾರ್ಕ್‌ನ ಎನ್.ಜಿ.ಓ. ಹಾಲ್ ನಲ್ಲಿ ಇಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾನೂನು ಜಾಗೃತಿ ಕಾರ್ಯಾಗಾರವನ್ನು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪರವರು ಉದ್ಘಾಟಿಸಿದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೆಚ್. ಶಶಿಧರ್ ಶೆಟ್ಟಿ, ವಲಯ ನಿರ್ದೇಶಕ ಸಚಿನ್ ಘೋರ್ಪಡೆ, ಹೆಚ್.ಆರ್.ಎ.ಪಿ.ಎಫ್.ನ ಅಧ್ಯಕ್ಷ ಡಾ. ಮೋಹನ್ ರಾವ್ ನಲ್ವಾಡೆ ಉಪಸ್ಥಿತರಿದ್ದರು.