
ಕಲಬುರಗಿ: ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಮುಖಂಡರಾದ ಸುಭಾಷ ರಾಠೋಡ್, ಭೀಮರಾವ ಟಿ.ಟಿ., ರೇಣುಕಾ ಸಿಂಗೆ, ಶಿವಾನಂದ ಕೊರವಿ, ಧರ್ಮರಾಜ ಹೇರೂರ, ಶೇಖ್ ಸಮ್ರೀನ್, ಸಾಯಿರಾ ಬಾನು ಸೇರಿದಂತೆ ಮತ್ತಿತರರು ಇದ್ದರು.





















